ಬ್ರೇಕಿಂಗ್ ನ್ಯೂಸ್
02-01-22 03:37 pm Mangalore Correspondent ಕರಾವಳಿ
ಮಂಗಳೂರು, ಜ.2 : ವಿಶ್ವ ಕೊಂಕಣಿ ಸರದಾರ ಎಂದೇ ಖ್ಯಾತರಾಗಿದ್ದ ಬಸ್ತಿ ವಾಮನ ಶೆಣೈ(87) ಇನ್ನಿಲ್ಲ. ಕೊಂಕಣಿ ಭಾಷೆ, ಸಂಸ್ಕೃತಿಯ ಅಭಿವೃದ್ಧಿಗಾಗಿ ಅವಿರತ ಶ್ರಮಿಸಿ, ಮಂಗಳೂರಿನ ಶಕ್ತಿನಗರದಲ್ಲಿ ವಿಶ್ವ ಕೊಂಕಣಿ ಕೇಂದ್ರವನ್ನು ಸ್ಥಾಪಿಸಲು ಶ್ರಮಿಸಿದ್ದ ಬಂಟ್ವಾಳ ಮೂಲದ ಬಸ್ತಿ ವಾಮನ ಶೆಣೈ ಕೆಲಕಾಲದ ಅನಾರೋಗ್ಯದ ಬಳಿಕ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
1980ರಿಂದಲೇ ಕೊಂಕಣಿ ಭಾಷಾ ಮಂಡಲದಲ್ಲಿ ಸಕ್ರಿಯರಾಗಿದ್ದ ವಾಮನ ಶೆಣೈಯವರು ರಾಜ್ಯದಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪನೆಗಾಗಿ ಕೊಂಕಣಿ ಭಾಷಿಗರನ್ನು ಒಟ್ಟು ಸೇರಿಸಿ ಪ್ರಬಲ ಒತ್ತಾಯ ಮಂಡಿಸಿದ್ದ ಪ್ರಮುಖರಲ್ಲಿ ಒಬ್ಬರು. 1993ರಲ್ಲಿ ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ವಾಮನ ಶೆಣೈಯವರ ಪ್ರಯತ್ನದ ಫಲವಾಗಿ 1994ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತ್ತು.
ವಾಮನ ಶೆಣೈಯವರ ಮುತವರ್ಜಿಯಲ್ಲಿ 1995ರಲ್ಲಿ ಮೊಟ್ಟಮೊದಲ ಬಾರಿಗೆ ವಿಶ್ವ ಕೊಂಕಣಿ ಸಮ್ಮೇಳನ ಮಂಗಳೂರಿನಲ್ಲಿ ನಡೆದಿತ್ತು. ಏಳು ದಿನಗಳ ಸಮ್ಮೇಳನದಲ್ಲಿ ಸೆಮಿನಾರ್, ಸಂಸ್ಕೃತಿ ಬಿಂಬಿಸುವ ಪ್ರದರ್ಶನಗಳು, ವಸ್ತು ಪ್ರದರ್ಶನಗಳು ಏರ್ಪಾಡಾಗಿದ್ದು ಭಾರೀ ಯಶಸ್ಸು ಕಂಡಿತ್ತು. ಇದೇ ಸಂದರ್ಭದಲ್ಲಿ ವಾಮನ ಶೆಣೈ ಅವರನ್ನು ವಿಶ್ವ ಕೊಂಕಣಿ ಸರದಾರ ಎಂದು ಬಿರುದಿತ್ತು ಗೌರವಿಸಲಾಗಿತ್ತು. ಸಮ್ಮೇಳನದಲ್ಲಿ ಕೊಂಕಣಿ ಭಾಷೆ, ಕಲೆ, ಸಂಸ್ಕೃತಿಯ ರಕ್ಷಣೆಗಾಗಿ ಮಂಗಳೂರಿನಲ್ಲಿ ವಿಶ್ವ ಕೊಂಕಣಿ ಕೇಂದ್ರ ಸ್ಥಾಪಿಸಬೇಕು ಎಂಬ ಬಗ್ಗೆ ನಿರ್ಣಯ ಮಂಡಿಸಲಾಗಿತ್ತು.
1996ರಲ್ಲಿ ಉತ್ತರ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ಮೊದಲ ಬಾರಿಗೆ ಉತ್ತರ ಅಮೆರಿಕನ್ ಕೊಂಕಣಿ ಸಮ್ಮೇಳನ ನಡೆದಿತ್ತು. ಮಾರ್ಗರೆಟ್ ಆಳ್ವಾ, ಕೆ.ಕೆ. ಪೈಯವರನ್ನು ಒಡಗೂಡಿಸಿಕೊಂಡು ಅಮೆರಿಕದಲ್ಲಿ ಸಮ್ಮೇಳನ ನಡೆಸಿ, ವಿಶ್ವ ಮಟ್ಟದಲ್ಲಿ ಕೊಂಕಣಿ ಭಾಷಿಕರು ಸದ್ದು ಮಾಡಿದ್ದರು. 1997ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಸ್ತಿ ವಾಮನ ಶೆಣೈ ಕೊಂಕಣಿ ಭಾಷೆಯ ಅಭಿವೃದ್ಧಿ ನಿಟ್ಟಿನಲ್ಲಿ ಅಪಾರ ಶ್ರಮ ಹಾಕಿದ್ದರು. 2001ರ ವರೆಗೆ ಎರಡು ಅವಧಿಗಳಿಗೆ ಅಕಾಡೆಮಿ ಅಧ್ಯಕ್ಷರಾಗಿದ್ದ ಶೆಣೈಯವರ ಕಾಲದಲ್ಲಿ ಕೊಂಕಣಿಯನ್ನು ಶಾಲೆಯಲ್ಲಿ ಮೂರನೇ ಭಾಷೆಯಾಗಿ ಕಲಿಸುವ ಅವಕಾಶ ಸಿಕ್ಕಿತ್ತು.
2002ರಲ್ಲಿ ವಾಮನ ಶೆಣೈಯವರು ಆಲ್ ಇಂಡಿಯಾ ಕೊಂಕಣಿ ಪರಿಷತ್ತಿನ 20ನೇ ಅಧಿವೇಶನವನ್ನು ಮಂಗಳೂರಿನಲ್ಲಿ ಸಂಘಟಿಸಿದ್ದರು. 2004ರಲ್ಲಿ ಕೊಂಕಣಿ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ವಾಮನ ಶೆಣೈಯವರು ತಮ್ಮ ಅವಧಿಯಲ್ಲಿ ಕೊಂಕಣಿ ಸಾಹಿತಿ-ಸಾಹಿತ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದಕ್ಕಾಗಿ ವಿಶ್ವ ಕೊಂಕಣಿ ಅಭಿಯಾನವನ್ನೂ ಆರಂಭಿಸಿದ್ದರು. ಹಿಂದಿ, ಉರ್ದು, ಪರ್ಶಿಯನ್, ಪಂಜಾಬಿ, ಕನ್ನಡ, ಕೊಂಕಣಿ ಭಾಷೆಯ ಖ್ಯಾತ ಸಾಹಿತಿಗಳನ್ನು ಒಂದೆಡೆ ಸೇರಿಸಿ, ಭಾಷಾ ಸಂವಾದ ಏರ್ಪಡಿಸಿದ್ದು ದೊಡ್ಡ ಸಾಧನೆಯಾಗಿತ್ತು.

ವಾಮನ ಶೆಣೈಯವರ ನಿರಂತರ ಶ್ರಮದಿಂದಾಗಿ 2009ರಲ್ಲಿ ಶಕ್ತಿನಗರದಲ್ಲಿ ವಿಶ್ವ ಕೊಂಕಣಿ ಕೇಂದ್ರ ಹೆಸರಲ್ಲಿ ಬೃಹತ್ ಕಟ್ಟಡ ಎದ್ದು ನಿಂತಿತ್ತು. ಕೇಂದ್ರವನ್ನು ಬರಿಯ ಕಟ್ಟಡವಾಗಿಸದೆ, ಅಲ್ಲಿ ಗ್ರಂಥಾಲಯ, ಮ್ಯೂಸಿಯಂ ಮತ್ತು ಸಮ್ಮೇಳನ ಏರ್ಪಡಿಸುವುದಕ್ಕಾಗಿ ಸಭಾಂಗಣ, ಪ್ರತಿನಿಧಿಗಳು ಉಳಕೊಳ್ಳಲು ಬೋರ್ಡ್ ರೂಂ, ಸೆಮಿನಾರ್ ಹಾಲ್, ಅಡಿಟೋರಿಯಂ ರಚನೆಯಾಗಿತ್ತು. 2010ರಲ್ಲಿ ಇದೇ ಕೇಂದ್ರದಡಿ ವಿಶ್ವ ಕೊಂಕಣಿ ಭಾಷಾ ಸಂಸ್ಥಾನ ಮತ್ತು ವರ್ಲ್ಡ್ ಕೊಂಕಣಿ ಹಾಲ್ ಆಫ್ ಫೇಮ್ ಕೂಡ ಸ್ಥಾಪನೆಯಾಗಿತ್ತು.
ಕೊಂಕಣಿ ಕೇಂದ್ರ, ಕೊಂಕಣಿ ಭಾಷೆಗಾಗಿ ಅಪಾರ ಶ್ರಮಿಸಿದ್ದ ಬಸ್ತಿ ವಾಮನ ಶೆಣೈಯವರು ತಮ್ಮ ಇಳಿವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಶೆಣೈಯವರ ಪಾರ್ಥಿವ ಶರೀರವನ್ನು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜನವರಿ 3ರಂದು ಬೆಳಗ್ಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬೆಳಗ್ಗೆ 9ರಿಂದ 10 ಗಂಟೆ ವರೆಗೆ ದರ್ಶನಕ್ಕೆ ಅವಕಾಶ ಇರಲಿದೆ. ಆನಂತರ ಅಂತ್ಯಕ್ರಿಯೆಯನ್ನು ವಾಮನ ಶೆಣೈಯವರ ಹುಟ್ಟೂರು ಬಂಟ್ವಾಳದಲ್ಲಿ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವಾಮನ ಶೆಣೈಯವರು ಕೊಂಕಣಿ ಸರದಾರ ಆಗೋದಕ್ಕೂ ಮುನ್ನ ಸುದೀರ್ಘ ಕಾಲ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿದ್ದರು. ಯುವಕನಾಗಿದ್ದಾಗ ಇಂಟಕ್, ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದ ಶೆಣೈಯವರ ನಾಯಕತ್ವ ಗುಣ ಆಗಿನ ಸಂಸದ ಟಿ.ಎ.ಪೈ ಆಕರ್ಷಣೆಗೆ ಒಳಗಾಗಿತ್ತು. ಅವರ ಸಲಹೆಯಂತೆ 1962ರಲ್ಲಿ ಸಿಂಡಿಕೇಟ್ ಬ್ಯಾಂಕ್ ಸೇರ್ಪಡೆಯಾಗಿದ್ದ ಶೆಣೈಯವರು 30 ವರ್ಷಗಳ ಕಾಲ ಬ್ಯಾಂಕರ್ ಆಗಿ ಕೆಲಸ ಮಾಡಿದ್ದಾರೆ. 1974ರಲ್ಲಿ ನೇತ್ರಾವತಿಯಲ್ಲಿ ನೆರೆ ಬಂದು ಬಂಟ್ವಾಳ ತಾಲೂಕಿನ ಹಲವು ಭಾಗಗಳು ಮುಳುಗಡೆಯಾದಾಗ ಶೆಣೈ ಪುನರ್ವಸತಿ ಕೇಂದ್ರಗಳನ್ನು ರಚಿಸಿ ನೆರವು ನೀಡಿದ್ದರು. ಕೃಷಿ, ವ್ಯಾಪಾರ ಕಳಕೊಂಡವರಿಗೆ ಸಿಂಡಿಕೇಟ್ ಬ್ಯಾಂಕಿನಿಂದ ಸಹಾಯ ಒದಗಿಸಿಕೊಟ್ಟಿದ್ದರು. 1992ರಲ್ಲಿ ಬ್ಯಾಂಕ್ ಕೆಲಸಕ್ಕೆ ಸ್ವಯಂ ನಿವೃತ್ತಿಯಾಗುವ ಮೊದಲು ಶಿವಮೊಗ್ಗ, ಬೆಳಗಾವಿ, ಮೂಡುಬಿದ್ರೆ, ಪಾಣೆಮಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಶಾಖೆಗಳಲ್ಲಿ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಬ್ಯಾಂಕ್ ನಿವೃತ್ತಿಯ ಬಳಿಕ ವಾಮನ ಶೆಣೈಯವರು ಕೊಂಕಣಿ ಭಾಷಾ ಮಂಡಲದಲ್ಲಿ ಸಕ್ರಿಯರಾಗಿದ್ದರು. ಕೊಂಕಣಿ ಅಕಾಡೆಮಿ ಸ್ಥಾಪನೆಗಾಗಿ ರಾಜ್ಯದಾದ್ಯಂತ ಜಾಥಾಗಳನ್ನು ನಡೆಸುತ್ತಾ, ಚಳವಳಿ ಸಂಘಟಿಸಿದ್ದರು. ಇದರ ಫಲದಿಂದಾಗಿ 1994ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಕೊಂಕಣಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿತ್ತು.
Noted Konkani activist Basti Vaman Madhav Shenoy popularly known as Vishwa Konkani Sardar and the founder of World Konkani Centre in Shaktinagar, passed away on Sunday January 2. He was 87. Family sources informed that Shenoy’s health was deteriorating due to age related illness for the last couple of months.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm