ಬ್ರೇಕಿಂಗ್ ನ್ಯೂಸ್
13-02-22 07:42 pm Mangalore Correspondent ಕರಾವಳಿ
Photo credits : Headline Karnataka
ಉಳ್ಳಾಲ, ಫೆ.13 : ಮಾನಸಿಕ ಖಿನ್ನತೆಗೊಳಗಾಗಿದ್ದ ಯುವಕನೋರ್ವ ಸೋಮೇಶ್ವರ ಕಡಲಿಗೆ ಜಿಗಿದು ಆತ್ಮ ಹತ್ಯೆಗೈದ ಘಟನೆ ಭಾನುವಾರ ನಡೆದಿದೆ.
ಉಚ್ಚಿಲ ಸಂಕೊಳಿಗೆ ನಿವಾಸಿ ಭಾಸ್ಕರ್ ನಾಯಕ್ (32) ಮೃತ ಯುವಕ. ಗೆಟ್ ಅಪ್ ಸಾಫ್ಟ್ ಡ್ರಿಂಕ್ಸ್ ಸಂಸ್ಥೆಯಲ್ಲಿ ವಾಹನ ಚಾಲಕನಾಗಿದ್ದ ಭಾಸ್ಕರ್ ಶನಿವಾರ ರಾತ್ರಿಯಿಂದ ಮನೆಯಿಂದ ನಾಪತ್ತೆಯಾಗಿದ್ದ. ಭಾಸ್ಕರನಿಗೆ ಆತನ ಅಣ್ಣ ಲೋಕೇಶ್ ನಾಯಕ್ ತಾನು ಬ್ಯಾಂಕಲ್ಲಿ ಅಡವಿಟ್ಟ ಚಿನ್ನವನ್ನು ಬಿಡಿಸಿ ತರಲು 20,000 ರೂಪಾಯಿಗಳನ್ನ ನೀಡಿದ್ದನಂತೆ. ಆದರೆ ರಾತ್ರಿಯಿಡೀ ಭಾಸ್ಕರ್ ಸುಳಿವೇ ಇಲ್ಲದ ಕಾರಣ ಮನೆ ಮಂದಿ ಗಾಬರಿಗೊಂಡು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂದು ಬೆಳಗ್ಗೆ ಮನೆಯ ಮಂಚದ ದಿಂಬಿನ ಅಡಿಯಲ್ಲಿ 20,000 ರೂಪಾಯಿ ಪತ್ತೆಯಾಗಿದೆ.


ಇಂದು ಸಂಜೆ ಭಾಸ್ಕರ್ ಮೃತದೇಹ ಸೋಮೇಶ್ವರ ರುದ್ರಪಾದೆಯ ಕಡಲ ತೀರದಲ್ಲಿ ತೇಲುತ್ತಿದ್ದು ಕರಾವಳಿ ಕಾವಲು ಪಡೆಯ ಜೀವ ರಕ್ಷಕ ಸಿಬ್ಬಂದಿಗಳಾದ ಅಶೋಕ್ ಸೋಮೇಶ್ವರ, ಕಿರಣ್ ಆಂಟನಿ ಅವರು ಮೃತದೇಹವನ್ನ ಎಳೆದು ತೀರಕ್ಕೆ ಹಾಕಿದ್ದಾರೆ. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತ ಭಾಸ್ಕರ್ ಅವಿವಾಹಿತರಾಗಿದ್ದು ತಾಯಿ, ಅಣ್ಣನನ್ನ ಅಗಲಿದ್ದಾರೆ. ಆತ್ಮಹತ್ಯೆಗೇನು ಕಾರಣ ಅನ್ನೋದು ತಿಳಿದುಬಂದಿಲ್ಲ. ಕೆಲವು ಸಮಯದಿಂದ ಮಾನಸಿಕವಾಗಿ ಖಿನ್ನನಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
Mangalore 32 year old man commits suicide by drowning in sea at Someshwara, depression suspected. The deceased has been identified as Bhaskar Nayak a resident of Uchila.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm