ಬ್ರೇಕಿಂಗ್ ನ್ಯೂಸ್
10-01-22 04:50 pm Mangalore Correspondent ಕರಾವಳಿ
ಮಂಗಳೂರು, ಜ.10 : 52,529 ಆರೋಗ್ಯ ಕಾರ್ಯಕರ್ತರು, 15,924 ಮಂಚೂಣಿ ಕಾರ್ಯಕರ್ತರು ಹಾಗೂ 2,69,000 ಅರವತ್ತು ವರ್ಷ ಮೇಲ್ಪಟ್ಟವರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 3,37,447 ಅರ್ಹ ಫಲಾನುಭವಿಗಳ ಪೈಕಿ 40 ಸಾವಿರ ಜನರಿಗೆ ಇಂದು ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ತಿಳಿಸಿದರು.
ಸೋಮವಾರ ನಗರದ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಕೋವಿಡ್ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.



ಅರ್ಹ ಫಲಾನುಭವಿಗಳು ಬೇಗನೆ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು, ಸರ್ಕಾರದಿಂದ ಈಗಾಗಲೇ ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆರೋಗ್ಯ ಹಾಗೂ ಜೀವರಕ್ಷಣೆ ಇದರಿಂದ ಸಾಧ್ಯವಾಗಲಿದೆ, ಕೋವಿಡ್ ಸೋಂಕಿನ ನಿಯಂತ್ರಣದ ಹಿತದೃಷ್ಟಿಯಿಂದ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಜನರು ಪಾಲಿಸಬೇಕು. ಕೋವಿಡ್ ಕುರಿತಂತೆ ನಾಗರಿಕರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಮುಖ್ಯವಾಗಿ ಅಜಾಗರೂಕರಾಗಿರಬಾರದು ಎಂದು ಹೇಳಿದರು.



ಲಾಕ್ಡೌನ್ ಸಂಬಂಧಿಸಿ ಜನರಲ್ಲಿ ಗೊಂದಲಗಳಿವೆ, ಸೋಂಕು ನಿಯಂತ್ರಿಸುವಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದ್ದಲ್ಲಿ ಅನುಕೂಲ ಎಂಬ ಕಾರಣದಿಂದ ವಾರಂತ್ಯ ಕರ್ಫ್ಯೂ ವಿಧಿಸಲಾಗಿದೆ. ಜನ ಎಚ್ಚರಿಕೆ ವಹಿಸಿದರೆ ಲಾಕ್ಡೌನ್ ಹೇರುವ ಪ್ರಮೇಯ ಉದ್ಬವಿಸುವುದಿಲ್ಲ ಎಂದು ಅವರು ಹೇಳಿದರು.



ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮೇಯರ್ ಪ್ರೇಮಾನಂದ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Booster dose vaccination drive began in the twin districts on was inaugurated Monday January 10.The vaccination drive was inaugurated in the presence of minister Angara at the Wenlock hospital in the city. Mayor Premananda Shetty, deputy commissioner Dr Rajendra K V, District Heath and Family Welfare officer Dr Kishore Kumar were present.
05-02-26 05:52 pm
HK News Desk
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
54 ಸಾವಿರಕ್ಕೂ ಹೆಚ್ಚು RTI ಅರ್ಜಿಗಳು ಬಾಕಿ ; ಮಾಹಿತ...
03-02-26 08:17 pm
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
05-02-26 06:20 pm
Mangalore Correspondent
Accident in Mangalore, Nantoor: ನಂತೂರಿನಲ್ಲಿ ಭ...
04-02-26 10:15 pm
MLA D. Vedavyasa Kamath: ಕಟ್ಟಡ ಪರವಾನಗಿ ನೀಡುವಲ...
04-02-26 09:34 pm
Mangalore, Lonavala Accident: ಲೋನಾವಾಲ ಘಾಟಿಯಲ್...
04-02-26 06:59 pm
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣ ; ಎಸ್ಐಟಿ ತನಿಖಾ...
04-02-26 12:29 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm