ಬ್ರೇಕಿಂಗ್ ನ್ಯೂಸ್
23-02-22 02:38 pm Mangalore Correspondent ಕರಾವಳಿ
ಉಳ್ಳಾಲ, ಫೆ.23 : ಪ್ರಿಯಕರನೊಂದಿಗೆ ಮೊಬೈಲ್ ಸಂಭಾಷಣೆಯಲ್ಲಿದ್ದ ವೇಳೆಯೇ ನೇಣಿಗೆ ಕೊರಳೊಡ್ಡಿದ ಯುವತಿಯೋರ್ವಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕುಂಪಲ ಬಲ್ಯ ಎಂಬಲ್ಲಿ ನಡೆದಿದೆ.
ಕುಂಪಲ ಬಲ್ಯ ನಿವಾಸಿ ಹರ್ಷಿತ (21) ಮೃತ ದುರ್ದೈವಿ. ಹರ್ಷಿತ ನಿನ್ನೆ ಮಧ್ಯಾಹ್ನ ತನ್ನ ಬಲ್ಯದ ಮನೆಯೊಳಗೆ ಪ್ರಿಯಕರನೊಂದಿಗೆ ಮೊಬೈಲ್ ಫೋನಲ್ಲಿ ಮಾತನಾಡುತ್ತಳೇ ಸಿಲಿಂಗ್ ಫ್ಯಾನಿಗೆ ಚೂಡಿದಾರ್ ಶಾಲಿನ ನೇಣು ಹಾಕಿ ಕೊರಳೊಡ್ಡಿದ್ದಾಳೆ. ಹತ್ತಿರದವನೇ ಆದ ಬಲ್ಯ ಬ್ಯಾಂಕ್ ಕಾಲನಿ ನಿವಾಸಿಯ ಪ್ರಿಯಕರ ತಕ್ಷಣ ಆಕೆಯನ್ನ ನೇಣು ಕುಣಿಕೆಯಿಂದ ಇಳಿಸಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ.
ಮೃತ ಹರ್ಷಿತ ಮತ್ತು ಪ್ರಿಯಕರನ ಮಧ್ಯೆ ವಿರಸ ಮೂಡಿದ್ದು ಈ ಬಗ್ಗೆನೇ ಫೋನಲ್ಲಿ ಮಾತನಾಡುತ್ತಲೇ ನೇಣು ಬಿಗಿದಿರುವುದಾಗಿ ಹೇಳಲಾಗುತ್ತಿದ್ದು, ಸಾವಿನ ಬಗ್ಗೆ ಹಲವು ಅನುಮಾನಗಳೂ ಇದ್ದು ಪೊಲೀಸರು ಪ್ರಿಯಕರನ ವಿಚಾರಣೆ ನಡೆಸುತ್ತಿದ್ದಾರೆ.
ಮೃತ ಹರ್ಷಿತ ಪೋಷಕರಿಗೆ ಏಕೈಕ ಮಗಳಾಗಿದ್ದು ಆಕೆಯ ತಂದೆ ಗಂಗಾಧರ್ ಗಾಣಿಗ ಅವರು ಐದು ವರುಷಗಳ ಹಿಂದಷ್ಟೆ ಕನ್ನಡಿ(ಕಂದಡಿ) ಹಾವು ಕಡಿದು ಮೃತ ಪಟ್ಟಿದ್ದರು. ಹರ್ಷಿತ ತಾಯಿ ಗೀತಾ ಅವರನ್ನ ಅಗಲಿದ್ದಾಳೆ. ಕಳೆದ ಒಂದು ವರುಷದಿಂದ ಕುಂಪಲದಲ್ಲಿ ರೂಪದರ್ಶಿ ಪ್ರೇಕ್ಷಾಳಿಂದ ತೊಡಗಿ ಸರಣಿಯಾಗಿ ಅಸಹಜ ಸಾವುಗಳು ಸಂಭವಿಸುತ್ತಿದ್ದು ಇದೀಗ ಹರ್ಷಿತಳ ಆತ್ಮಹತ್ಯೆಯೂ ಆ ಸರದಿಗೆ ಸೇರಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.
Mangalore 21 year old girl from Kumpala, Ullal commits suicide while talking to her boyfriend over phone call. The deceased has been identified as Harshitha. She was rushed to the hospital but she breathed her lost after failure of medical treatment.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm