ಬ್ರೇಕಿಂಗ್ ನ್ಯೂಸ್
02-03-21 02:35 pm Mangalore Correspondent ಕರಾವಳಿ
ಮಂಗಳೂರು, ಮಾ.2: ವಿಜಯಾ ಬ್ಯಾಂಕ್ ವಿಲೀನ ವಿಷಯದಲ್ಲಿ ಸೋಬಕ್ಕ ಮತ್ತು ನಳಿನ್ ಫೈನಾನ್ಸ್ ಮಿನಿಸ್ಟರ್ ನಿರ್ಮಲಕ್ಕನಿಗೆ ಮನವಿ ಕೊಡಲು ಹೋಗಿದ್ದರು. ಇಬ್ಬರಿಗೂ ಭಾಷೆ ಬರೋದಿಲ್ಲ. ನಿರ್ಮಲಕ್ಕನಿಗೆ ಹಿಂದಿ, ಇಂಗ್ಲಿಷ್ ಬಿಟ್ಟರೆ ಕನ್ನಡ ಬರೋಲ್ಲ. ಬ್ಯಾಂಕ್ ಆಫ್ ಬರೋಡಾ ಆಗುವುದನ್ನು ಹೇಳಿದ್ರಂತೆ. ಇದನ್ನು ಕೇಳಿದ ನಳಿನ್, ಬರೋಡು ಬರೋಡು ಅಂತಾ ಹೇಳ್ಕಂಡು ಬಂದ್ರಂತೆ. ಯಾಕಂದ್ರೆ, ಇವರಿಗೆ ಲೋಕಸಭೆಯಲ್ಲಿ ಮಾತನಾಡಲು ಬರಲ್ಲ. ಅಧಿಕಾರಿಗಳು, ಇತರ ಸಂಸದರ ಜೊತೆ ಮಾತನಾಡಲು ಆಗಲ್ಲ. ಇವರು ರಂಗ ಎಸ್ಸೆಸ್ಸೆಲ್ಸಿ. ಇಷ್ಟೊಂದು ಎಜುಕೇಟೆಡ್ ಜನರಿರುವ ದ.ಕ. ಕ್ಷೇತ್ರದಿಂದ ಎಸ್ಸೆಸ್ಸೆಲ್ಸಿ ಪಾಸ್ ಆಗದವನನ್ನು ಸಂಸತ್ತಿಗೆ ಕಳಿಸಿದ್ದೀರಿ... ನಮ್ಮ ಸಮಸ್ಯೆಗಳ ಬಗ್ಗೆ ಇವರು ಹೇಗೆ ಸಂಸತ್ತಿಗೆ ಮುಟ್ಟಿಸುತ್ತಾರೆ..
ಹೀಗೆಂದು ಛೇಡಿಸಿದವರು ಸಾಮಾಜಿಕ ಕಾರ್ಯಕರ್ತ, ವಕೀಲ ಸುಧೀರ್ ಮರೋಳಿ. ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ದಿನಂಪ್ರತಿ ಬಳಸುವ ವಸ್ತುಗಳ ಬೆಲೆಯೇರಿಕೆ ಖಂಡಿಸಿ ಜನಾಕ್ರೋಶ ಪ್ರತಿಭಟನಾ ಜಾಥಾ ನಡೆಯಿತು. ಸಭೆಯಲ್ಲಿ ಮಾತನಾಡಿದ ಸುಧೀರ್ ಮರೋಳಿ, ನೇರವಾಗಿ ಸಂಸದ ನಳಿನ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ರು.
ವಿಜಯಾ ಬ್ಯಾಂಕ್ ಆಯ್ತು. ಸಿಂಡಿಕೇಟ್ ಆಯ್ತು. ಕಾರ್ಪೊರೇಶನ್ ಬ್ಯಾಂಕೂ ಹೋಯ್ತು. ಸುಂದರರಾಮ ಶೆಟ್ಟರು ವಿಜಯದ ಸಂಕೇತ ಎಂದು ವಿಜಯಾ ಬ್ಯಾಂಕ್ ಹೆಸರಿಟ್ಟು ದೇಶಾದ್ಯಂತ ಬ್ಯಾಂಕ್ ಬೆಳೆಸಿದ್ದರು. ಅದನ್ನು ನಷ್ಟದಲ್ಲಿದ್ದ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಮಾಡಿದ್ರು. ಬರೋಡಾ ಒಂದು ಊರಿನ ಹೆಸರು. ಯಾಕೆ, ವಿಜಯಾ ಬ್ಯಾಂಕ್ ಹೆಸರು ಉಳಿಸಿಕೊಂಡು ವಿಲೀನ ಮಾಡಬಹುದಿತ್ತಲ್ಲ. ಗುಜರಾತಿನ ಬರೋಡಾ ಹೆಸರೇ ಆಗಬೇಕಿತ್ತೇ.. ನಮ್ಮ ಸಂಸದರಿಗೆ ಈ ಬಗ್ಗೆ ಪ್ರಶ್ನೆ ಮಾಡುವ ತಾಕತ್ತು ಇಲ್ಲ. ಇವರಿಗೆ ಜಿಲ್ಲೆಗೆ ಬೆಂಕಿ ಹಚ್ಚುವುದಕ್ಕೆ ಮಾತ್ರ ಗೊತ್ತು.
ಕಾಂಗ್ರೆಸ್ 70 ವರ್ಷದಲ್ಲಿ ಪೆಟ್ರೋಲ್ ರೇಟ್ 70 ರೂ.ಗಿಂತ ಹೆಚ್ಚು ಮಾಡಿಲ್ಲ. ಡೀಸೆಲ್ 60 ರೂ. ಹೆಚ್ಚಲಿಲ್ಲ. ಪಾಮ್ ಆಯಿಲ್, ಸೂರ್ಯಕಾಂತಿ ಎಣ್ಣೆಯ ಬೆಲೆ ನೂರು ರೂ. ಹೆಚ್ಚಲು ಬಿಡಲಿಲ್ಲ. ಈ ಜಿಲ್ಲೆಯಲ್ಲಿ ಎನ್ಎಂಪಿಟಿ ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಎಲ್ಲವನ್ನೂ ಕಾಂಗ್ರೆಸ್ ತಂದು ಅಭಿವೃದ್ಧಿ ಮಾಡಿತ್ತು. ಮೂರು ಬಾರಿ ಸಂಸದರಾದ ನಳಿನ್ ಕುಮಾರ್ ಮಾಡಿದ್ದೇನು..? ಈ ಬಗ್ಗೆ ಉತ್ತರ ಕೊಡಲು ನಳಿನ್ ಕುಮಾರ್ ಗೆ ಸಾಧ್ಯವಿದೆಯೇ ಎಂದು ಪ್ರಶ್ನೆ ಮಾಡಿದ್ರು ಸುಧೀರ್ ಮರೋಳಿ.
ಮಾಜಿ ಸಚಿವ ಯು.ಟಿ. ಖಾದರ್ ಮಾತನಾಡಿ, ಮೋದಿ ಸರಕಾರ, ಕೇಂದ್ರ ಸರಕಾರದ ಅಧೀನದ ಸಂಸ್ಥೆಗಳನ್ನು ಮಾರಲು ಹೊರಟಿದೆ. ಇಡೀ ಜಗತ್ತಿನಲ್ಲೇ ಯಾರು ಕೂಡ ಪೆಟ್ರೋಲಿಯಂ ಕಂಪನಿಗಳನ್ನು ಮಾರಿದ್ದು ಇಲ್ಲ. ವರ್ಷಕ್ಕೆ ಹತ್ತು ಸಾವಿರ ಕೋಟಿ ಲಾಭ ತರುವ ಸರಕಾರದ ಸಂಸ್ಥೆ ಬಿಪಿಸಿಎಲ್ ಅನ್ನು ಮಾರಲು ಹೊರಟಿದೆ. ಇವರಿಗೆ ಈ ಸಂಸ್ಥೆಗಳನ್ನು ಮಾರುವ ದರ್ದು ಏನಿದೆ? ವಿಶ್ವಗುರು, ಅಭಿವೃದ್ಧಿಯತ್ತ ದಾಪುಗಾಲು ಎನ್ನುತ್ತಿರುವ ಬಿಜೆಪಿಯವ್ರಿಗೆ ಜನಸಾಮಾನ್ಯರ ಕಣ್ಣೀರು ಕಾಣಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ರೇಟ್ ಜಾಸ್ತಿಯಾಗಿ ಜನರು ಕಷ್ಟ ಅನುಭವಿಸಿದ್ದು ಕಾಣಲ್ಲ. ಇದರ ಬದಲಿಗೆ, ಸರಕಾರದ ಕಂಪನಿಗಳನ್ನು ಖಾಸಗಿಯವರಿಗೆ ಮಾರುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಅಮಿತ್ ಷಾ ಮತ್ತು ಮೋದಿ, ಬಡವರ ಕಷ್ಟ ನೋಡಿ ವಿಘ್ನ ಸಂತೋಷ ಪಡುತ್ತಿದ್ದಾರೆ. 56 ಇಂಚಿನ ಎದೆಯಲ್ಲಿ ಒಂದ್ಕಡೆ ಅಂಬಾನಿ, ಇನ್ನೊಂದ್ಕಡೆ ಅದಾನಿಯನ್ನು ಕೂರಿಸ್ಕೊಂಡಿರುವ ಮೋದಿಗೆ ಜನರ ಕಷ್ಟ ಹೇಗೆ ಗೊತ್ತಾಗಬೇಕು. ಪ್ರತಿಯೊಂದಕ್ಕೂ ಹಿಂದಿನ ಸರಕಾರವನ್ನು ದೂರುತ್ತಾರೆ. ಮೋದಿ ಸರಕಾರ ಬಂದು ಏಳು ವರ್ಷ ಆಗಿದೆ. ಈಗ ಹಿಂದಿನ ಸರಕಾರ ಅಂದ್ರೆ, ಮೋದಿಯದ್ದೇ ಸರಕಾರ ಆಗುತ್ತೆ. ಇಂದಿರಾ, ನೆಹರು ಏನು ಮಾಡಿದ್ರು ಅಂತಾರೆ. ಅವರು ಮಾಡಿದ್ದನ್ನು ನೀವು ಮಾರುತ್ತಿದ್ದೀರಿ. ಅವರೆಂದೂ ದೇಶವನ್ನು ಮಾರುವ ಸ್ಥಿತಿಗೆ ತಂದಿಲ್ಲ ಎಂದು ಮೂದಲಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಶಾಹುಲ್ ಹಮೀದ್, ಜೆ.ಆರ್. ಲೋಬೊ, ಮೊಯ್ದೀನ್ ಬಾವಾ ಸೇರಿದಂತೆ ನೂರಾರು ಕಾರ್ಯಕರ್ತರು ಸೇರಿದ್ದರು. ಕ್ಲಾಕ್ ಟವರ್ ನಿಂದ ಎತ್ತಿನ ಗಾಡಿಯಲ್ಲಿ ಗ್ಯಾಸ್ ಸಿಲಿಂಡರನ್ನು ತಲೆಯಲ್ಲಿ ತುಂಬಿಕೊಂಡು ಶಾಲೆಟ್ ಪಿಂಟೋ ಮೆರವಣಿಗೆ ಬಂದರು.
Sudhir Kumar Maroli slams at Naleen Kumar Kateel in Mangalore. Says he haven't even passed SSLC during a protest held at state bank in Mangalore.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 11:11 pm
Mangalore Correspondent
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
Dharmasthala Panchayat, RTI: 38 ವರ್ಷಗಳಲ್ಲಿ 27...
16-08-25 04:45 pm
Expert PU College Announces ‘Xcelerate 2025’...
15-08-25 09:04 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm