ಬ್ರೇಕಿಂಗ್ ನ್ಯೂಸ್
17-12-21 10:31 pm HK Desk news ಕರಾವಳಿ
ಮಂಗಳೂರು, ಡಿ.17 : ಕಸ್ತೂರಿ ರಂಗನ್ ವರದಿಯನ್ನು ಕಾಂಗ್ರೆಸ್ ಸರಕಾರ ಇದ್ದಾಗ ಜಾರಿಗೊಳಿಸುವ ಬದಲು ರದ್ದುಪಡಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೆವು. ಆದರೆ, ಕೇಂದ್ರ ಸರಕಾರ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈಗ ಬಿಜೆಪಿ ಸರಕಾರವೂ ಕಸ್ತೂರಿ ರಂಗನ್ ವರದಿಯನ್ನು ರದ್ದುಪಡಿಸುವುದಾಗಿ ಹೇಳುತ್ತಿದೆ. ಆದರೆ, ಕೇಂದ್ರದಲ್ಲಿಯೂ ಬಿಜೆಪಿ ಸರಕಾರವೇ ಇದ್ದರೂ, ಅದನ್ನು ರದ್ದುಪಡಿಸಲು ಸಾಧ್ಯವಾಗಿಲ್ಲ ಯಾಕೆ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ ರೈ, ಕಾಂಗ್ರೆಸ್ ಸರಕಾರ ಇದ್ದಾಗ ಕಸ್ತೂರಿ ರಂಗನ್ ವರದಿಯಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಗದ್ದಲ ಎಬ್ಬಿಸಿದವರು ಬಿಜೆಪಿ ಶಾಸಕರು. ಈಗ ಅವರೇ ಆಡಳಿತ ನಡೆಸುತ್ತಿದ್ದಾರೆ. ಈಗಲೂ ವಿರೋಧ ಇದೆಯೆಂದು ಹೇಳಿಕೊಂಡು ಬರುತ್ತಿದ್ದಾರೆ. ಇವರದೇ ಸರಕಾರ ಇರುವಾಗ ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಕೇಂದ್ರಕ್ಕೆ ತಿಳಿಹೇಳಬಹುದಲ್ಲ. ಈಗ ವರದಿಯ ವಿಚಾರ ಎನ್ ಜಿಟಿ ಕೋರ್ಟಿನಲ್ಲಿದೆ. ಮಹಾರಾಷ್ಟ್ರ ಮತ್ತು ಕೇರಳ ಸರಕಾರಗಳು ಕೂಡ ಈ ವರದಿ ಬಗ್ಗೆ ಆಕ್ಷೇಪಿಸಿ, ವರದಿ ನೀಡಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ಸರಕಾರ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಿದರು.

ಪರಿಸರ ರಕ್ಷಣೆಗಾಗಿ ಮಾಧವ ಗಾಡ್ಗೀಳ್ ಕೊಟ್ಟಿದ್ದ ವರದಿಯನ್ನು ಆಕ್ಷೇಪಿಸಿ, ವಿಜ್ಞಾನಿ ಕಸ್ತೂರಿ ರಂಗನ್ ಮೂಲಕ ಹೊಸತಾಗಿ ವರದಿ ತಯಾರಿಸಲಾಗಿತ್ತು. ಅದನ್ನೂ ಯಾಕೆ ರದ್ದುಪಡಿಸಬೇಕು ಎನ್ನುತ್ತೀರಿ ಎಂಬ ಪ್ರಶ್ನೆಗೆ, ಜನರಿಗೆ ತೊಂದರೆಯಾಗುತ್ತದೆ ಎಂದು ವರದಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದು ಬಿಜೆಪಿಯವರು. ಜನರಿಗೆ ತೊಂದರೆಯಾದರೆ ನಮಗೂ ಬೇಡ ಎಂದು ರದ್ದುಪಡಿಸುವಂತೆ ಹೇಳಿದ್ದೆವು ಎಂದರು. ಹಾಗಾದರೆ ಪರಿಸರ ರಕ್ಷಣೆ ಯಾರಿಗೂ ಬೇಕಾಗಿಲ್ಲ ಎಂಬ ಪ್ರಶ್ನೆಗೆ, ನೀವು ಇದನ್ನು ಬಿಜೆಪಿಯವರಿಗೂ ಕೇಳಬೇಕು. ನಮ್ಮಲ್ಲಿ ಮಾತ್ರ ಅಲ್ಲ. ಅವರೇ ಈಗ ಆಡಳಿತದಲ್ಲಿದ್ದಾರೆ. ಹಿಂದೆ ಅವರೇ ಪ್ರತಿಭಟನೆ ನಡೆಸಿದ್ದು. ಹುಲಿ ಯೋಜನೆ ವಿಚಾರದಲ್ಲಿಯೂ ಗೂಬೆ ಕೂರಿಸಿ, ಜನರನ್ನು ಯಾಮಾರಿಸುವ ಕೆಲಸ ಮಾಡಿದ್ದರು ಎಂದು ರೈ ಹೇಳಿದರು.
ವರದಿಗೆ ಅಧಿಕಾರಸ್ಥರ ವಿರೋಧ ಏಕೆ ?
ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಯಾವುದೇ ಬೃಹತ್ ಯೋಜನೆ ಮಾಡಬಾರದು, ಅಲ್ಲಿನ ಅರಣ್ಯ ರಕ್ಷಣೆಗಾಗಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಲಾಗಿತ್ತು. ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದಲ್ಲಿ ಹರಡಿರುವ ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಅದಕ್ಕೆ ಹೊಂದಿಕೊಂಡಿರುವ ಗ್ರಾಮಗಳು, ಘಟ್ಟದಲ್ಲಿ ನೆಲೆಸಿರುವ ಜನರನ್ನು ಎಬ್ಬಿಸಿ, ಪರ್ಯಾಯ ವ್ಯವಸ್ಥೆ ಮಾಡುವಂತೆ ವರದಿಯಲ್ಲಿ ಹೇಳಲಾಗಿತ್ತು. ಅದಲ್ಲದೆ, ಅಲ್ಲಿ ಈಗಾಗಲೇ ಇರುವ ಹೋಮ್ ಸ್ಟೇ ಸೇರಿದಂತೆ ಯಾವುದೇ ರೀತಿಯ ಯೋಜನೆಗಳಿಗೂ ಆಸ್ಪದ ನೀಡದಂತೆ ವರದಿಯಲ್ಲಿ ಹೇಳಲಾಗಿತ್ತು. ಆದರೆ, ಈ ವರದಿಯನ್ನು ಜಾರಿಗೊಳಿಸುವ ಬದಲು ವರದಿಯೇ ಅಗತ್ಯವಿಲ್ಲ ಎಂದು ರಾಜ್ಯ ಸರಕಾರ ಆಕ್ಷೇಪ ಸೂಚಿಸಿತ್ತು. ಜನರ ವಿರೋಧ ಇದೆಯೆಂದು ಹೇಳುವ ಮೂಲಕ ಎಸ್ಟೇಟ್ ಮಾಫಿಯಾ, ಹೋಮ್ ಸ್ಟೇ ಮಾಫಿಯಾ, ಬೃಹತ್ ಯೋಜನೆಗಳ ಪರ ನಿಂತಿತ್ತು.
Why kasturirangan report is not yet cancelled Questions Ramanath Rai during a press meet that was held at Congress office in Mangalore.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm