ಬ್ರೇಕಿಂಗ್ ನ್ಯೂಸ್
10-03-21 01:08 pm Mangalore Correspondent ಕರಾವಳಿ
ಉಡುಪಿ, ಮಾ.10 : 'ಭಾರತದ ಸ್ಯಾಟಲೈಟ್ ಮ್ಯಾನ್' ಎಂದೇ ಹೆಸರು ಗಳಿಸಿದ್ದ ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಸಂಸ್ಥೆಯ ಮಾಜಿ ಮುಖ್ಯಸ್ಥರಾದ ಉಡುಪಿ ಮೂಲದ ರಾಮಚಂದ್ರರಾವ್ (ಯು.ಆರ್.ರಾವ್) ಅವರ 89ನೇ ಜನ್ಮದಿನವನ್ನು ಗೂಗಲ್ ತನ್ನ ಡೂಡಲ್ ಮೂಲಕ ಬುಧವಾರ ವಿಶಿಷ್ಟವಾಗಿ ಆಚರಿಸಿದೆ.
ರಾಮಚಂದ್ರ ರಾವ್ ಉಡುಪಿ ಸಮೀಪದ ಮಾರ್ಪಳ್ಳಿಯಲ್ಲಿ 1932ರ ಮಾರ್ಚ್ 10ರಂದು ಜನಿಸಿದ್ದರು. ಇವರದು ಕೃಷಿಕ ಕುಟುಂಬವಾಗಿದ್ದು, ಬಾಹ್ಯಾಕಾಶ ವಿಜ್ಞಾನಿಯಾದ ಬಳಿಕ ಯು.ಆರ್.ರಾವ್ ಎಂದೇ ಚಿರಪರಿಚಿತರಾಗಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥರಾಗಿದ್ದ ರಾವ್, ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ರಾಮಚಂದ್ರ ರಾವ್, ಅಂತರರಾಷ್ಟ್ರೀಯ ವೈಮಾನಿಕ ಫೆಡರೇಷನ್ ಸಂಸ್ಥೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಲ್ಲಿ ಪ್ರಮುಖರು.
ಉಡುಪಿ, ಅನಂತಪುರ, ಮದ್ರಾಸ್, ಬನಾರಸ್ ಮೊದಲಾದ ಸ್ಥಳಗಳಲ್ಲಿ ಅಧ್ಯಯನ ನಡೆಸಿದ್ದರು. ಭಾರತದ ಬಾಹ್ಯಾಕಾಶ ಯೋಜನೆಯ ಪಿತಾಮಹ ಎಂದೇ ಖ್ಯಾತರಾಗಿದ್ದ ವಿಕ್ರಮ್ ಸಾರಾಭಾಯಿ ಮಾರ್ಗದರ್ಶನದಲ್ಲಿ ವಿಶ್ವ ಕಿರಣಗಳ ಬಗ್ಗೆ ಅಧ್ಯಯನ ಮಾಡಿ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಬಳಿಕ ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿ, ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ ದುಡಿದು, 1966 ರಲ್ಲಿ ಭಾರತಕ್ಕೆ ಮರಳಿದ್ದರು.
ಬಳಿಕ ಅಹ್ಮದಾಬಾದಿನಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ರಾಮಚಂದ್ರ ರಾವ್ ಆ ಬಳಿಕ ಇಸ್ರೋದಲ್ಲಿ ಸೇವೆ ಆರಂಭಿಸಿದ್ದರು. ತಮ್ಮ ಅವಧಿಯಲ್ಲಿ ಬಾಹ್ಯಾಕಾಶ ಕಕ್ಷೆಗೆ ಅನೇಕ ಉಪಗ್ರಹಗಳನ್ನು ಸೇರಿಸಿದ ಕೀರ್ತಿ ಅವರದು.
1975ರಲ್ಲಿ ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಕಕ್ಷೆಗೆ ಕಳಿಸಿದ ಕೀರ್ತಿ ಯು.ಆರ್. ರಾವ್ ಅವರಿಗೆ ಸಲ್ಲುತ್ತದೆ. ಆಬಳಿಕ ಆರ್ಯಭಟ ಸೇರಿ 18 ಉಪಗ್ರಹಗಳನ್ನು ಕಕ್ಷೆಗೆ ಕಳಿಸಿದ್ದಲ್ಲದೆ, ದೂರಸಂಪರ್ಕ ಸೇವೆ, ರಿಮೋಟ್ ಸೆನ್ಸಿಂಗ್, ಹವಾಮಾನ ಮುನ್ಸೂಚನೆ ಹೀಗೆ ಹಲವು ಸೇವೆಗಳಿಗಾಗಿ ಉಪಗ್ರಹ ಸೇವೆಯನ್ನು ಆರಂಭಿಸಿದ್ದರು. ರಾಕೆಟ್ ಟೆಕ್ನಾಲಜಿ ಅಭಿವೃದ್ಧಿಗಾಗಿ ಸ್ಪೇಸ್ ಕಮಿಷನ್ ರೂಪಿಸಿದ್ದು ಅದರ ಮೊದಲ ಅಧ್ಯಕ್ಷರಾಗಿದ್ದರು. ಬಳಿಕ ರಾಕೆಟ್ ಹಾರಿಸುವ ಹೊಣೆ ಹೊಂದಿದ್ದ ಬಾಹ್ಯಾಕಾಶ ತಂತ್ರಜ್ಞಾನದ ಇಲಾಖೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 2013ರಲ್ಲಿ ಪಿಎಸ್ ಎಲ್ ವುವಿ ರಾಕೆಟ್ ಮೂಲಕ ಭಾರತದ ಮೊದಲ ಮಂಗಳಯಾನದ ಪ್ರಯೋಗ ಕೈಗೊಳ್ಳಲಾಗಿತ್ತು. ಯು.ಆರ್. ರಾವ್ ಉಸ್ತುವಾರಿಯಲ್ಲಿ ಕೈಗೊಂಡಿದ್ದ ಉಪಗ್ರಹ ಮಂಗಳ ಗ್ರಹದ ಸುತ್ತ ಇಂದಿಗೂ ತಿರುಗುತ್ತಿದೆ.
ರಾಮಚಂದ್ರ ರಾವ್ ಸಾಧನೆಯನ್ನು ಪರಿಗಣಿಸಿ ಭಾರತ ಸರಕಾರ ಪದ್ಮ ವಿಭೂಷಣ, ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿದೆ. ನಾಸಾ ಪುರಸ್ಕಾರ, ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್ ಗೌರವಕ್ಕೂ ಪಾತ್ರರಾಗಿದ್ದರು. ಇವರು 2017ರ ಜುಲೈ 24 ರಂದು ಬೆಂಗಳೂರಿನಲ್ಲಿ ನಿಧನರಾದರು.
Google Doodle today celebrates the 89th birthday of Indian professor and scientist Udupi Ramachandra Rao, under whose guidance, the first Indian satellite 'Aryabhata' was launched in 1975.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 04:29 pm
Mangalore Correspondent
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm