ಬ್ರೇಕಿಂಗ್ ನ್ಯೂಸ್
05-01-22 05:49 pm Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಜ.5 : ಕರ್ತವ್ಯದ ಸಮಯದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಸಿಸಿಬಿ ಸಿಬಂದಿ ಮೇಲೆ ಕಳೆದ ಬಾರಿ ಇಲಾಖಾ ತನಿಖೆ ನಡೆದು ವರ್ಗದ ಶಿಕ್ಷೆ ಕೊಡಲಾಗಿತ್ತು. ಹೊಸ ಕಮಿಷನರ್ ಆಗಿ ಶಶಿಕುಮಾರ್ ಬಂದಿದ್ದಾಗಲೇ ಈ ಘಟನೆ ನಡೆದಿತ್ತು. ಸಿಸಿಬಿ ಸಿಬಂದಿಯ ಎಣ್ಣೆ ಪಾರ್ಟಿ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿ ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಇದೀಗ ಅಂಥದ್ದೇ ಕರ್ತವ್ಯ ಲೋಪದ ಆರೋಪ ಮಂಗಳೂರಿನ ಮಹಿಳಾ ಠಾಣೆ ಪೊಲೀಸರ ಮೇಲೆ ಕೇಳಿಬಂದಿದೆ.
ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಸೇರಿ ಮಹಿಳಾ ಸಿಬಂದಿ ಕರ್ತವ್ಯದ ಅವಧಿಯಲ್ಲೇ ಬ್ರೇಕ್ ಡ್ಯಾನ್ಸ್ ಮಾಡಿದ್ದಾರೆ. ಸೀರೆಗಳನ್ನು ಉಟ್ಟು ಭಾರೀ ಗಮ್ಮತ್ತಿನಲ್ಲಿ ಬಂದಿದ್ದ ಮಹಿಳಾ ಸಿಬಂದಿ ಠಾಣೆಯ ಇನ್ ಸ್ಪೆಕ್ಟರ್ ರೇವತಿ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ. ತಾಸೆದ ಪೆಟ್ಟ್ ಗು ಊರುದ ಪಿಲಿಕುಲು ತುಳು ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಅಲ್ಲದೆ, ಬೇರೆ ಹಿಂದಿ ಹಾಡುಗಳಿಗೂ ಸ್ಟೆಪ್ಸ್ ಹಾಕಿ, ಠಾಣೆಯ ಒಳಗೆ ಜುಮ್ಮಾರೆ ಜುಮ್ ಮಾಡಿದ್ದಾರೆ.
ಕಳೆದ ಆಯುಧ ಪೂಜೆಯ ಮರುದಿನ ಅಂದರೆ, ಅ.15ರಂದು ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಇದರ ವಿಡಿಯೋ ಲೀಕ್ ಆಗಿದ್ದು, ಪೊಲೀಸರು ಕರ್ತವ್ಯದ ಅವಧಿಯಲ್ಲಿ ಹೀಗೆ ಮೈಮರೆತು ಕುಣಿದಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಮಾಡಬೇಕಾಗುತ್ತದೆ. ಮಹಿಳಾ ಠಾಣೆ ಇನ್ ಸ್ಪೆಕ್ಟರ್ ರೇವತಿ ಠಾಣೆಯ ಒಳಗೆ ಹಾಡು ಹಾಕಿ, ಭಾರೀ ಸ್ಟೆಪ್ಸ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಿರುಕುಳ ಪ್ರಕರಣ ಒಂದರಲ್ಲಿ ಮಹಿಳೆಯೊಬ್ಬರು ದೂರು ಹೇಳಿಕೊಂಡು ಠಾಣೆಗೆ ಬಂದಿದ್ದರು. ಆದರೆ, ದೂರು ಹಿಡಿದು ಬಂದ ಮಹಿಳೆಯನ್ನು ಮಧ್ಯಾಹ್ನದ ವರೆಗೂ ಕುಳ್ಳಿರಿಸಿ ಆಕೆಯ ಮುಂದೆಯೇ ಸಿಬಂದಿ ಸ್ಟೆಪ್ಸ್ ಹಾಕಿದ್ದಾರೆ ಅನ್ನುವ ಆರೋಪ ಕೇಳಿಬಂದಿದೆ.
ಪೊಲೀಸ್ ಸಿಬಂದಿಗೆ ಖಾಸಗಿತನ ಇಲ್ಲವೇ ಎನ್ನುವ ಪ್ರಶ್ನೆ ಬರಬಹುದು. ವಿಶೇಷ ದಿನಗಳಲ್ಲಿ ಖಾಕಿ ಡ್ರೆಸ್ ಬಿಟ್ಟು ಇತರ ಡ್ರೆಸ್ ಗಳನ್ನು ಹಾಕುವುದಕ್ಕೂ ಅವಕಾಶ ಇರುತ್ತದೆ. ಆದರೆ, ಕರ್ತವ್ಯದಲ್ಲಿ ಹೊರ ತೆರಳುವ ವೇಳೆ ಸಿಬಂದಿ ಖಾಕಿ ಡ್ರೆಸ್ ನಲ್ಲಿಯೇ ಇರಬೇಕಾಗುತ್ತದೆ. ಆದರೆ ಖಾಸಗಿತನದ ನೆಪದಲ್ಲಿ ಕರ್ತವ್ಯದ ಅವಧಿಯಲ್ಲಿ ಠಾಣೆಯ ಒಳಗೆ ಕುಣಿಯುವುದು, ಡ್ಯಾನ್ಸ್ ಮಾಡುವುದು, ದೂರು ಹಿಡಿದು ಬಂದವರನ್ನು ಕಾಯಿಸಿ ಸತಾಯಿಸುವುದು ಸರಿ ಕಾಣೋದಿಲ್ಲ. ಸಿಸಿಬಿ ಪೊಲೀಸರು ಕಳೆದ ಬಾರಿ ಕರ್ತವ್ಯದ ಸಮಯದಲ್ಲಿ ಊಟಕ್ಕೆಂದು ಹೋಗಿ ಬಾರ್ ಗೆ ತೆರಳಿ ಎಣ್ಣೆ ಪಾರ್ಟಿ ಮಾಡಿದ್ದಕ್ಕೂ, ಮಹಿಳಾ ಸಿಬಂದಿ ಠಾಣೆಯಲ್ಲಿ ಕರ್ತವ್ಯ ಬದಿಗಿಟ್ಟು ಡ್ಯಾನ್ಸ್ ಪಾರ್ಟಿ ಮಾಡಿದ್ದಕ್ಕೂ ತಾಳೆಯಾಗುತ್ತದೆ. ಕಮಿಷನರ್ ದಂಡ ಪ್ರಯೋಗ ಮಾಡುವುದಾದರೆ, ಈ ಅಧಿಕಾರಿ, ಸಿಬಂದಿ ಮೇಲೂ ಅದೇ ರೀತಿಯ ನಿರ್ದಾಕ್ಷಿಣ್ಯ ಕ್ರಮ ತೋರಬೇಕಾಗುತ್ತದೆ.
ಊಟ ಮಾಡಿದ್ದಕ್ಕೆ ಸಸ್ಪೆಂಡ್ ಮಾಡಿಸಿದ್ದರು !
ಮಹಿಳಾ ಠಾಣೆಯ ಇನ್ ಸ್ಪೆಕ್ಟರ್ ಆಗಿರುವ ರೇವತಿ, ಅದೇ ಠಾಣೆಯಲ್ಲಿ ರಾತ್ರಿ ಊಟ ಮಾಡಿದರೆಂಬ ಕಾರಣಕ್ಕೆ ಐವರು ಸಿಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಲು ಕಾರಣವಾಗಿದ್ದರು ಅನ್ನೋ ವಿಚಾರವೂ ಬೆಳಕಿಗೆ ಬಂದಿದೆ. ಕಳೆದ ಆಗಸ್ಟ್ ತಿಂಗಳ ಕೊನೆಯಲ್ಲಿ ಠಾಣೆಯೊಳಗೆ ಮೂವರು ಮಹಿಳಾ ಸಿಬಂದಿ ಮತ್ತು ಇಬ್ಬರು ಪುರುಷ ಸಿಬಂದಿ ರಾತ್ರಿ ಪಾರ್ಸೆಲ್ ತರಿಸಿ ಊಟ ಮಾಡಿದ್ದರು. ಈ ಬಗ್ಗೆ ತಿಳಿದ ಇನ್ ಸ್ಪೆಕ್ಟರ್ ರೇವತಿ, ಊಟ ಮಾಡಿದ ಘಟನೆಯನ್ನು ಠಾಣೆಯೊಳಗೆ ಎಣ್ಣೆ ಪಾರ್ಟಿ ಮಾಡಿದ್ದಾರೆಂದು ಹೇಳಿ ಕಮಿಷನರ್ ಸಾಹೇಬ್ರಿಗೆ ದೂರು ಕೊಟ್ಟಿದ್ದರಂತೆ.
ಪಾಂಡೇಶ್ವರ ಮಹಿಳಾ ಠಾಣೆ ಪ್ರತಿದಿನವೂ ರಾತ್ರಿ ಎಂಟು ಗಂಟೆಗೆ ಕ್ಲೋಸ್ ಆಗುತ್ತದೆ. ರಾತ್ರಿ ದೂರು ಹಿಡಿದು ಬಂದರೆ, ಮರುದಿನವೇ ಹೋಗಬೇಕಾಗುತ್ತದೆ. ಅಂದು ರಾತ್ರಿಯೂ ಸ್ವಲ್ಪ ತಡವಾಗಿದ್ದರಿಂದ ಹೊಟೇಲಿನಿಂದ ಊಟ ತರಿಸಿ, ಠಾಣೆಯಲ್ಲೇ ಉಂಡಿದ್ದರಂತೆ. ಊಟ ಮಾಡುವಾಗ ರಾತ್ರಿ 9 ಗಂಟೆ ಆಗಿತ್ತು. ಆದರೆ ಇದನ್ನೇ ನೆಪವಾಗಿಸಿ ಇನ್ ಸ್ಪೆಕ್ಟರ್ ರೇವತಿ ಐವರು ಸಿಬಂದಿಯನ್ನು ಕಮಿಷನರಿಗೆ ಹೇಳಿಸಿ ಸಸ್ಪೆಂಡ್ ಮಾಡಿಸಿದ್ದಾರೆ ಅನ್ನೋ ವಿಚಾರ ತಿಳಿದುಬಂದಿದೆ. ಕಮಿಷನರ್ ಸಾಹೇಬ್ರು ಈ ಬಗ್ಗೆ ಇಲಾಖಾ ತನಿಖೆ ನಡೆಸಿದ್ದರೇ ಅನ್ನೋದು ಗೊತ್ತಿಲ್ಲ. ಸಿಬಂದಿಯ ಬಳಿ ಊಟದ ಬಗ್ಗೆ ಯಾರು ಕೂಡ ಮಾಹಿತಿ ಕೇಳಿಲ್ಲ. ಪ್ರಶ್ನೆಯೂ ಮಾಡಿಲ್ಲವಂತೆ. ಊಟ ಮಾಡಿದರು ಎಂಬ ಕಾರಣಕ್ಕೆ ಕಮಿಷನರ್ ಸಾಹೇಬ್ರು ಮೂರು ತಿಂಗಳ ಬಳಿಕ ಸಸ್ಪೆಂಡ್ ಮಾಡಿದ್ದು ಮಾತ್ರ ಸಿಬಂದಿಯನ್ನು ತೀವ್ರ ಚಿಂತೆಗೀಡು ಮಾಡಿದೆ.
ಊಟ ಮಾಡಿದ ಕಾರಣಕ್ಕೆ ಅಮಾನತು ಮಾಡಿಸಿದ್ದ ಇನ್ಸ್ ಪೆಕ್ಟರ್ ಸಾಹೇಬ್ರು ಠಾಣೆಯೊಳಗೆ ಕರ್ತವ್ಯದ ಅವಧಿಯಲ್ಲೇ ಕುಣಿದು ಕುಪ್ಪಳಿಸಿದ್ದಕ್ಕೆ ಯಾವ ಶಿಕ್ಷೆ ಕಾದಿದೆಯೋ..?
Mangalore Women police station Inspector Revathi and staffs seen dancing inside the station premises at Pandeshwar. The video of this has gone viral on social media. Need to wait to see what action will be taken against the staffs by higher officers.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm