ಬ್ರೇಕಿಂಗ್ ನ್ಯೂಸ್
05-07-21 10:53 pm Giridhar Shetty, Mangaluru ಕರಾವಳಿ
ಮಂಗಳೂರು, ಜುಲೈ 5: ಕೊರೊನಾ ಪೀಡೆಯಿಂದಾಗಿ ಕಳೆದ ಒಂದು ವರ್ಷದಿಂದ ಪೂರ್ತಿಯಾಗಿ ಶಾಲೆ, ಕಾಲೇಜಿಗೆ ಬ್ರೇಕ್ ಬಿದ್ದಿದೆ. ಪ್ರಾಥಮಿಕ ಶಾಲೆಗಳಲ್ಲಿ ತರಗತಿ ಆಗದಿದ್ದರೂ, ಹೇಗೂ ಪಾಸ್ ಮಾಡುತ್ತಾರೆಂಬ ನೆಲೆಯಲ್ಲಿ ದೊಡ್ಡ ಚಿಂತೆ ಇಲ್ಲ. ಆದರೆ, ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ, ಪೀಜಿ ವಿದ್ಯಾರ್ಥಿಗಳಿಗೆ ತಲೆನೋವು ಶುರುವಾಗಿದೆ. ಒಂದು ವರ್ಷದಿಂದ ಆಫ್ ಲೈನ್ ಕ್ಲಾಸ್ ಇಲ್ಲ. ಒಂದಷ್ಟು ಆನ್ಲೈನ್ ಕ್ಲಾಸ್ ಮಾಡಿದ್ದಾರೆ. ಆದರೆ, ಅದರಿಂದ ವಿಷಯ ಅರ್ಥ ಆಗಿದ್ದು ಅಷ್ಟಕ್ಕಷ್ಟೇ ಎಂಬ ಭಾವನೆಯಿದೆ.
ಇದೀಗ ರಾಜ್ಯದಲ್ಲಿ ಕಾಲೇಜು ಆರಂಭಿಸಲು ಕಸರತ್ತು ನಡೆಯುತ್ತಿದೆ. ಜೊತೆಗೆ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಕ್ಲಾಸ್ ಆರಂಭಿಸಿದ ಕೂಡಲೇ ಬಾಕಿಯುಳಿದ ಸೆಮಿಸ್ಟರ್ ಪರೀಕ್ಷೆ ಪೂರ್ತಿಗೊಳಿಸುವಂತೆ ಸೂಚನೆ ನೀಡಲಾಗಿದೆ. ಇದರಿಂದಾಗಿ ಪದವಿ ವಿದ್ಯಾರ್ಥಿಗಳಿಗೆ ಚಿಂತೆ ಹತ್ತಿಕೊಂಡಿದೆ. ತರಗತಿ ಇಲ್ಲದೆ ಮನೆಯಲ್ಲಿ ಕುಳಿತಿದ್ದವರು ಸಡನ್ನಾಗಿ ಪರೀಕ್ಷೆ ಬರೆಯಬೇಕೆಂದರೆ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮದ ಮಂದಿಗೆ ಫೋನ್ ಮಾಡಿ, ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಆರಂಭಿಸಿದ್ದಾರೆ.
ಬಿಕಾಂ ಮೊದಲ ವರ್ಷದ ವಿದ್ಯಾರ್ಥಿಯೊಬ್ಬ ಹೇಳುವ ಪ್ರಕಾರ, ಈ ಬಾರಿ ಫೆಬ್ರವರಿಯಲ್ಲಿ ಒಂದು ತಿಂಗಳು ಮಾತ್ರ ಆಫ್ ಲೈನ್ ಕ್ಲಾಸ್ ಆಗಿದೆ. ಉಳಿದಂತೆ, ಆನ್ಲೈನ್ ಕ್ಲಾಸ್ ಮಾಡಿದ್ದಾರೆ. ಅರ್ಥ ಆಗಿಲ್ಲ ಅಂತಲ್ಲ. ಆದರೆ, ತುಂಬ ಗೊಂದಲ ಇದೆ. ಹಾಗಾಗಿ ಈಗ ಕ್ಲಾಸ್ ಆರಂಭ ಆದಕೂಡಲೇ ಪರೀಕ್ಷೆ ಮಾಡುವುದು ಬೇಡ. ಕನಿಷ್ಠ ಒಂದು ತಿಂಗಳಾದ್ರೂ ಕ್ಲಾಸ್ ಮಾಡಿ, ಆಮೇಲೆ ಪರೀಕ್ಷೆ ಮಾಡಲಿ. ನಮಗೆ ತರಗತಿ ಮತ್ತು ಪರೀಕ್ಷೆಗೆ ಹೊಂದಿಕೊಳ್ಳಲು ಸುಲಭವಾಗುತ್ತದೆ ಎನ್ನುತ್ತಾನೆ.
ಇನ್ನೊಬ್ಬ ಪದವಿ ವಿದ್ಯಾರ್ಥಿ ಕೂಡ ಅದೇ ಮಾತನ್ನು ಹೇಳಿದ್ದಾನೆ. ನಮಗೆ ಈ ಬಾರಿ ಮೊದಲ ಸೆಮಿಸ್ಟರ್ ಪರೀಕ್ಷೆಯೇ ಪೂರ್ತಿಯಾಗಿಲ್ಲ. ಕಳೆದ ಬಾರಿ ಮಾರ್ಚ್ ನಲ್ಲಿ ಎಕ್ಸಾಂ ಆಗುತ್ತಿದ್ದಾಗಲೇ ಕೋವಿಡ್ ಕಾರಣದಿಂದ ಸ್ಟಾಪ್ ಆಗಿತ್ತು. ಕೆಲವು ಪದವಿಗಳಲ್ಲಿ ನಾಲ್ಕೈದು ಸಬ್ಜೆಕ್ಟ್ ಅಷ್ಟೇ ಪರೀಕ್ಷೆ ಆಗಿದೆ. ಪಿಜಿಯಲ್ಲೂ ಹಾಗೆಯೇ ಪೆಂಡಿಂಗ್ ಇದೆ. ಈಗ ಬಾಕಿಯುಳಿದ ಎಕ್ಸಾಂ ನಡೆಸುವುದಾಗಿ ಹೇಳುತ್ತಿದ್ದಾರೆ. ಮೊದಲಿಗೆ ಪರೀಕ್ಷೆ ಆಮೇಲೆ ಕ್ಲಾಸ್ ಅಂತಿದ್ದಾರೆ. ಆನ್ಲೈನಲ್ಲೇ ಎಕ್ಸಾಂ ಮಾಡಿದ್ರೆ ಓಕೆ. ಆಫ್ ಲೈನ್ ಪರೀಕ್ಷೆ ಬರೆಯಲು ಸ್ವಲ್ಪ ಕಷ್ಟ. ಯುನಿವರ್ಸಿಟಿಯವರು ಸ್ವಲ್ಪ ಎಡ್ಜಸ್ಟ್ ಮಾಡ್ಕೋಬೇಕು. ನಾವು ಕಾಲೇಜಿನಲ್ಲಿ ಉಪನ್ಯಾಸಕರಲ್ಲಿ ಹೇಳಿದ್ದೇವೆ. ಕಾಲೇಜಿನವರು ಯುನಿವರ್ಸಿಟಿಯಿಂದ ಯಾವ ಗೈಡ್ ಲೈನ್ಸ್ ಬರುತ್ತೋ ಅದನ್ನು ಫಾಲೋ ಮಾಡಬೇಕಾಗುತ್ತದೆ ಎನ್ನುತ್ತಿರುವುದಾಗಿ ಹೇಳಿದ್ದಾನೆ.
ಲಸಿಕೆ ಕೊಟ್ಟ ಬಳಿಕ ಕಾಲೇಜು ತರಗತಿ
ಬಹುತೇಕ ಕಾಲೇಜುಗಳಲ್ಲಿ ಮೊದಲ ಆದ್ಯತೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಿಬಂದಿಗೆ ಲಸಿಕೆ ಕೊಡಲಾಗಿದೆ. ಕೆಲವು ಕಾಲೇಜುಗಳಲ್ಲಿ 80 ಶೇಕಡಾ ಮಂದಿಗೆ ಒಂದು ಬಾರಿಯ ಡೋಸ್ ಕೊಡಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿಯೂ 50 ಶೇ. ಮಂದಿಗೆ ಲಸಿಕೆ ನೀಡಲಾಗಿದೆ ಎನ್ನುವ ಮಾಹಿತಿಯಿದೆ. ಲಸಿಕೆ ನೀಡಿದ ಬಳಿಕ ತರಗತಿ ಆರಂಭಿಸಬಹುದು ಎಂದು ರಾಜ್ಯ ಸರಕಾರ ಸೂಚನೆ ನೀಡಿದೆ. ಆದರೆ, ಈ ಬಗ್ಗೆ ಆದೇಶ ನೀಡಿಲ್ಲ. ಬಹುತೇಕ ಜುಲೈ 15ರ ವೇಳೆಗೆ ಬಹುತೇಕ ವಿದ್ಯಾರ್ಥಿಗಳಿಗೆ ಒಂದು ಡೋಸ್ ಲಸಿಕೆ ಆಗುವ ಸಾಧ್ಯತೆಯಿದೆ. ಅದೇ ಸಂದರ್ಭದಲ್ಲಿ ಕಾಲೇಜು ತೆರೆಯುವ ಬಗ್ಗೆ ರಾಜ್ಯ ಸರಕಾರ ಆದೇಶ ಹೊರಡಿಸುವ ಸಾಧ್ಯತೆಯಿದೆ.
ಅದರಂತೆ, ಈ ನಡುವೆ ಕೊರೊನಾ ಪಾಸಿಟಿವ್ ಹೆಚ್ಚದೇ ಇದ್ದರೆ, ಆಗಸ್ಟ್ ವೇಳೆಗೆ ಬಹುತೇಕ ಕಾಲೇಜು ಆರಂಭವಾಗಲಿದೆ ಎನ್ನಲಾಗುತ್ತಿದೆ. ಆದರೆ, ಹೆಚ್ಚಿನ ಕಾಲೇಜುಗಳ ವಿದ್ಯಾರ್ಥಿಗಳ ಅಳಲು ಒಂದೇ. ಕಾಲೇಜು ಆರಂಭಿಸಿದ ಕೂಡಲೇ ಪರೀಕ್ಷೆ ಮಾಡಬೇಡಿ. ಪರೀಕ್ಷೆಗೆ ಒಂದಷ್ಟು ರೆಡಿ ಮಾಡಿಕೊಳ್ಳಲು ಕ್ಲಾಸ್ ಮಾಡಿ ಎನ್ನೋದು. ಕೆಲವು ವಿದ್ಯಾರ್ಥಿಗಳು ಹೇಳುವ ಪ್ರಕಾರ 80 ಶೇ. ಮಂದಿಯ ಅಭಿಪ್ರಾಯ ಇದೇ ರೀತಿ ಇದೆಯಂತೆ. ಹೀಗಾಗಿ ತಮ್ಮ ಅಳಲನ್ನು ಯೂನಿವರ್ಸಿಟಿಯ ಅಧಿಕಾರಿಗಳ ಗಮನಕ್ಕೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಆಪತ್ತಿನ ಕಾರಣ ಶಾಲೆ, ಕಾಲೇಜಿಗೆ ತೊಂದರೆಯಾಗಿದೆ. ಹಾಗೆಂದು, ನಮ್ಮ ಭವಿಷ್ಯಕ್ಕೆ ಹೊಡೆತ ಕೊಡಬೇಡಿ. ಕಲಿಯುವುದನ್ನು ಚೆನ್ನಾಗಿಯೇ ಕಲಿಸಿಬಿಡಿ ಎಂದು ವಿದ್ಯಾರ್ಥಿಗಳು ಅಳಲು ಹೇಳಿಕೊಂಡಿದ್ದಾರೆ.
Once opened, the university plans to complete the pending Degree exams offline for which students have taken social media to oppose it. Most Students are demanding for cancellation of exams and the rest of them are affirming to conduct online exams.
08-08-25 06:23 pm
HK News Desk
Bigg Boss Rajath, Death Threats, Soujanya: ಯೂ...
08-08-25 11:20 am
ಸರ್ಕಾರಿ ಕೆಲಸ ಕೊಡಿಸೋದಾಗಿ 25 ಲಕ್ಷ ಪಡೆದು ವಂಚನೆ ;...
07-08-25 10:18 pm
ಧರ್ಮಸ್ಥಳ ಘರ್ಷಣೆ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ, ಎ...
07-08-25 05:50 pm
Dharmasthala burial case, Gag Order: ಮಾಧ್ಯಮ ನ...
06-08-25 10:51 pm
07-08-25 10:02 pm
HK News Desk
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
08-08-25 05:54 pm
HK News Desk
ಧರ್ಮಸ್ಥಳ ಸ್ನಾನಘಟ್ಟದ ಬಳಿಕ ಹೊಸ ಜಾಗ ಗುರುತಿಸಿದ ದೂ...
08-08-25 04:42 pm
Full Powers, Dharmasthala SIT, Police: ಧರ್ಮಸ...
08-08-25 01:19 pm
ಗೋಹತ್ಯೆ ಕಾನೂನು ಹಿಂಪಡೆದ ರೀತಿಯಲ್ಲೇ ವಿದ್ಯುತ್ ನೌಕ...
08-08-25 12:24 pm
ಜಾಲತಾಣದಲ್ಲಿ ಅತಿರೇಕದ ಹೇಳಿಕೆ ; ಗಿರೀಶ್ ಮಟ್ಟೆಣ್ಣನ...
07-08-25 11:01 pm
08-08-25 12:30 pm
Bangalore Correspondent
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm
Bengalore Cyber-crime: 80 ವರ್ಷದ ವೃದ್ಧನಿಗೆ ಒಂದ...
07-08-25 08:59 pm
Kudla Rampage Attack, Ajay Anchan, Dharmastha...
06-08-25 08:02 pm