ಬ್ರೇಕಿಂಗ್ ನ್ಯೂಸ್
02-11-21 09:54 pm Mangaluru Correspondent ಕರಾವಳಿ
ಮಂಗಳೂರು, ನ.2: ನಗರ ಸಿಸಿಬಿ ಪೊಲೀಸರ ಮೇಲೆ ಗಂಭೀರ ಆರೋಪಕ್ಕೀಡಾಗಿದ್ದ ಕಾರು ಮಾರಾಟ ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ ಆಗಿನ ಸಿಸಿಬಿ ಎಸ್ಐ ಕಬ್ಬಾಳರಾಜ್ ಮತ್ತು ಸಿಇಎನ್ ಪಾಂಡೇಶ್ವರ ಠಾಣೆಯಲ್ಲಿ ಇನ್ಸೆಪೆಕ್ಟರ್ ಆಗಿದ್ದ ರಾಮಕೃಷ್ಣ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.
ಕಳೆದ 2020ರ ನವೆಂಬರ್ ತಿಂಗಳಲ್ಲಿ ಹಣ ಡಬ್ಲಿಂಗ್ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇರಳ ಮೂಲದ ಆರೋಪಿಗಳನ್ನು ಬಿಡುಗಡೆ ಮಾಡಲು ಅವರಲ್ಲಿದ್ದ ಐಷಾರಾಮಿ ಕಾರನ್ನು ಪಡೆದು ಮಾರಾಟ ಮಾಡಿದ್ದಾರೆಂದು ಆರೋಪ ಕೇಳಿಬಂದಿತ್ತು. ಆನಂತರ, ಈ ವಿಚಾರ ಮಾಧ್ಯಮಗಳಲ್ಲಿ ಬಂದು ಭಾರೀ ಚರ್ಚೆಯಾಗಿತ್ತು. ಅದೇ ವೇಳೆಗೆ, ಮಂಗಳೂರಿನ ಹಲವರು ಸಿಸಿಬಿ ಪೊಲೀಸರ ವಿರುದ್ಧ ಆರೋಪ ಹೊರಿಸಿ ಡಿಜಿಪಿಗೆ ದೂರು ನೀಡಿದ್ದರು. ಆಗ ಮಂಗಳೂರಿನಲ್ಲಿ ಕಮಿಷನರ್ ಆಗಿದ್ದ ವಿಕಾಸ್ ಕುಮಾರ್ ವಿರುದ್ಧವೂ ಆರೋಪ ಕೇಳಿಬಂದಿತ್ತು. ಜಾಗ್ವಾರ್ ಮತ್ತು ಬಿಎಂಡಬ್ಲ್ಯು ಕಾರನ್ನು ಬೆಂಗಳೂರಿನ ವ್ಯಕ್ತಿಗೆ ಮಾರಾಟ ಮಾಡಿದ್ದರು ಎನ್ನಲಾಗಿತ್ತು.
ಇದರ ಬೆನ್ನಲ್ಲೇ ಡಿಜಿಪಿ ಪ್ರವೀಣ್ ಸೂದ್, ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಕ್ಕೀಡಾಗಿದ್ದ ಕಬ್ಬಾಳರಾಜ್ ಮತ್ತು ರಾಮಕೃಷ್ಣ ಹಾಗೂ ಇನ್ನಿಬ್ಬರು ಪೊಲೀಸ್ ಸಿಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಿ, ಒಟ್ಟು ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶ ಮಾಡಿದ್ದರು. ಫೆಬ್ರವರಿ ಕೊನೆಯ ವಾರದಲ್ಲಿ ಇವರು ಸಸ್ಪೆಂಡ್ ಆಗಿದ್ದರು. ಆದರೆ, ಯಾವುದೇ ಆರೋಪ ಬಂದು ಇಲಾಖಾ ತನಿಖೆಯ ಕಾರಣಕ್ಕೆ ಅಮಾನತುಗೊಂಡರೆ, ಅಂತಹ ಅಧಿಕಾರಿಗಳು ಆರು ತಿಂಗಳ ವರೆಗೆ ಮಾತ್ರ ಅಮಾನತಿನಲ್ಲಿ ಇರುತ್ತಾರೆ. ಆನಂತರ ಸಹಜವಾಗೇ ಅಮಾನತು ಅವಧಿ ಮುಗಿದು ಹೋಗುತ್ತದೆ. ಇಬ್ಬರು ಅಧಿಕಾರಿಗಳು ಅಮಾನತುಗೊಂಡು ಅಕ್ಟೋಬರ್ ತಿಂಗಳಿಗೆ ಎಂಟು ತಿಂಗಳಾಗುತ್ತದೆ. ಅದರಂತೆ, ಡಿಜಿಪಿ ಪ್ರವೀಣ್ ಸೂದ್ ಅವರನ್ನು ಮತ್ತೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದಾರೆಂದು ತಿಳಿದುಬಂದಿದೆ.
ನಿವೃತ್ತಿ ಅಂಚಿನಲ್ಲಿರುವ ರಾಮಕೃಷ್ಣ ಅವರನ್ನು ಮಂಗಳೂರಿನ ಡಿಸಿಆರ್ ಇ (ನಾಗರಿಕ ಹಕ್ಕು ನಿರ್ದೇಶನಾಲಯ) ಯೂನಿಟ್ ಗೆ ಪೋಸ್ಟಿಂಗ್ ಕೊಡಲಾಗಿದೆ. ಕಬ್ಬಾಳರಾಜ್ ಅವರನ್ನು ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾಯಿಸಿದ್ದು, ಬೆಂಗಳೂರಿನಲ್ಲಿ ಕರ್ತವ್ಯಕ್ಕೆ ನಿಯೋಜನೆ ಆಗಲಿದ್ದಾರೆ. ಆಬಳಿಕ ಅಲ್ಲಿಂದ ಬೇರಾವುದೇ ಜಿಲ್ಲೆಗಳಿಗೆ ತೆರಳಲು ಅವಕಾಶ ಇರುತ್ತದೆ.
Mangalore Luxury car missing in CCB Police Custody Suspended Kabbal Raj and Ramkrishana revoked to duty after eight months. DGP Praveen Sood has issued a letter on February 27 to suspend two police officers in connection with the missing of a luxury car worth Rs 50 lakh, which was seized by the Mangaluru city police. The SI of Chikkamagaluru DCRB and former SI of CCB Kabbal Raj, and Inspector of Narcotic and Economic Offences police station Ramakrishna are the two police officers suspended by the DGP.
30-07-25 06:28 pm
Bangalore Correspondent
Dharmasthala Burial Site, Atm, Pan Card Found...
30-07-25 05:42 pm
Al Qaeda Arrest, Bangalore: ಕರ್ನಾಟಕ ರಾಜಧಾನಿಗೂ...
30-07-25 11:40 am
Durgaamba Bus Accident, Shivamogga: ಮಂಗಳೂರಿನಿ...
30-07-25 10:33 am
Kerala Nurse Nimisha Priya: ಕೇರಳ ನರ್ಸ್ ನಿಮಿಷ...
29-07-25 01:31 pm
30-07-25 09:06 am
HK News Desk
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
30-07-25 11:05 pm
Mangalore Correspondent
Dharmasthala Second Day of Exhumation, SIT: ಶ...
30-07-25 03:00 pm
Shirur Landslide, Malayalam Film: ಶಿರೂರು ಗುಡ್...
30-07-25 09:04 am
No Evidence, Dharmasthala Burial, SIT: ಹೆಣ ಹೂ...
29-07-25 09:56 pm
Dharmasthala case, SIT Begins Excavation, Upd...
29-07-25 02:20 pm
30-07-25 10:42 pm
Bangalore Correspondent
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm