ಬ್ರೇಕಿಂಗ್ ನ್ಯೂಸ್
24-12-21 10:57 pm Mangalore Correspondent ಕರಾವಳಿ
ಮಂಗಳೂರು, ಡಿ.24 : ನಾಡಿನೆಲ್ಲೆಡೆ ಕ್ರಿಸ್ಮಸ್ ಸಂಭ್ರಮ. ಕ್ರಿಸ್ತಿಯನ್ನರು ಏಸು ಕ್ರಿಸ್ತನ ಜನ್ಮದಿನದ ಸಡಗರದಲ್ಲಿದ್ದಾರೆ. ಕಳೆದ ಬಾರಿ ಕೊರೊನಾ ನಿರ್ಬಂಧ ಹಿನ್ನೆಲೆಯಲ್ಲಿ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ. ಈ ಬಾರಿ ಕೊರೊನಾ ನಡುವೆಯೂ ಚರ್ಚ್ ಗಳಲ್ಲಿ ಸಂಪ್ರದಾಯದಂತೆ ಪ್ರಾರ್ಥನೆ ನೆರವೇರಿಸಿದ್ದು ಸಂಭ್ರಮ ಮನೆಮಾಡಿದೆ.
ಮಂಗಳೂರಿನ ಬೆಂದೂರುವೆಲ್ ಚರ್ಚ್, ಮಿಲಾಗ್ರಿಸ್ ಚರ್ಚ್ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಪ್ರಾರ್ಥನೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಹಿಂದಿನಂತೆ ರಾತ್ರಿ 12 ಗಂಟೆ ವರೆಗೂ ಪ್ರಾರ್ಥನೆ ನಡೆಸಲು ಅವಕಾಶ ಇರಲಿಲ್ಲ. ಕೊರೊನಾ ಕಟ್ಟುನಿಟ್ಟು ಇರುವುದರಿಂದ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಭಕ್ತರು ಪ್ರಾರ್ಥನೆ ನೆರವೇರಿಸಿದರು. ಸಂಜೆಯಿಂದ ರಾತ್ರಿ 9 ಗಂಟೆ ವರೆಗೆ ಭಕ್ತರು ಚರ್ಚ್ ಗಳಲ್ಲಿ ಬಂದು ಸಾಮೂಹಿಕ ಪಾರ್ಥನೆ ನೆರವೇರಿದ್ದಾರೆ.
ಹಿಂದೆಲ್ಲಾ ಡಿ.24ರಂದು ರಾತ್ರಿ 12 ಗಂಟೆ ವರೆಗೂ ಭಕ್ತರು ಸಾಮೂಹಿಕ ಪ್ರಾರ್ಥನೆಗಳಲ್ಲಿ ಪಾಲ್ಗೊಂಡು, ಮಧ್ಯರಾತ್ರಿಯಲ್ಲಿ ಏಸು ಕ್ರಿಸ್ತನ ಜನ್ಮದಿನವನ್ನು ಅಚರಿಸಿಕೊಳ್ಳುತ್ತಿದ್ದರು. ಗೋದಲಿ ಇನ್ನಿತರ ಸ್ವರೂಪಗಳಲ್ಲಿ ಏಸು ಕ್ರಿಸ್ತನ ಮಗುವಿನ ರೂಪವನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ಕಳೆದ ಎರಡು ವರ್ಷಗಳಿಂದ ನಡುರಾತ್ರಿಯ ಸಂಭ್ರಮಕ್ಕೆ ಕೊರೊನಾ ಕಾರಣದಿಂದ ಬ್ರೇಕ್ ಬಿದ್ದಿದೆ. ಈ ಬಾರಿ ಕೊಂಚ ಮಟ್ಟಿಗೆ ಜನರು ನಿರಾಳರಾಗಿದ್ದು, ಎಲ್ಲ ಚರ್ಚ್ ಗಳಲ್ಲಿ ಸಡಗರ ಕಂಡುಬಂತು. ಚರ್ಚ್ ಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
A large number of faithful attended the Christmas Eve Mass at churches in and around the city on Friday December 24. With Covid pandemic around, Masses were held with discipline adhering to Covid-19 guidelines and maintaining social distance. Beautiful lights, and stars and sparkling decorations could be seen in churches everywhere celebrating the birth of Jesus Christ.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:05 pm
Mangalore Correspondent
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
Congress, Mangalore: ಸಿದ್ದರಾಮಯ್ಯ ಆಡಳಿತದಲ್ಲೇ ದ...
26-07-25 10:44 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm