ಬ್ರೇಕಿಂಗ್ ನ್ಯೂಸ್
04-06-21 05:57 pm Mangalore Correspondent ಕರಾವಳಿ
ಮಂಗಳೂರು, ಜೂನ್ 4: ಕೊರೊನಾ ಲಸಿಕೆಯ ಕೊರತೆಯಿಂದಾಗಿ ಆರೋಗ್ಯ ಕೇಂದ್ರಗಳಲ್ಲಿ ನಿರಂತರ ಎಡವಟ್ಟು ಆಗುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ನೀಡುವ ಸೂಚನೆಯಿಂದಲೇ ಎಡವಟ್ಟು ಆಗುತ್ತಿದ್ಯಾ ಅಥವಾ ಲಸಿಕೆ ನೀಡುವ ಜವಾಬ್ದಾರಿ ವಹಿಸಿಕೊಂಡ ಸ್ಥಳೀಯ ಸಿಬಂದಿ ಎಡವಟ್ಟು ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ.. ಜನರು ಮಾತ್ರ ಲಸಿಕೆಯ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದ್ದು ಪ್ರತಿದಿನ ಬೆಳ್ಳಂಬೆಳಗ್ಗೆ ಲಸಿಕಾ ಕೇಂದ್ರಕ್ಕೆ ಬಂದು ಸರತಿ ನಿಲ್ಲುವ ಪ್ರಮೇಯ ಎದುರಾಗಿದೆ.



ಮಂಗಳೂರು ನಗರದ ಗಾಂಧಿನಗರದ ಶಾಲೆಯಲ್ಲಿ ಇಂದು ನಸುಕಿನ ನಾಲ್ಕು ಗಂಟೆಯ ವೇಳೆಗೇ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸ್ಥಳೀಯ ಕಾರ್ಪೊರೇಟರ್ ಗಣೇಶ್ ಮತ್ತಿತರ ಜನಪ್ರತಿನಿಧಿಗಳು ಮೊದಲು ಬಂದವರಿಗೆ ಲಸಿಕೆ ಎಂದು ಹೇಳಿದ್ದರಿಂದ ನೂರಾರು ಜನರು ನಾಲ್ಕು ಗಂಟೆಯ ಮೊದಲೇ ಬಂದು ಸೇರಿದ್ದರು. ಬೆಳಗ್ಗೆ ಆರು ಗಂಟೆಯ ಹೊತ್ತಿಗೆ 150ಕ್ಕೂ ಹೆಚ್ಚು ಜನರು ಸೇರಿದ್ದರು. ಬೆಳಗ್ಗೆ ಎಂಟೂವರೆ ಗಂಟೆ ಹೊತ್ತಿಗೆ ವೈದ್ಯಾಧಿಕಾರಿಗಳು ಮತ್ತು ಲಸಿಕೆ ನೀಡುವ ಸಿಬಂದಿ ಆಗಮಿಸಿದ್ದು ಇಷ್ಟೊಂದು ಜನರನ್ನು ನೋಡಿ ತಡಬಡಾಯಿಸಿದರು.


ಇಲ್ಲಿ ಸೇರಿದ ಮಾತ್ರಕ್ಕೆ ಯಾರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ. ನಮಗೆ ಜಿಲ್ಲಾಧಿಕಾರಿಗಳ ಸೂಚನೆ ಇದೆ, ಕೋವಿನ್ ಏಪ್ ನಲ್ಲಿ ರಿಜಿಸ್ಟರ್ ಮಾಡಿ ಟೋಕನ್ ಸಿಕ್ಕಿದ್ದವರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಲ್ಲದೆ, ನೋಂದಣಿ ಮಾಡಿದವರಿಗೆ ಮಾತ್ರ ಲಸಿಕೆ ಎಂದು ಅಲ್ಲಿಯೇ ಬೋರ್ಡ್ ಹಾಕಿದ್ರು. ಇದರಿಂದ ಅಲ್ಲಿ ಸೇರಿದ್ದ ಮಂದಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಜನಪ್ರತಿನಿಧಿಗಳು ನಮಗೆ ಮೆಸೇಜ್ ಮಾಡಿದ್ದರಿಂದ ಬಂದು ಸೇರಿದ್ದೆವು. ನೀವು ಈ ತರ ಹೇಳಿದರೆ, ನಾವು ಏನು ಮಾಡಬೇಕು ಎಂದು ಪ್ರಶ್ನೆ ಮಾಡುತ್ತಿದ್ದರು.
ಬೆಳ್ಳಂಬೆಳಗ್ಗೆ ಭಾರೀ ಮಳೆಯ ನಡುವೆ ವೃದ್ಧರು, ವಯಸ್ಸಾದ ಮಹಿಳೆಯರು ಕೂಡ ಬಂದು ಸರತಿ ನಿಂತಿದ್ದರು. ಈ ಬಗ್ಗೆ ಸ್ಥಳೀಯ ಮುಖಂಡರಲ್ಲಿ ಪ್ರಶ್ನೆ ಮಾಡಿದರೆ, ಸಾರಿ ಸಾರಿ ಎನ್ನುತ್ತಾ ಕೈಮುಗಿದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರು. ಗಾಂಧಿನಗರದ ಶಾಲೆಗೆ 150 ಲಸಿಕೆ ಬಂದಿದ್ದು, ಕೋವಿನ್ ಏಪ್ ನಲ್ಲಿ ನೋಂದಣಿ ಮಾಡಿದವರಿಗೆ ಮಾತ್ರ ಕೊಡಲಾಗಿತ್ತು. ಏಪ್ ನಲ್ಲಿ ನೋಂದಣಿ ಮಾಡಿಕೊಂಡವರು ನಿಧಾನಕ್ಕೆ ಬಂದು ಲಸಿಕೆ ಪಡೆದು ಸಾಗುತ್ತಿದ್ದರು.

ಲಸಿಕೆ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳೇ ಜನರನ್ನು ಗೊಂದಲಕ್ಕೆ ದೂಡಿದ್ದರು. ಕಳೆದ ಎರಡು ಮೂರು ಬಾರಿ ಇದೇ ಕೇಂದ್ರದಲ್ಲಿ ಲಸಿಕೆ ನೀಡಲಾಗಿತ್ತು. ಜನರು ನೇರವಾಗಿ ಬಂದು ಆಧಾರ್ ಕಾರ್ಡ್ ತೋರಿಸಿ ಲಸಿಕೆ ಪಡೆಯುತ್ತಿದ್ದರು. ಆದರೆ, ಎರಡು ದಿನಗಳ ಹಿಂದೆ ಜನರು ಹೆಚ್ಚಾಗಿ ಸೇರಿದ್ದಲ್ಲದೆ, ಗಲಾಟೆ ಶುರು ಮಾಡಿದ್ದರು. ಇದರಿಂದಾಗಿ ಆರೋಗ್ಯ ಇಲಾಖೆಯಿಂದಲೇ ಕೋವಿನ್ ಏಪ್ ನೋಂದಣಿ ಮಾಡಿ ಬರುವಂತೆ ಕಡ್ಡಾಯ ಮಾಡಿದ್ದರು. ಈ ವಿಚಾರ ತಿಳಿಯದೆ ಇಂದು ಮತ್ತೆ ಜನರು ಎಡವಟ್ಟು ಮಾಡಿಕೊಂಡಿದ್ದಾರೆ. ಜನಪ್ರತಿನಿಧಿಗಳೇ ಸ್ಥಳೀಯರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದ್ದರು.
Video:
Hundreds of people stand in a huge crowd for vaccine high drama created in Managudda for vaccines. Old aged people cursed authorities for their negligence.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm