ಬ್ರೇಕಿಂಗ್ ನ್ಯೂಸ್
23-01-22 11:13 am Mangalore Correspondent ಕರಾವಳಿ
ಉಳ್ಳಾಲ, ಜ.23 : ಹೆದ್ದಾರಿಯಲ್ಲಿ ಸೂಚನೆ ನೀಡದೆ ಅಚಾನಕ್ಕಾಗಿ ತಿರುವು ಪಡೆದ ಕಾರು ಚಾಲಕನ ಪ್ರಾಣ ಉಳಿಸಲು ಹೋದ ಭಾರೀ ಗಾತ್ರದ ಟ್ರಕ್ ಕಮರಿಗೆ ಉರುಳಿ ಹೆದ್ದಾರಿ ಸಂಚಾರ ವ್ಯತ್ಯಯಗೊಂಡ ಘಟನೆ ತೊಕ್ಕೊಟ್ಟು ಕಾಪಿಕಾಡು ಎಂಬಲ್ಲಿ ನಡೆದಿದೆ.
ಪುಣೆಯಿಂದ ಕೇರಳದ ಕಾಸರಗೋಡಿಗೆ ಟಾಟಾ ಹುಂಡೈ ಕಾರುಗಳನ್ನ ಹೊತ್ತೊಯ್ಯುತ್ತಿದ್ದ ಭಾರೀ ಗಾತ್ರದ ಟ್ರಕ್ ಕಾಪಿಕಾಡು ಎರಡನೇ ಅಡ್ಡ ರಸ್ತೆಯ ರಾಜ್ ಕೇಟರರ್ಸ್ ಬಳಿಯ ಕಮರಿಗೆ ಉರುಳಿದೆ. ಇಂದು ಬೆಳಗ್ಗೆ 7 ಗಂಟೆ ಹೊತ್ತಿಗೆ ಘಟನೆ ನಡೆದಿದೆ. ತೊಕ್ಕೊಟ್ಟಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಟ್ರಕ್ ಮುಂದುಗಡೆಯಿಂದ ಕಾಪಿಕಾಡು ಎರಡನೇ ಅಡ್ಡ ರಸ್ತೆ ನಿವಾಸಿ ಆಲ್ಫ್ರೆಡ್ ಗಾಡ್ ಫ್ರೀ ಡಿಸೋಜ ಎಂಬವರು ಬ್ರೀಝ ಕಾರು ಚಲಾಯಿಸುತ್ತಿದ್ದರು. ಕಾಪಿಕಾಡು ಎರಡನೇ ಅಡ್ಡ ರಸ್ತೆ ಬರುತ್ತಿದ್ದಂತೆ ಆಲ್ಪ್ರೆಡ್ ಅವರು ಯಾವುದೇ ಸೂಚನೆ ನೀಡದೆ ಅಚಾನಕ್ಕಾಗಿ ಕಾರನ್ನ ತಿರುಗಿಸಿದ್ದಾರೆ. ಇದರಿಂದ ವಿಚಲಿತನಾದ ಹಿಂಬದಿ ಇದ್ದ ಟ್ರಕ್ ಚಾಲಕ ಬಿಹಾರ ಮೂಲದ ರಮೇಶ್ ಕಾರನ್ನ ರಕ್ಷಿಸಲು ಹೋಗಿ ಟ್ರಕ್ಕನ್ನೇ ಕಮರಿಗೆ ಹಾಕಿದ್ದಾನೆ.






ತನ್ನ ಪ್ರಾಣ ರಕ್ಷಿಸಿದ ಪರಿಣಿತ ಚಾಲಕ ರಮೇಶನನ್ನು ಕಾರು ಚಾಲಕ ಆಲ್ಫ್ರೆಡ್ ಏಕ ವಚನದಲ್ಲಿ ನಿಂದಿಸಿ ತನ್ನದೇನೂ ತಪ್ಪಿಲ್ಲವೆಂದು ಬಿಂಬಿಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರಿಗೂ ಕಾನೂನಿನ ಪಾಠ ಹೇಳಿ ಕೊಡಲು ಮುಂದಾಗಿದ್ದಾರೆ. ಅಷ್ಟರಲ್ಲೇ ಅಪಘಾತವಾದ ದೃಶ್ಯವು ಪಕ್ಕದ ಸಿಮೆಂಟ್ ಅಂಗಡಿಯ ಸಿಸಿ ಟಿವಿ ಫೂಟೇಜಲ್ಲಿ ಲಭಿಸಿದ್ದು ಇದನ್ನ ಕಂಡ ನಂತರ ಆಲ್ಪ್ರೆಡ್ ಗೆ ಜ್ನಾನೋದಯವಾಗಿದೆ. ಟ್ರಕ್ ಕಮರಿಗೆ ಉರುಳಿದ ಸಂದರ್ಭ ರಸ್ತೆ ಬದಿಯಲ್ಲಿ ಇಬ್ಬರು ಪಾದಚಾರಿಗಳು ನಿಂತಿದ್ದು ಕೂದಲೆಲೆಯ ಅಂತರದಲ್ಲಿ ಅವರು ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Mangalore Major trailer truck - car accident averted near Thokottu. The huge truck goes off road in order to save the car driver who took a sudden turn without any indication.
13-10-26 03:38 pm
HK News Staffer
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm