ಬ್ರೇಕಿಂಗ್ ನ್ಯೂಸ್
04-06-21 12:59 pm Mangalore Correspondent ಕರಾವಳಿ
ಮಂಗಳೂರು, ಜೂನ್ 4: ಕೇರಳದ ಕಾಸರಗೋಡು ಕಡೆಗೆ ಭಾರೀ ಪ್ರಮಾಣದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ವೇಳೆ ಕೋಣಾಜೆ ಪೊಲೀಸರು ದಾಳಿ ನಡೆಸಿ ಕಾರು ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿಯಂತೆ ಪೊಲೀಸರು ಟ್ರಾಕ್ ಮಾಡುತ್ತಿದ್ದಾಗಲೇ, ಕೋಣಾಜೆಯ ವಿಶ್ವವಿದ್ಯಾನಿಲಯದ ಬಳಿಯ ಗಣೇಶ್ ಮಹಲ್ ಎಂಬಲ್ಲಿ ಕಾರು ಸಂಶಯಾಸ್ಪದವಾಗಿ ನಿಲ್ಲಿಸಿದ್ದು ಕಂಡುಬಂದಿದೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ, 10.20 ಲಕ್ಷ ಮೌಲ್ಯದ 170 ಗ್ರಾಮ್ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ.





ಕಾರಿನಲ್ಲಿದ್ದ ಕಾಸರಗೋಡು ಜಿಲ್ಲೆಯ ಉಪ್ಪಳ ಗೇಟ್ ನಿವಾಸಿಗಳಾದ ಮಹಮ್ಮದ್ ಮುನಾಫ್, ಮಹಮ್ಮದ್ ಮುಝಾಂಬಿಲ್, ಅಹಮ್ಮದ್ ಮಷೂಕ್ ಅವರನ್ನು ಬಂಧಿಸಲಾಗಿದೆ. ಡ್ರಗ್ಸ್ ಸಾಗಾಟಕ್ಕೆ ಬಳಸಿದ್ದ 5 ಲಕ್ಷ ಮೌಲ್ಯದ ಎಂಎಚ್ 14 ಜಿಡಿ 0561 ಸಂಖ್ಯೆಯ ಕಾರು ಮತ್ತು ನಾಲ್ಕು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ವಿವಿಯ ಬಳಿ ಕಾರು ನಿಲ್ಲಿಸಿದ್ದರಿಂದ ಅಲ್ಲಿ ಯಾರಿಗಾದ್ರೂ ಪೂರೈಕೆ ಮಾಡಲು ಸಂಚು ನಡೆಸಿದ್ದರೇ ಅನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.


ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದ್ದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಎಂಡಿಎಂಎ ಒಂದು ಗ್ರಾಮ್ ಡ್ರಗ್ಸಿಗೆ ಆರು ಸಾವಿರ ರೂ. ಇದ್ದು, ಸಾಮಾನ್ಯ ಜನರು ಇದನ್ನು ಬಳಕೆ ಮಾಡುವುದಿಲ್ಲ. ಹೈಫೈ ಜನರು ಮಾತ್ರ ಇದನ್ನು ಉಪಯೋಗ ಮಾಡುತ್ತಾರೆ. ಆದರೂ, ಈ ರೀತಿಯ ಡ್ರಗ್ಸನ್ನು ಬೆಂಗಳೂರು ಕಡೆಯಿಂದ ಹಾಸನ ಮಾರ್ಗವಾಗಿ ಮಂಗಳೂರು ಮೂಲಕ ಕಾಸರಗೋಡಿಗೆ ಒಯ್ಯುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದರಿಂದ ಪೊಲೀಸರು ಕಾರನ್ನು ಟ್ರಾಕ್ ಮಾಡಿದ್ದರು.
ಆರೋಪಿಗಳು ಬೆಂಗಳೂರಿನಲ್ಲಿ ಆಫ್ರಿಕನ್ ಮೂಲದ ಪ್ರಜೆಯಿಂದ ಈ ಡ್ರಗ್ಸನ್ನು ಖರೀದಿಸಿ ತರುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು, ಅವರು ಯಾರು, ಎಲ್ಲಿಯವರು ಎನ್ನುವ ಬಗ್ಗೆ ಇನ್ನಷ್ಟು ತನಿಖೆ ನಡೆಸಬೇಕಾಗಿದೆ ಎಂದು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದರು. ಎಸಿಪಿ ರಂಜಿತ್ ಕುಮಾರ್ ನೇತೃತ್ವದಲ್ಲಿ ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.


ಆರೋಪಿಗಳು ಮೂವರು ಕೂಡ ಬೆಂಗಳೂರಿನಲ್ಲಿದ್ದರು. ಮುನಾಫ್ ಬೆಂಗಳೂರಿನಲ್ಲಿ ಬಿಬಿಎ ವಿದ್ಯಾರ್ಥಿಯಾಗಿದ್ದರೆ, ಮುಝಾಮಿಲ್ ನೆಲಮಂಗಲದ ಸ್ಪೋರ್ಟ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಮಶೂಕ್, ಬೆಂಗಳೂರಿನ ಜೆಪಿ ನಗರದಲ್ಲಿ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಆಫ್ರಿಕನ್ ಪ್ರಜೆಯಿಂದ ಡ್ರಗ್ಸ್ ಖರೀದಿಸಿರುವ ವಿಚಾರ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರ ಸಹಾಯ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಶಶಿಕುಮಾರ್ ತಿಳಿಸಿದ್ದಾರೆ.
Acp Ranjith Reddy, Konaje police, and city crime branch sleuths on Friday, June 4, seized a huge quantity of MDMA crystals and arrested three people from Uppala near Mangalore University in Mangalore. As much as 170 gram worth Rs 10 lac, a car and four mobile phones were seized.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm