ಬ್ರೇಕಿಂಗ್ ನ್ಯೂಸ್
01-02-22 02:13 pm HK Desk news ಕರಾವಳಿ
ಉಡುಪಿ, ಫೆ.1 : ಇಲ್ಲಿನ ಮಹಿಳಾ ಸರಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಧಾರಣೆ ವಿಚಾರದಲ್ಲಿ ಶಾಸಕ ರಘುಪತಿ ಭಟ್ ಖಡಕ್ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ ವಿದ್ಯಾರ್ಥಿನಿ ಹೆಸರಲ್ಲಿ ಒಂದು ಗುಂಪು ಹೈಕೋರ್ಟ್ ಮೆಟ್ಟಿಲೇರಿದ್ದು ಧಾರ್ಮಿಕ ಹಕ್ಕಿನ ಪಾಲನೆಗೆ ಅವಕಾಶ ನೀಡುವಂತೆ ಕೋರಿದೆ.
ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡುವಂತೆ ಮತ್ತು ಈ ಬಗ್ಗೆ ಉಡುಪಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುವಂತೆ ಕೋರಿ ವಿದ್ಯಾರ್ಥಿನಿ ಹೆಸರಲ್ಲಿ ಕರ್ನಾಟಕ ಹೈಕೋರ್ಟ್ ಗೆ ಮನವಿ ಸಲ್ಲಿಕೆಯಾಗಿದೆ.

ಧರ್ಮದ ಆಚರಣೆ ಮೂಲಭೂತ ಹಕ್ಕಾಗಿದ್ದು ಹಿಜಾಬ್ ಧರಿಸುವುದು ಅದರಲ್ಲಿ ಒಂದು. ಇದನ್ನು ಆಧರಿಸಿ ಕಾಲೇಜಿಗೆ ಹಾಜರಾಗುವ ವಿದ್ಯಾರ್ಥಿನಿಯರಿಗೂ ಅವಕಾಶ ನೀಡಬೇಕು. ಸಂವಿಧಾನದ 14 ಮತ್ತು 15ನೇ ವಿಧಿಯಡಿ ಧಾರ್ಮಿಕ ಸ್ವಾತಂತ್ರ್ಯ ಮೂಲಭೂತ ಹಕ್ಕಾಗಿದ್ದು ಈ ಬಗ್ಗೆ ತನ್ನ ಮನವಿಯನ್ನು ಪರಿಗಣಿಸುವಂತೆ ವಿದ್ಯಾರ್ಥಿನಿ ಕೇಳಿಕೊಂಡಿದ್ದಾಳೆ.
ಬುಧವಾರ ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಅಲ್ಲದೆ, ಅರ್ಜಿ ಇತ್ಯರ್ಥ ಆಗುವವರೆಗೆ ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸದಂತೆ ನಿರ್ದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಈ ನಡುವೆ, ಹಿಜಾಬ್ ಧರಿಸದೆ ಕಾಲೇಜಿಗೆ ಬರುವುದಿದ್ದರೆ ಬನ್ನಿ. ಇಲ್ಲದಿದ್ದರೆ ಆನ್ಲೈನ್ ಪಾಠ ಕೇಳಬಹುದು. ಕಾಲೇಜು ಆವರಣದಲ್ಲಿ ಗೊಂದಲ ಮಾಡಬಾರದು ಎಂದು ಸೋಮವಾರ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ.
After over a month of controversy over wearing hijab to college, a writ petition has been filed in the Karnataka High Court by a Muslim girl student from Udupi seeking a declaration that wearing a hijab is a fundamental right.
13-10-26 03:49 pm
HK News Staffer
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm