ತೊಕ್ಕೊಟ್ಟು ; ಸೆಕ್ಯುರಿಟಿಗೆ ಒಲಿದ ಭಾಗ್ಯಮಿತ್ರ !! ಬಡಪಾಯಿಗೆ ಒಂದು ಕೋಟಿ ಕೇರಳ ಲಾಟರಿ ಬಂಪರ್ !

08-04-21 05:46 pm       Mangalore Correspondent   ಕರಾವಳಿ

ತೊಕ್ಕೊಟ್ಟಿನ ಸೆಕ್ಯುರಿಟಿ ಗಾರ್ಡ್ ಓರ್ವರಿಗೆ ಕೇರಳ ರಾಜ್ಯದ ಭಾಗ್ಯಮಿತ್ರ ಲಾಟರಿಯ ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ ಲಭಿಸಿದೆ.

ಉಳ್ಳಾಲ: ಎ.8; ತೊಕ್ಕೊಟ್ಟಿನ ಸ್ಮಾರ್ಟ್ ಪ್ಲಾನೆಟ್ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಸೆಕ್ಯುರಿಟಿ ಗಾರ್ಡ್ ಓರ್ವರಿಗೆ ಕೇರಳ ರಾಜ್ಯದ ಭಾಗ್ಯಮಿತ್ರ ಲಾಟರಿಯ ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ ಲಭಿಸಿದೆ.

ಮೂಲತಃ ಕೇರಳ ರಾಜ್ಯದ  ಕ್ಯಾಲಿಕಟ್ ನಿವಾಸಿಯಾಗಿರುವ ಮೊಯ್ದಿನ್ ಕುಟ್ಟಿ (65) ಅವರಿಗೆ ಒಂದು ಕೋಟಿ ಬಂಪರ್ ಬಹುಮಾನ ಲಭಿಸಿದೆ. ಮೊಯ್ದಿನ್ ಕುಟ್ಟಿ ಅವರು ಕಳೆದ ಕೆಲ ವರ್ಷಗಳಿಂದ ಸ್ಮಾರ್ಟ್ ಪ್ಲಾನೆಟ್ ಕಟ್ಟಡದಲ್ಲಿ ಸೆಕ್ಯುರಿಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅವರಿಗೆ  ಕೇರಳದ ಲಾಟರಿ ತೆಗೆಯುವ ಹವ್ಯಾಸವಿದ್ದು ಕಳೆದ ವಾರ ಎಪ್ರಿಲ್ 4 ರಂದು ಡ್ರಾಗೊಳ್ಳುವ 100 ರೂಪಾಯಿ ಬೆಲೆಯ ಭಾಗ್ಯ ಮಿತ್ರ ಟಿಕೇಟನ್ನು ಕೇರಳದ ಉಪ್ಪಳದಲ್ಲಿ ಖರೀದಿಸಿದ್ದು ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ‌ ಗಿಟ್ಟಿಸಿ ಕೋಟ್ಯಾಧೀಶರಾಗಿದ್ದಾರೆ. ಮೊಯ್ದಿನ್ ಕುಟ್ಟಿಗೆ ಪತ್ನಿ ಮೂವರು ಮಕ್ಕಳಿದ್ದಾರೆ. ಕೆಲಸ ಅರಸಿ ತೊಕ್ಕೊಟ್ಟಿಗೆ ಬಂದಿದ್ದ ಮೊಯ್ದಿನ್ ಕುಟ್ಟಿ ಅವರು ಸ್ಮಾರ್ಟ್ ಪ್ಲಾನೆಟ್ ಪ್ಲಾಝಾದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 

500 ರೂಪಾಯಿ ಸಾಲ ಕೊಟ್ಟಿದ್ದ ಟೈಲರ್ 

ಕಳೆದ ಶನಿವಾರ ಮೊಯ್ದಿನ್ ಕುಟ್ಟಿ ಅವರು ಸ್ಮಾರ್ಟ್ ಪ್ಲಾನೆಟ್ ಕಟ್ಟಡದಲ್ಲಿರುವ ಒಮೇಗಾ ಟೈಲರ್ ಶಾಪ್ ಮಾಲೀಕರಾದ ರವಿ ಅವರಲ್ಲಿ 500 ರೂಪಾಯಿ ಸಾಲ ಪಡೆದು ಕೇರಳದ ಭಾಗ್ಯಮಿತ್ರ ಲಾಟರಿಯನ್ನು ಖರೀದಿಸಿದ್ದರಂತೆ. ತಾನು ಸಾಲವಾಗಿ ನೀಡಿದ ಹಣದಲ್ಲಿ ಮೊಯ್ದಿನ್ ಕುಟ್ಟಿ ಅವರಂತಹ ಬಡವನಿಗೆ ಕೋಟಿ ಬಹುಮಾನ ಬಂದ ವಿಷಯ ತಿಳಿದ ರವಿ ಅವರು ಸಂಭ್ರಮಿಸಿದ್ದು ಕುಟ್ಟಿ ಅವರನ್ನ ಅಭಿನಂದಿಸಿದ್ದಾರೆ.

ಭಾಗ್ಯಮಿತ್ರ ಲಾಟರಿಯಲ್ಲಿ 5 ಜನರಿಗೆ ತಲಾ 1 ಕೋಟಿ ಬಂಪರ್ ಬಹುಮಾನ ಲಭಿಸಿದ್ದು ಅದರಲ್ಲಿ ಮೊಯ್ದಿನ್ ಕುಟ್ಟಿ ಅವರು ಓರ್ವ ಅದೃಷ್ಟಶಾಲಿಯಾಗಿದ್ದಾರೆ.

Read: ಕೋಟಿ ಲಾಟರಿ ಕತೆಯೇ ಸುಳ್ಳು ; ಯಾಮಾರಿಸಿದ ವಾಚ್ಮನ್ ಕುಟ್ಟಿ ಪರಾರಿ !

In a big-time luck a security guard from Ullal, Mangalore has won rupees one crore Kerela lottery unexpectedly. Mohiuddin Kuti is the lucky Security Guard.