ಬ್ರೇಕಿಂಗ್ ನ್ಯೂಸ್
28-02-22 03:24 pm Mangalore Correspondent ಕರಾವಳಿ
Photo credits : Headline Karnataka
ಉಳ್ಳಾಲ, ಫೆ.28 : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯಕ್ಕೆ ನೀಡಿದ ಯೋಜನೆಗಳು ಎಂದಿಗೂ ಪ್ರಸ್ತುತ ಎಂದು ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ಬಿ.ಎಸ್ ಯಡಿಯೂರಪ್ಪ ಅವರ ಜನ್ಮದಿನದ ಸಂದರ್ಭದಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟು ದಂಪತಿ ಪುರಾಣ ಪ್ರಸಿದ್ಧ ಸೋಮೇಶ್ವರ ಸೋಮನಾಥ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ರವೀಂದ್ರ ಶೆಟ್ಟಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ಧಿಯಂತಹ ಜನಪರ ಯೋಜನೆಗಳು, ರೈತರ ಪರವಾದ ನಿಲುವು, ಹೋರಾಟಗಳನ್ನ ರಾಜ್ಯದ ಜನರು ಎಂದಿಗೂ ಮರೆಯುವಂತಿಲ್ಲ.

ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ಗಡಗಡ ನಡುಗುತ್ತಿತ್ತು. ಅವರಿಂದು ಅಧಿಕಾರದಲ್ಲಿಲ್ಲದಿದ್ದರೂ ಸಹ ಇಂದಿಗೂ ಅನೇಕರು ಯಡಿಯೂರಪ್ಪರೇ ಮುಖ್ಯಮಂತ್ರಿಗಳೆಂದು ಹೇಳುವಷ್ಟು ಜನಪ್ರಿಯತೆ ಪಡೆದಿದ್ದಾರೆ. ದೇವರು ಇನ್ನೂ ಅವರಿಗೆ ದೀರ್ಘಾಯುಷ್ಯ, ಆರೋಗ್ಯ ನೀಡಿ ಜನಸೇವೆ ಮಾಡುವ ಶಕ್ತಿ ನೀಡುವಂತೆ ವರ್ಷಂಪ್ರತಿ ಅವರ ಹುಟ್ಟು ದಿನದಂದು ಸೋಮನಾಥನಿಗೆ ವಿಶೇಷ ಪೂಜೆ ನೀಡುತ್ತಾ ಬಂದಿರುವುದಾಗಿ ಹೇಳಿದರು.


ಬಿಎಸ್ ವೈ ಹುಟ್ಟು ದಿನದ ಪ್ರಯುಕ್ತ ರವೀಂದ್ರ ಶೆಟ್ಟಿ ದಂಪತಿ ದೇರಳಕಟ್ಟೆ ಬೆಳ್ಮದ ಸೇವಾಶ್ರಮದ ವೃದ್ಧರಿಗೆ ವಸ್ತ್ರ , ಫಲಗಳನ್ನು ನೀಡಿ ಸಂಭ್ರಮಾಚರಿಸಿದರು. ಆಶ್ರಮವಾಸಿ ವೃದ್ಧರು ಕುಣಿದು ಸಂಭ್ರಮಾಚರಿಸಿದರು. ಜತೆಗೆ ಬಿಎಸ್ ವೈ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.

ರವೀಂದ್ರ ಶೆಟ್ಟಿ ಉಳಿದೊಟ್ಟು ಅವರ ಧರ್ಮಪತ್ನಿ ಸೌಮ್ಯ ಕೆ .ಆರ್. ಶೆಟ್ಟಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ಬಿಜೆಪಿ ಪ್ರಮುಖರಾದ ಚಂದ್ರಶೇಖರ ಉಚ್ಚಿಲ್, ರವಿಶಂಕರ್ ಸೋಮೇಶ್ವರ, ಹೇಮಂತ್ ಶೆಟ್ಟಿ, ಜೀವನ್ ತೊಕ್ಕೊಟ್ಟು, ಆನಂದ ಶೆಟ್ಟಿ, ಸಚಿನ್ ಮೋರೆ, ರಾಕೇಶ್ ಉಲ್ಲೋಡಿ, ಜಯರಾಮ ಭಂಡಾರಿ, ಪ್ರಕಾಶ್ ಸಿಂಫೋಣಿ, ದೀಕ್ಷಿತ್, ಸೇವಾಶ್ರಮದ ಟ್ರಸ್ಟಿ ಜಿ.ಆರ್ ಶೆಟ್ಟಿ, ಗೀತಾ ಆರ್ ಶೆಟ್ಟಿ, ಶೀಲಾ ಶೆಟ್ಟಿ ಮೊದಲಾದವರು ಜತೆಗಿದ್ದರು.
Mangalore Special Pooja offered at Someshwara temple for the Birthday of B S Yediyurappa by Ravindra Shetty.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 07:50 pm
HK News Staffer
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm