ಬ್ರೇಕಿಂಗ್ ನ್ಯೂಸ್
08-03-22 01:29 pm Mangalore Correspondent ಕರಾವಳಿ
ಉಳ್ಳಾಲ, ಮಾ.8: ಖಾಸಗಿ ಜಾಗದಲ್ಲಿ ತೆರೆದ ಸ್ಥಿತಿಯಲ್ಲಿರುವ ಆಳ ಬಾವಿಯೊಂದಕ್ಕೆ ಮೇಯಲು ಬಂದ ಹಸು ಮತ್ತು ಕರು ಬಿದ್ದು ಒದ್ದಾಡಿದ ಪ್ರಸಂಗ ನಡೆದಿದ್ದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಮೂಕ ಪ್ರಾಣಿಗಳನ್ನ ಮೇಲಕ್ಕೆತ್ತಿ ಮರುಜೀವ ನೀಡಿದ ಘಟನೆ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿ ನಡೆದಿದೆ.
ಸೋಮೇಶ್ವರ ಗ್ರಾಮದ ಪಿಲಾರು ಮಹಾಲಕ್ಮೀ ಮಂದಿರದ ಬಳಿ ಮಹಮ್ಮದ್ ಹ್ಯಾರಿಸ್ ಎಂಬವರಿಗೆ ಸೇರಿದ ಖಾಲಿ ಜಮೀನಿನಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಹ್ಯಾರಿಸ್ ಅವರ ಖಾಲಿ ಜಮೀನಿಗೆ ಆವರಣ ಗೋಡೆಯನ್ನೂ ನಿರ್ಮಿಸಿಲ್ಲ. ಕಳೆದ ಹತ್ತು ವರುಷದಿಂದ ಜಮೀನಿನಲ್ಲಿರುವ ಆಳ ಬಾವಿಗೂ ಆವರಣ ಗೋಡೆ ನಿರ್ಮಿಸಿಲ್ಲ. ಬಾವಿಯ ಸುತ್ತಲೂ ಗಿಡ ಗಂಟೆಗಳು ಬೆಳೆದಿದ್ದು ಬಾವಿಯ ಇರುವಿಕೆ ಮೂಕ ಪ್ರಾಣಿ ಬಿಡಿ ಮನುಷ್ಯರಿಗೂ ತಿಳಿಯದಾಗಿತ್ತು. ಸೋಮವಾರ ಸಂಜೆ ಚೆಂಬುಗುಡ್ಡೆಯ ಸಾಹುಲ್ ಎಂಬವರ ಸಾಕು ದನ ಮತ್ತು ಅದರ ಕರು ಇಲ್ಲಿಗೆ ಮೇಯಲು ಬಂದು ಆಳ ಬಾವಿಯೊಳಗೆ ಬಿದ್ದಿದೆ. ಬಾವಿಯೊಳಗೆ ಕರು, ಹಸು ಬಿದ್ದುದನ್ನ ಹೊರಗಿದ್ದ ಕರುವು ಕಂಡಿದ್ದು ರೋದಿಸಲು ಆರಂಭಿಸಿದೆ. ಪಶುಗಳ ರೋದನದಿಂದ ಪರಿಸರ ವಾಸಿಗಳಿಗೆ ವಿಚಾರ ತಿಳಿದು ಅಗ್ನಿ ಶಾಮಕ ದಳವರನ್ನ ಸ್ಥಳಕ್ಕೆ ಕರೆಸಿದ್ದಾರೆ.




ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಸು ಮತ್ತು ಕರುವನ್ನ ಮೇಲಕ್ಕೆತ್ತಿದ್ದಾರೆ. ಹಸು ಸ್ವಲ್ಪ ಅಸ್ವಸ್ಥಗೊಂಡಿದ್ದು ಕರು ಆರೋಗ್ಯವಾಗಿದೆ. ಆವರಣ ಗೋಡೆ ಇಲ್ಲದ ಜಾಗದಲ್ಲಿ ಬಾವಿಯನ್ನ ತೆರೆದಿಟ್ಟು ಉದ್ಧಟತನ ತೋರುತ್ತಿರುವ ಮಹಮ್ಮದ್ ಹ್ಯಾರಿಸ್ ವಿರುದ್ಧ ಸಂಬಂಧಪಟ್ಟ ಸೋಮೇಶ್ವರ ಪುರಸಭಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಇಲ್ಲಿ ಮುಂದೆಯೂ ಅನಾಹುತಗಳು ನಡೆಯುವ ಸಾಧ್ಯತೆಗಳು ಇದೆ.
Cow and calf fall into the open well at Pillar in Mangalore fire service come to rescue. As the owners haven't created any fense or wall surrounding the well accidentally both Cow and Calf haven into the deep open well.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm