ಬ್ರೇಕಿಂಗ್ ನ್ಯೂಸ್
08-12-21 09:17 pm HK Desk news ಕರಾವಳಿ
ಮಂಗಳೂರು, ಡಿ.8 : ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು, ಅಲ್ಲಿನ ಸದಸ್ಯರಿಗೆ ಸಿಗುವ ಸವಲತ್ತನ್ನು ಇನ್ನಷ್ಟು ಹೆಚ್ಚಿಸಬೇಕು ಎನ್ನೋದು ನನ್ನ ಕಳಕಳಿ. ಈ ಬಗ್ಗೆ ಪ್ರಾಮಾಣಿಕವಾಗಿ ವಿಧಾನ ಪರಿಷತ್ತಿನಲ್ಲಿ ನಿಮ್ಮ ಪರವಾದ ಧ್ವನಿಯಾಗುತ್ತೇನೆ ಎಂಬುದನ್ನು ಹೇಳಬಲ್ಲೆ. ಹಾಗಾಗಿ ನನಗೆ ನಿಮ್ಮ ಮೊದಲ ಪ್ರಾಶಸ್ತ್ಯದ ಮತಗಳನ್ನು ಕೊಟ್ಟು ಗೆಲ್ಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ದ್ವಿಸದಸ್ಯ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿ ಮಂಜುನಾಥ ಭಂಡಾರಿ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಜುನಾಥ ಭಂಡಾರಿ, ಸ್ಥಳೀಯಾಡಳಿತ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಏಳು ವರ್ಷಗಳ ಕಾಲ ಅಧ್ಯಯನ ಮಾಡಿದ್ದೇನೆ. ಆ ವಿಷಯದಲ್ಲಿಯೇ ಪಿಎಚ್ ಡಿ ಮಾಡಿದ್ದೇನೆ. ಹಾಗಾಗಿ ಈ ವ್ಯವಸ್ಥೆ ಹೇಗೆ ಭಿನ್ನವಾಗಿದೆ ಮತ್ತು ಜನರಿಗೆ ಹೇಗೆ ಹೆಚ್ಚು ಹತ್ತಿರ ಎನ್ನುವುದನ್ನು ಗುರುತಿಸಿದ್ದೇನೆ. ಚುನಾವಣೆಗೆ ನಿಲ್ಲುವ ಮೊದಲೇ ಇಲ್ಲಿನ ಮತದಾರರು, ಇಲ್ಲಿನ ವ್ಯವಸ್ಥೆಯ ಚಿತ್ರಣದ ಬಗ್ಗೆ ಅಧ್ಯಯನ ಕೈಗೊಂಡಿದ್ದೆ. ಈ ಬಗ್ಗೆ ನನಗೆ ಸ್ಪಷ್ಟ ಕಲ್ಪನೆಗಳಿದ್ದವು. ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಗೊಂದಲ ಕೇಳಿಬಂದರೂ, ಅದರಿಂದ ವಿಚಲಿತನಾಗಿಲ್ಲ. ಅದೊಂದು ರೀತಿ ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದು ಬಂದ ಹಾಗೆ. ಅದರಿಂದ ನಕಾರಾತ್ಮಕ ಪರಿಣಾಮ ಅಂತೂ ಆಗಿಲ್ಲ. ಪಕ್ಷ ನಿಷ್ಠರಿಗೆ ಅವಕಾಶ ಕೊಡಿ ಎಂದು ಕೇಳಿದ್ದೆ ಅಷ್ಟೇ..
ಪಕ್ಷ ಅವಕಾಶ ಕೊಟ್ಟರೆ, ನನ್ನ ಅಂಕಿ ಅಂಶಗಳು ನನಗೆ ನೆರವಿಗೆ ಬರುತ್ತಿದ್ದವು. ಇಲ್ಲದಿದ್ದರೆ ಪಕ್ಷದ ಜಿಲ್ಲಾಧ್ಯಕ್ಷರಿಗೆ ನನ್ನ ಅಧ್ಯಯನದ ಪ್ರತಿಯನ್ನು ಕೊಟ್ಟು ಬಿಡುವುದು ಎನ್ನುವುದನ್ನು ಮೊದಲೇ ನಿರ್ಧರಿಸಿದ್ದೆ. ಎರಡು ಜಿಲ್ಲೆಯಲ್ಲಿ ಒಟ್ಟು 6040 ಮತಗಳಿದ್ದು ಕಾಂಗ್ರೆಸ್ ಪರವಾಗಿ 1900 ರಷ್ಟು ಮತದಾರರಿದ್ದಾರೆ ಎಂಬುದನ್ನು ಆರು ತಿಂಗಳ ಮೊದಲೇ ಲೆಕ್ಕ ಹಾಕಿದ್ದೆ. ಕಾಂಗ್ರೆಸ್ ಪಕ್ಷದ 1500 ಮಂದಿಯನ್ನು ನೇರವಾಗಿ ಭೇಟಿಯಾಗಿದ್ದೇನೆ. ಮೊದಲ ಪ್ರಾಶಸ್ತ್ಯದಲ್ಲಿ ಗೆಲ್ಲುವುದಕ್ಕೆ ಎರಡು ಸಾವಿರ ಮತಗಳು ಬೇಕಾಗುತ್ತವೆ. ನಮ್ಮಲ್ಲಿ ಸ್ವಲ್ಪ ಮತಗಳ ಕೊರತೆ ಇದ್ದರೂ, ನನ್ನ ಅಭಿಮಾನಿಗಳು, ಪಕ್ಷೇತರರು, ಗ್ರಾಮ ಪಂಚಾಯತ್ ಪ್ರತಿನಿಧಿಗಳು ಕೈಬಿಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ಮಂಜುನಾಥ ಭಂಡಾರಿ ಹೇಳಿದರು.

ಈ ಹಿಂದೆ ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಲು ನನಗೆ ಪಕ್ಷ ಅವಕಾಶ ಕೊಟ್ಟಿತ್ತು. ನನಗೆ ಯಾವುದೇ ಜಾತಿ ಬಲ, ಹೆಸರಿನ ಬಲ ಇರಲಿಲ್ಲ. ಆದರೂ, ನಾನೊಬ್ಬ ನಿಷ್ಠಾವಂತ ಕಾರ್ಯಕರ್ತ. ಶಿವಮೊಗ್ಗದಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೆಲಸ ಮಾಡಿದ್ದೆ ಅನ್ನುವುದನ್ನು ಪರಿಗಣಿಸಿ ಟಿಕೆಟ್ ಕೊಟ್ಟಿದ್ದರು. ಈಗ ಮತ್ತೆ ಅವಕಾಶ ಕೊಟ್ಟಿದ್ದಾರೆ. ಪಂಚಾಯತ್ ಪ್ರತಿನಿಧಿಗಳ ಪರ ಧ್ವನಿಯಾಗಿ ನಿಲ್ಲಲಿದ್ದೇನೆ. ನಿಮ್ಮ ಕನಸನ್ನು ಈಡೇರಿಸುತ್ತೇನೆಂಬ ಪ್ರಾಮಾಣಿಕ ಭರವಸೆಯನ್ನು ಕೊಡಲಿದ್ದೇನೆ. ಈಗ ನಮ್ಮ ಸರಕಾರ ಅಧಿಕಾರದಲ್ಲಿ ಇಲ್ಲ. ಹಾಗಾಗಿ ಹೆಚ್ಚಿನದನ್ನು ಹೇಳಿ ಮತದಾರರಿಗೆ ಮೋಸ ಮಾಡುವುದಿಲ್ಲ ಎಂದರು ಭಂಡಾರಿ.
ಕೇರಳದಲ್ಲಿರುವಂತೆ ಪಂಚಾಯತ್ ಪ್ರತಿನಿಧಿಗಳಿಗೆ ಮಾಸಾಶನ ನೀಡಬೇಕು ಎಂಬ ಬಗ್ಗೆ ಪ್ರಸ್ತಾಪವಿದೆ. ಅದರ ಬಗ್ಗೆ ಅಧ್ಯಯನ ಕೈಗೊಂಡು ಅನುಷ್ಠಾನ ಯೋಗ್ಯವಾಗಿದ್ದರೆ, ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಮಂಜುನಾಥ ಭಂಡಾರಿ ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು.
Mangalore I will be your voice in the assembly states Manjunath Bhandary contestant for state legislative council elections. He spoke addressing media persons here in Congress office.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm