ಬ್ರೇಕಿಂಗ್ ನ್ಯೂಸ್
19-02-22 04:31 pm Mangalore Correspondent ಕರಾವಳಿ
ಮಂಗಳೂರು, ಫೆ.19 : ಸದನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸಿಗರ ಸ್ಥಿತಿ ಊರಿಗೆ ಮನುಷ್ಯರಲ್ಲ ಸ್ಮಶಾನಕ್ಕೆ ಹೆಣವೂ ಅಲ್ಲ ಎಂಬಂತದ್ದಾಗಿದೆ. ಹಿಜಾಬ್ ಪರವಾಗಿ ನಾವಿದ್ದೇವೆಂದು ಹೇಳಲು ಡಿಕೆಶಿ ಬಿಡುತ್ತಿಲ್ಲ. ಹಿಂದೂ ಪರ ಇದ್ದೇವೆ ಅನ್ನಲು ಸಿದ್ದರಾಮಯ್ಯ ಬಿಡುತ್ತಿಲ್ಲ. ಹೀಗಾಗಿ ಸದನದಲ್ಲಿ ನಡೆಸುವ ಧರಣಿ ಸಿದ್ದರಾಮಯ್ಯ - ಡಿಕೆಶಿ ನಡುವಿನ ಹೋರಾಟ ಅಷ್ಟೇ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಅಹೋರಾತ್ರಿ ಧರಣಿ ಬಗ್ಗೆ ಮಾತನಾಡಿದ ಅವರು, ಹಿಜಾಬ್ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಯಾಕೆ ಪ್ರಸ್ತಾವ ಆಗುತ್ತಿಲ್ಲ. ಕಾಂಗ್ರೆಸ್ ನವರು ಇದನ್ನು ಮಾಡಬೇಕಿತ್ತಲ್ಲ. ವಿಧಾನಸಭೆ ಅಧಿವೇಶನ ಜನರ ಸಮಸ್ಯೆ ಪರಿಹಾರಕ್ಕೆ ನಡೆಯೋದು. ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗಬೇಕು. ಹಿಜಾಬ್ ಗಲಾಟೆಯಿಂದಾಗಿ ಶಿಕ್ಷಣಕ್ಕೆ ಸಮಸ್ಯೆಯಾಗಿದೆ. ಈ ಬಗ್ಗೆ ಕಾಳಜಿ ಇರುತ್ತಿದ್ದರೆ ಕಾಂಗ್ರೆಸ್ ನವರು ಹೋರಾಟ ಬಿಟ್ಟು ಸದನದಲ್ಲಿ ಚರ್ಚೆ ನಡೆಸುತ್ತಿದ್ದರು ಎಂದು ಹೇಳಿದರು.
ಕಾಂಗ್ರೆಸ್ ನವರಿಗೆ ಕಾಳಜಿ ಇದ್ದಲ್ಲಿ ಹಿಜಾಬ್, ಕೇಸರಿ ಬಗ್ಗೆ ಚರ್ಚೆ ಎತ್ತಬೇಕಿತ್ತಲ್ಲ. ಆದರೆ ಈ ಬಗ್ಗೆ ಚರ್ಚೆ ಮಾಡಿದರೆ ಓಟು ಹೋಗುತ್ತದೆ ಎಂಬ ಭೀತಿಯಲ್ಲಿ ಅವರು ಚರ್ಚೆ ಎತ್ತುತ್ತಿಲ್ಲ. ಓಟು ಕಳೆದುಕೊಳ್ಳುವ ಕೆಲಸ ಮಾಡಬಾರದೆನ್ನುವ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಈಶ್ವರಪ್ಪನವರನ್ನು ಹಿಡಿದುಕೊಂಡಿದ್ದಾರೆ. ಈ ಧರಣಿಯಲ್ಲಿ ಬಡವರ ಪ್ರಶ್ನೆ ಏನು ಬಂತು. ಬರೀ ಸ್ವಾರ್ಥವಿದೆಯಷ್ಟೇ ಈಶ್ವರಪ್ಪ - ಡಿಕೆಶಿ - ಸಿದ್ದರಾಮಯ್ಯ ಬಿಟ್ಟು ಬೇರೇನು ಇಲ್ಲ. ಈ ಮೂವರಿಗೋಸ್ಕರ ಸದನ ನಿಲ್ಲುತ್ತಿದೆ.
ಸದನ ನಡೆಯಲು ದಿನಕ್ಕೆ ಒಂದು ಕೋಟಿ ರೂ. ಖರ್ಚು ಬೀಳುತ್ತದೆ. ಜನರ ದುಡ್ಡು ತೆಗೆದುಕೊಂಡು ಸದನದಲ್ಲಿ ಆರಾಮದಲ್ಲಿ ನಿದ್ದೆ ಹೊಡೆದರೆ ಏನು ಅರ್ಥ ಬರುತ್ತದೆ. ಇದು ಜನರಿಗೆ ಮೋಸ ಮಾಡಿದಂತೆ. ಜನರ ದುಡ್ಡು ತೆಗೆದುಕೊಂಡು, ಟಿಎ- ಡಿಎ ತೆಗೆದುಕೊಂಡು ಅವರ ವಿಷಯವನ್ನೇ ಸದನದಲ್ಲಿ ಎತ್ತದೆ ತೋಳು ಏರಿಸೋದು, ಬಡಿದಾಡೋದು ಮಾಡಿದರೆ ಏನು ಬಂತು. ಕೆಂಗಲ್ ಹನುಮಂತಯ್ಯನವರು ವಿಧಾನಸಭೆಯನ್ನು ಬಡವರಿಗೋಸ್ಕರ ಕಟ್ಟಿಸಿರೋದು ಹೊರತು ಕುಸ್ತಿ ಆಡೋಕ್ಕಲ್ಲ. ಆದ್ದರಿಂದ ಹಿಜಾಬ್ ಬಗ್ಗೆ, ಕೇಸರಿ ಶಾಲು ಬಗ್ಗೆ ಕಾಂಗ್ರೆಸ್ ನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.
ಮಕ್ಕಳು ಶಾಲೆಗೆ ಹೋಗೋದು ವಿದ್ಯಾಭ್ಯಾಸಕ್ಕೆ ಹೊರತು ಮತ ಪ್ರಚಾರಕ್ಕಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಹಿಜಾಬ್ ಕುರಿತು ಪಟ್ಟು ಹಿಡಿಯುವುದನ್ನು ಬಿಟ್ಟು ಬಿಡಬೇಕು ಎಂದ ಅಶೋಕ್, ವಿಧಾನಸಭೆಗೆ ಅಗೌರವ ಸೂಚಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಜನರು ಈಗಾಗಲೇ ಕಾಂಗ್ರೆಸ್ ನವರನ್ನು ದೇಶದಿಂದ ಓಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಿಂದಲೂ ಓಡಿಸುತ್ತಾರೆ ಎಂದು ಹೇಳಿದ್ದಾರೆ.
Revenue Minister R. Ashok said in Mangaluru on February 19 that the Congress should clear state its stand on the ongoing row over dress code in educational institutions. Speaking to mediapersons on the sidelines of launching a special drive to clear over 82,000 pending files in 45 government offices in Dakshina Kannada district, the Minister said that the Congress is not vocal on some students wearing hijab and saffron shawls in colleges.
13-09-25 04:31 pm
HK News Desk
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm