ಬ್ರೇಕಿಂಗ್ ನ್ಯೂಸ್
02-02-22 10:10 pm Mangalore Correspondent ಕರಾವಳಿ
ಮಂಗಳೂರು, ಫೆ.2 : ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನದ ಅವಧಿ ಇದೇ ಫೆಬ್ರವರಿ ಅಂತ್ಯಕ್ಕೆ ಕೊನೆಗೊಳ್ಳುತ್ತದೆ. ಆನಂತರ, ಹೊಸ ಮೇಯರ್ ಯಾರೆಂದು ಚುನಾವಣೆ ಮಾಡಬೇಕಾಗುತ್ತದೆ. ಪಾಲಿಕೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಇರುವುದರಿಂದ ಬಿಜೆಪಿ ಸದಸ್ಯರೇ ಮೇಯರ್ ಆಗಬೇಕು. ಆದರೆ, ಮೇಯರ್ ಗದ್ದುಗೆ ಏರಲು ಬಿಜೆಪಿ ಕಾರ್ಪೊರೇಟರುಗಳ ಮಧ್ಯೆ ಪೈಪೋಟಿ ನಡೆದಿದೆ. ಮಾರ್ಚ್ 2ರಂದು ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ.
ಮೂರು ಅವಧಿಗೆ ಕಾರ್ಪೊರೇಟರ್ ಆಗಿರುವ, ಈಗ ಕೊಡಿಯಾಲಬೈಲ್ ವಾರ್ಡ್ ಪ್ರತಿನಿಧಿಸುವ ಸುಧೀರ್ ಶೆಟ್ಟಿ ಕಣ್ಣೂರು ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ. ಉಳಿದಂತೆ, ಮಂಗಳೂರು ಉತ್ತರ ಕ್ಷೇತ್ರದ ಶರತ್ ಕುಮಾರ್, ಜಯಾನಂದ ಅಂಚನ್ ಸೇರಿದಂತೆ ಕೆಲವರು ರೇಸಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಮಹಿಳೆಯರಲ್ಲಿ ಹೆಚ್ಚಿನವರು ಹೊಸಬರಾಗಿರುವುದರಿಂದ ಮೇಯರ್ ಸ್ಥಾನಕ್ಕೇರಬಲ್ಲ ಹೆಸರುಗಳು ಮುಂದಿನ ಸ್ಥಾನದಲ್ಲಿ ಇಲ್ಲ. ಮೇಯರ್ ಸ್ಥಾನ ಸಾಮಾನ್ಯ ವಿಭಾಗಕ್ಕೆ ಇರುವುದರಿಂದ ಯಾವುದೇ ವ್ಯಕ್ತಿಗೆ ಸ್ಥಾನ ಅಲಂಕರಿಸಬಹುದು. ಹಾಗಾಗಿ ಎರಡು ಬಾರಿ ಆಯ್ಕೆಯಾದವರೆಲ್ಲ ಮೇಯರ್ ಸ್ಥಾನದ ಆಕಾಂಕ್ಷಿಗಳೇ.
ಆದರೆ, ಈ ಮಧ್ಯೆ ಸುಧೀರ್ ಶೆಟ್ಟಿ ಕಣ್ಣೂರು ಒಂದಷ್ಟು ಕಾರ್ಪೊರೇಟರುಗಳನ್ನು ಕರೆದು ಗಡದ್ದು ಊಟ ಕೊಟ್ಟಿದ್ದಾರೆ. ತನ್ನ ಬರ್ತ್ ಡೇ ಹೆಸರಲ್ಲಿ ಕಾರ್ಪೊರೇಟರುಗಳಿಗೆ ಇದೇ ಸೋಮವಾರ ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಬಾಡೂಟ ಕೊಡಿಸಿದ್ದು, ಮೇಯರ್ ಸ್ಥಾನಕ್ಕಾಗಿ ಲಾಬಿ ನಡೆಸಿರುವ ಯತ್ನವೇ ಅನ್ನುವ ಮಾತು ಬಿಜೆಪಿ ಒಳಗಡೆಯೇ ಕೇಳಿಬಂದಿದೆ. ಇವರು ಬರ್ತ್ ಡೇ ಹೆಸರಲ್ಲಿ ಈ ಹಿಂದೆ ಊಟ ಕೊಟ್ಟವರಲ್ಲ. ಈ ಬಾರಿ ಮೇಯರ್ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಸುಧೀರ್ ಶೆಟ್ಟಿ ಪಾಲಿಕೆಯ ಬಿಜೆಪಿ ಸದಸ್ಯರನ್ನು ಕರೆಸಿ ಊಟ ಕೊಡಿಸಿದ್ದು ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಆಡಳಿತದ ಮೊದಲ ಅವಧಿಯಲ್ಲಿ ಸೀನಿಯರ್ ಮತ್ತು ಹಿಂದುಳಿದ ವರ್ಗ ಎಂಬ ಕಾರಣಕ್ಕೆ ದಿವಾಕರ್ ಪಾಂಡೇಶ್ವರ ಮೇಯರ್ ಆಗಿದ್ದರು. ಆನಂತರ ಸಾಮಾನ್ಯ ವರ್ಗದ ಮೀಸಲಾತಿ ಇದ್ದುದರಿಂದ ಸಹಜವಾಗಿಯೇ ಸೀನಿಯರ್ ಸಜ್ಜನ ವ್ಯಕ್ತಿ ಎನಿಸಿರುವ ಪ್ರೇಮಾನಂದ ಶೆಟ್ಟಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಈ ಬಾರಿ ಯಾರು ಎಂಬ ಪ್ರಶ್ನೆ ಎದುರಾಗಿದ್ದು, ತಿಂಗಳು ಇರುವಾಗಲೇ ಮೇಯರ್ ಸ್ಥಾನ ಅಲಂಕರಿಸಲು ಪೈಪೋಟಿ ಆರಂಭಗೊಂಡಿದೆ. ಸುಧೀರ್ ಶೆಟ್ಟಿ ತನ್ನ ಹೆಸರನ್ನೇ ಉಳಿದವರು ಶಿಫಾರಸು ಮಾಡಲಿ ಎಂದು ಬಾಡೂಟ ಕೊಡಿಸಿದ್ದಾರೆಯೇ ಗೊತ್ತಿಲ್ಲ. ಊಟ ಕೊಡಿಸಿದ್ದರ ಫೋಟೋ ಅಂತೂ ಹೆಡ್ ಲೈನ್ ಕರ್ನಾಟಕಕ್ಕೆ ತಲುಪಿದೆ. ಆದರೆ ಬಿಜೆಪಿಯ 44 ಮಂದಿಯೂ ಪಾರ್ಟಿಯಲ್ಲಿ ಪಾಲ್ಗೊಂಡಿರಲಿಲ್ಲ. 25ರಷ್ಟು ಮಂದಿ ಪಾಲು ಪಡೆದಿದ್ದು ಫೋಟೋದಲ್ಲಿ ಕಾಣುತ್ತಿದೆ.
ಉಳಿದಂತೆ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಕಾರ್ಪೊರೇಟರುಗಳಿದ್ದಾರೆ. ಕಳೆದ ಬಾರಿಯೂ ಉತ್ತರದ ವ್ಯಕ್ತಿಗೆ ಮೇಯರ್ ಸ್ಥಾನ ನೀಡಬೇಕು ಎಂಬ ಕೂಗು ಇತ್ತು. ಆದರೆ ಎರಡು ಬಾರಿಯೂ ದಕ್ಷಿಣದ ವ್ಯಕ್ತಿಗಳೇ ಮೇಯರ್ ಆಗಿದ್ದಾರೆ. ಶಾಸಕ ಭರತ್ ಶೆಟ್ಟಿ ಮೂಲಕ ಕೆಲವರು ಆ ರೀತಿಯ ಒತ್ತಡವನ್ನೂ ಹಾಕುತ್ತಿದ್ದಾರೆ. ಮಂಗಳೂರು ಉತ್ತರದಲ್ಲಿ 23, ದಕ್ಷಿಣದಲ್ಲಿ 21 ಬಿಜೆಪಿ ಕಾರ್ಪೊರೇಟರ್ ಇದ್ದಾರೆ. ಕಳೆದ ಬಾರಿ ಪಾಲಿಕೆಗೆ ಚುನಾವಣೆ ನಡೆದಾಗ, ಎರಡು ಕ್ಷೇತ್ರಗಳ ಪೈಕಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹೆಚ್ಚು ಮಂದಿ ಬಿಜೆಪಿ ಸದಸ್ಯರು ಗೆದ್ದಿದ್ದರು. ಹಾಗಾಗಿ ಆ ಕಡೆಯ ಬಿಜೆಪಿ ಮಂದಿಯ ಕೋಡು ಮೇಲೇರಿತ್ತು. ಮೇಯರ್ ಸ್ಥಾನದಲ್ಲಿಯೂ ನಮ್ಮವರಿಗೆ ಸ್ಥಾನ ಸಿಗಬೇಕು ಅನ್ನುವ ಹಂಬಲ ಅವರದ್ದಿತ್ತು.
Lobby for Mayor elections in Mangalore Corporater Sudhir Kumar hosts big party on Birthday. Sources reveal that Sudhir is trying his best to become the next mayor of Mangalore City Corporation.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm