ಬ್ರೇಕಿಂಗ್ ನ್ಯೂಸ್
12-02-22 01:35 pm Mangalore Correspondent ಕರಾವಳಿ
ಬೆಳ್ತಂಗಡಿ, ಫೆ.12 : ಮರಳು ಮಾಫಿಯಾದಲ್ಲಿ ಕಮಿಷನ್ ಪಡೆದ ಆರೋಪದಲ್ಲಿ ಆಣೆ ಪ್ರಮಾಣದ ಸವಾಲು ಸ್ವೀಕರಿಸಿದ್ದ ಶಾಸಕ ಹರತಾಳು ಹಾಲಪ್ಪ ತಮ್ಮ ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿದ್ದಾರೆ.
ಆರೋಪ ವಿಚಾರದಲ್ಲಿ ಆಣೆ ಪ್ರಮಾಣ ಮಾಡಲು ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಇಬ್ಬರು ಕೂಡ ಇಂದು ಧರ್ಮಸ್ಥಳಕ್ಕೆ ಬರುತ್ತಾರೆ ಎನ್ನಲಾಗಿತ್ತು. ಇಂದು ಬೆಳಗ್ಗೆ ಶಾಸಕ ಹರತಾಳು ಹಾಲಪ್ಪ ಮಾತ್ರ ಧರ್ಮಸ್ಥಳಕ್ಕೆ ಬಂದಿದ್ದು ಮಂಜುನಾಥನ ದರ್ಶನ ಪಡೆದು ಆಣೆ ಪ್ರಮಾಣ ಮಾಡಿದ್ದಾರೆ. ಬೆಂಬಲಿಗರ ಜೊತೆ ದೇವರ ದರ್ಶನ ಪಡೆದು ದೇವರ ಎದುರೇ ಆಣೆ ಮಾಡಿದ್ದಾಗಿ ಶಾಸಕ ಹಾಲಪ್ಪ ಹೇಳಿಕೊಂಡಿದ್ದಾರೆ. ಆದರೆ ಬೇಳೂರು ಗೋಪಾಲಕೃಷ್ಣ ದೇವಸ್ಥಾನಕ್ಕೆ ಬರದೆ ದೂರ ಉಳಿದಿದ್ದಾರೆ.

ಮರಳು ಮಾಫಿಯಾದಿಂದ ತಾನಾಗಲಿ, ತನ್ನ ಸಂಗಡಿಗರಾಗಲಿ ಕಮಿಷನ್ ಪಡೆದಿಲ್ಲ. ಆದರೆ ಬೇಳೂರು ಗೋಪಾಲಕೃಷ್ಣ ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಆಬಳಿಕ ನನ್ನ ಜೊತೆಗಿರುವ ವಿನಾಯಕ ರಾವ್ ಮತ್ತು ಬಿ.ಟಿ ರವೀಂದ್ರ ಬಗ್ಗೆ ಆರೋಪ ಮಾಡಿದ್ದರು. ಈಗ ನಾವು ಎಲ್ಲ ಜೊತೆಗೆ ಬಂದು ಆಣೆ ಮಾಡಿ ಹೇಳಿದ್ದೇವೆ. ಮಾಜಿ ಶಾಸಕರ ಸವಾಲನ್ನು ಸ್ವೀಕರಿಸಿ ಫೆ.12 ರಂದು ಧರ್ಮಸ್ಥಳಕ್ಕೆ ತೆರಳುತ್ತಿರುವುದಾಗಿ ಮಾಧ್ಯಮದಲ್ಲಿ ಪ್ರಕಟಣೆ ಕೊಟ್ಟಿದ್ದೆ. ಆದರೆ ನನಗೆ ಆಣೆ ಪ್ರಮಾಣದ ಸವಾಲು ಹಾಕಿ ಅವರು ಈಗ ಪಲಾಯನ ಮಾಡುತ್ತಿದ್ದಾರೆ. ಈಗ ಗೋವಾ ಚುನಾವಣೆಯ ಸುಬೂಬು ಹೇಳ್ತಾ ಇದ್ದಾರೆ. ಬೇಳೂರು ಗೋಪಾಲಕೃಷ್ಣ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ನನಗೆ ಸವಾಲು ಹಾಕಿದವರು ಈಗ ಧರ್ಮಸ್ಥಳಕ್ಕೆ ಬರಲಿ. ದೇವರೆದುರು ನಾನು ಆಣೆ ಪ್ರಮಾಣ ಮಾಡಿದ್ದೇನೆ. ಅವರೂ ಬಂದು ಮಾಡಲಿ ಎಂದು ಹರತಾಳು ಹಾಲಪ್ಪ ಹೇಳಿದ್ದಾರೆ.
Sand Commision, Halappa Harathalu visits Dharmasthala temple by taking oath as he challenged of doing it.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm