ಬ್ರೇಕಿಂಗ್ ನ್ಯೂಸ್
21-01-22 11:51 am Mangalore Correspondent ಕರಾವಳಿ
Photo credits : Headline Karnataka
ಉಳ್ಳಾಲ, ಜ.21 : ಕೆಲವು ದಿವಸಗಳಿಂದ ಸೋಮೇಶ್ವರ ಗ್ರಾಮದ ಪಿಲಾರಿನಲ್ಲಿ ಭಾರೀ ಗಾತ್ರದ ನಾಗರ ಹಾವುಗಳು ಜನನಿಬಿಡ ಪ್ರದೇಶಗಳಲ್ಲದೆ ಪಿಲಾರು ಶಾಲಾ ಆವರಣದೊಳಗೂ ಸೇರಿದ್ದು ಶಾಲೆಯ ಬಳಿಯಲ್ಲಿದ್ದ ಬೃಹತ್ ನಾಗರಹಾವನ್ನು ಸ್ನೇಕ್ ರಂಜಿತ್ ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಇತ್ತೀಚೆಗೆ ಪಿಲಾರು ಮಹಾಲಕ್ಷ್ಮೀ ಮಂದಿರದ ಬಳಿಯ ದಿವಂಗತ ಪೊಲೀಸ್ ತ್ಯಾಂಪಣ್ಣ ಶೆಟ್ಟಿ ಅವರ ಜಮೀನಿನ ಅತ್ಯಂತ ಹಳೆಯ ಪೊದೆ ಮತ್ತು ಗುಡ್ಡ ಪ್ರದೇಶವನ್ನ ಜೆಸಿಬಿ ಯಂತ್ರದಿಂದ ಸಮತಟ್ಟುಗೊಳಿಸಲಾಗಿತ್ತು. ನಂತರ ಈ ಪ್ರದೇಶದಲ್ಲಿ ನಿತ್ಯವೂ ಬೃಹದಾಕಾರದ ಸರ್ಪಗಳು ದಿಕ್ಕಿಲ್ಲದೆ ಓಡಾಡುತ್ತಿವೆ. ಕಳೆದ ವಾರ ಪಿಲಾರಿನ ಮಾಜಿ ಯೋಧ ಸದಾನಂದ ಗಟ್ಟಿ(ಬಾಬು ಗಟ್ಟಿ) ಅವರ ಮನೆಗೂ ಬೃಹತ್ ಸರ್ಪ ನುಗ್ಗಿತ್ತು. ಗಟ್ಟಿ ಅವರು ಸರ್ಪವನ್ನ ಹಿಡಿದು ಗೋಣಿ ಚೀಲದಲ್ಲಿ ತುಂಬುತ್ತಿದ್ದಾಗ ಸರ್ಪವು ಗಟ್ಟಿಯವರ ಕೈ ಬೆರಳಿಗೆ ಕಚ್ಚಿ ಗಾಯಗೊಳಿಸಿತ್ತು. ಸಕಾಲದಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು.

ಬುಧವಾರ ಸಂಜೆ ಪಿಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದೊಳಗಡೆ ಬೃಹದಾಕಾರದ ಎರಡು ಸರ್ಪಗಳು ಸುತ್ತಾಡುತ್ತಿರುವುದನ್ನ ಸ್ಥಳೀಯರು ನೋಡಿದ್ದು ವೀಡಿಯೋ ಮಾಡಿ ಜನರು ಜಾಗರೂಕರಾಗಿರಬೇಕೆಂದು ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು. ಮರುದಿನ ಬೆಳಗ್ಗೆ ಶಾಲಾ ಆವರಣದೊಳಗೆ ಮತ್ತೆ ಬೃಹತ್ ಸರ್ಪವು ಹರಿದಾಡುವುದು ಕಂಡುಬಂದಿದೆ. \

ಸಂಜೆ ವೇಳೆ ಶಾಲಾ ಗೇಟಿನ ಎದುರುಗಡೆ ಬೃಹತ್ ಸರ್ಪ ಠಳಾಯಿಸುತ್ತಿದ್ದುದನ್ನ ಕಂಡ ಸ್ಥಳೀಯರು ತೊಕ್ಕೊಟ್ಟಿನ ರಿಕ್ಷಾ ಚಾಲಕ ಸ್ನೇಕ್ ರಂಜಿತ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ರಂಜಿತ್ ಅವರು ಬೃಹತ್ ಗಾತ್ರದ ನಾಗರವನ್ನ ಬೆನ್ನಟ್ಟಿ ಕಾರ್ಯಾಚರಣೆ ಶುರು ಮಾಡಿದ್ದಾರೆ. ಈ ವೇಳೆ ನಾಗರ ಹಾವು ಶಾಲೆಯ ಮುಂಭಾಗದ ಮನೆಯ ಆವರಣದೊಳಗೆ ನುಗ್ಗಿದ್ದು ರಂಜಿತ್ ಅವರು ಚಾಣಾಕ್ಷತನದಿಂದ ಅದನ್ನ ಹಿಡಿದು ಹಿಂದು ನಂಬಿಕೆ ಪ್ರಕಾರ ಅರಶಿಣ ಮಿಶ್ರಿತ ನೀರು ಚಿಮುಕಿಸಿ ಗೋಣಿ ಚೀಲದೊಳಗೆ ತುಂಬಿ ದೂರದ ಕಾಡಿಗೆ ಕೊಂಡೊಯ್ದು ಬಿಟ್ಟಿದ್ದಾರೆ.
Mangalore Huge venomous snakes spotted near school in Pillar.
13-10-26 03:38 pm
HK News Staffer
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm