ಬ್ರೇಕಿಂಗ್ ನ್ಯೂಸ್
25-02-22 04:30 pm Mangalore Correspondent ಕರಾವಳಿ
ಮಂಗಳೂರು, ಫೆ.25 : ಹಿಜಾಬ್ ಚಿಂತೆ ಬಿಡಿ. ಧರ್ಮಕ್ಕಿಂತ ಶಿಕ್ಷಣ ಮುಖ್ಯ ಎಂದು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಲಹೆ ಮಾಡಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರಯ್ಯಾ ಅಂಜುಮ್ ಅವರಿಗೆ ಅಪರಿಚಿತರು ಜೀವ ಬೆದರಿಕೆಯೊಡ್ಡಿದ್ದು ಈ ಬಗ್ಗೆ ಸುರೈಯ್ಯಾ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಹಿಜಾಬ್ ವಿವಾದ ಎದ್ದ ಬೆನ್ನಲ್ಲೇ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ 'ಧರ್ಮಕ್ಕಿಂತ ದೇಶ ಮೊದಲು, ಶಿಕ್ಷಣವೇ ನಮಗೆ ಮುಖ್ಯವಾಗಬೇಕು. ಧರ್ಮದ ಕಟ್ಟುಪಾಡು ಮನೆಯಲ್ಲಿ ಮಾತ್ರ ಇರಲಿ. ಶಾಲೆಗಳಲ್ಲಿ ಸಮವಸ್ತ್ರ ಧರಿಸಿ, ಶಿಕ್ಷಣ ಪಡೆಯಿರಿ. ಯಾರದೋ ದಾಳಕ್ಕೆ ಬಲಿಯಾಗಬೇಡಿ ಎಂದು ಸುರೈಯಾ ಫೇಸ್ಬುಕ್ ಲೈವ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ವಿವಾದದ ಹಿಂದೆ ಎಸ್ಡಿಪಿಐ ಇದ್ದು ಅವರ ತಂತ್ರಕ್ಕೆ ದಾಳವಾಗಿ ಶಿಕ್ಷಣ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದರು.
)
ಆದರೆ ಸುರೈಯಾ ಈ ಮಾತು ಹೇಳಿದ್ದು ಮುಸ್ಲಿಂ ಮೂಲಭೂತವಾದಿಗಳಿಗೆ ಹಿಡಿಸಿರಲಿಲ್ಲ. ಎಸ್ಡಿಪಿಐ ನಾಯಕರು ಟಿವಿ ಸಂವಾದದಲ್ಲಿ ಸುರೈಯಾಗೆ ಪ್ರಶ್ನೆ ಮಾಡಿದ್ದಲ್ಲದೆ, ಇದು ಕಾಂಗ್ರೆಸ್ ಹೇಳಿಕೆಯೇ ಎಂದು ಪ್ರಶ್ನೆ ಮಾಡಿದ್ದರು. ಅದೇ ಸಂದರ್ಭದಲ್ಲಿ ತನಗೆ ಅಪರಿಚಿತರಿಂದ, ವಿದೇಶಗಳಿಂದ ನಿರಂತರ ಫೋನ್ ಕರೆ ಬರುತ್ತಿರುವುದಾಗಿ ಟಿವಿ ಡಿಬೇಟ್ ನಲ್ಲಿ ಸುರೈಯಾ ಹೇಳಿಕೊಂಡಿದ್ದರು. ಇದೀಗ ಈ ಬಗ್ಗೆ ಪೊಲೀಸ್ ದೂರು ನೀಡಿದ್ದು ಅಪರಿಚಿತರು ಫೋನ್, ಲೈವ್ ವಿಡಿಯೊ ಮುಖಾಂತರ ಮಾನಕ್ಕೆ ಕುಂದು ಉಂಟಾಗುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಮಾನಕ್ಕೆ ಕುಂದು ಉಂಟಾಗುವ ರೀತಿಯಲ್ಲಿ ಅಶ್ಲೀಲ ಚಿತ್ರಗಳು ಮತ್ತು ಸಂದೇಶಗಳನ್ನು ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ಗಳಲ್ಲಿ ಕಳಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ನಮ್ಮ ಧರ್ಮದ ಆಚರಣೆಗಳು ಮನೆಯಲ್ಲಿ ಇರಬೇಕೇ ವಿನಃ, ಬೀದಿಯಲ್ಲಿ ಇರೋದಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಣ ಮುಖ್ಯವೇ ಹೊರತು ಹಿಜಾಬ್ ಅಲ್ಲ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರಯ್ಯಾ ಅಂಜುಮ್ ಹೇಳಿದ್ದರು. ಅಲ್ಲದೇ, ಪ್ರಸಕ್ತ ಉದ್ಭವವಾಗಿರುವ ಹಿಜಾಬ್ ಮತ್ತು ಕೇಸರಿ ವಿವಾದವು ಪಿಎಫ್‌ಐ ಮತ್ತು ಆರೆಸ್ಸೆಸ್ ಷಡ್ಯಂತ್ರ. ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗಬಾರದು. ಹಿಜಾಬ್ ಹೆಸರಿನಲ್ಲಿ ಶಾಲೆಯ ಹೊರಗೆ, ಬೀದಿಯಲ್ಲಿ ನಿಂತರೆ ನಮಗೇ ನಷ್ಟ ಎಂಬುದನ್ನು ವಿದ್ಯಾರ್ಥಿನಿಯರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.
Surayya Anjum, a Congress leader who issued a statement relating to wearing of the HIjabs reportedly has received threats to her life. She has registered a complaint in the women's police station in the city relating to the incident.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm