ಬ್ರೇಕಿಂಗ್ ನ್ಯೂಸ್
13-02-21 04:22 pm Mangalore Correspondent ಕರಾವಳಿ
ಮಂಗಳೂರು, ಫೆ.13: ಸಮುದ್ರದಲ್ಲಿ ಏನೆಲ್ಲಾ ಮೀನುಗಳಿವೆ, ಜಲಚರಗಳಿವೆ ಅನ್ನೋದ್ರ ಬಗ್ಗೆ ಲೆಕ್ಕ ಇಟ್ಟವರಿಲ್ಲ. ಈವತ್ತಿಗೂ ಭೂಮಿಯ ಮೇಲಿರುವ ಜೀವಿಗಳಿಗಿಂತ ಹೆಚ್ಚು ಜೀವಿಗಳು ಸಮುದ್ರದಲ್ಲೇ ಇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇಲ್ಲೊಂದು ಅಪರೂಪದ ಮೀನು ಎದುರಾಗಿದ್ದು, ಬೋಟನ್ನೇ ತೂತು ಮಾಡಿ ಹುಬ್ಬೇರುವಂತೆ ಮಾಡಿದೆ.
ಎರಡು ದಿನಗಳ ಹಿಂದೆ ಮಂಗಳೂರಿನಿಂದ ಆಳಸಮುದ್ರಕ್ಕೆ ತೆರಳಿದ್ದ ಮೀನುಗಾರಿಕಾ ಬೋಟಿಗೆ ಬೃಹತ್ ಮೀನೊಂದು ಡಿಕ್ಕಿಯಾಗಿ ಬೋಟನ್ನೇ ತೂತು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ಕು ದಿನಗಳ ಹಿಂದೆ ಆಳಸಮುದ್ರಕ್ಕೆ ಹೋಗಿದ್ದ ಜಲಕಿರಣ್ ಎಂಬ ಹೆಸರಿನ ಉಳ್ಳಾಲದ ಬೊಕ್ಕಪಟ್ಣದ ಬೋಟಿಗೆ ಮೀನು ಡಿಕ್ಕಿಯಾಗಿದ್ದು, ಅದರ ಚೂಪಾದ ತುದಿ ಬೋಟಿನಲ್ಲಿ ತುಂಡಾಗಿ ಉಳಿದುಕೊಂಡಿತ್ತು. ಅಷ್ಟೇ ಅಲ್ಲ, ಬೋಟ್ ಎರಡು ಇಂಚು ಅಗಲದಲ್ಲಿ ತೂತಾಗಿ ಈಗ ರಿಪೇರಿಗೆ ಹೋಗಿದೆ. ಈ ಅಪರೂಪದ ಮೀನಿನ ಬಗ್ಗೆ ಬೋಟ್ ಮಾಲಕ ಕ್ಯಾ.ಜಯಪ್ರಕಾಶ್ ಅವರಲ್ಲಿ ಕೇಳಿದರೆ, ಭಾರೀ ರಸವತ್ತಾಗಿ ವಿವರಣೆ ನೀಡಿದ್ದಾರೆ.
ಆ ಮೀನಿಗೆ ಇಂಗ್ಲಿಷ್ ನಲ್ಲಿ ಮಾರ್ಲಿನ್ ಮೀನು ಎಂದು ಹೇಳುತ್ತಾರೆ. ಮರ್ಲಿನ್ ಅಂದರೆ ಸ್ಥಳೀಯವಾಗಿ ಕೋಟಿಗಿಡ ಎಂದೂ ಕರೆಯುತ್ತಾರೆ. ಈ ರೀತಿಯ ಮೀನುಗಳು ಆಳ ಸಮುದ್ರದಲ್ಲಿ ಮಾತ್ರ ಕಾಣ ಸಿಗುತ್ತವೆ. ಲಕ್ಷದ್ವೀಪ ಆಸುಪಾಸಿನಲ್ಲಿ ಇಂಥ ಮೀನುಗಳು ಸಾಮಾನ್ಯ. ಅಲ್ಲಿ ಒಂದೂವರೆ, ಎರಡು ಸಾವಿರ ಅಡಿ ಸಮುದ್ರ ಆಳವಾಗಿದ್ದು, ಅಂಥ ಜಾಗದಲ್ಲಿ ಈ ಮೀನುಗಳು ಹೆಚ್ಚಾಗಿ ಇರುತ್ತವೆ.
ಈ ಮೀನುಗಳ ಚೂಪಾದ ಕೊಂಬು ಕಲ್ಲಿನ ಹಾಗೆ ಭಾರೀ ಗಟ್ಟಿಯಾಗಿದ್ದು, ದೊಡ್ಡ ಮೀನುಗಳನ್ನು ಈ ಕೊಂಬಿನಿಂದ ಗುದ್ದಿ ಕೊಲ್ಲುತ್ತವೆ. ಸಾಮಾನ್ಯವಾಗಿ ಈ ರೀತಿಯ ಮೀನುಗಳು 40 ಕೇಜಿಯಿಂದ 150-200 ಕೇಜಿ ಭಾರ ಇರುತ್ತವೆ. ಭಾರೀ ದೊಡ್ಡ ಮೀನುಗಳು ಕೂಡ ಆಳ ಸಮುದ್ರದಲ್ಲಿ ಇರುತ್ತವೆ. ಸಾಧಾರಣ ಗಾತ್ರದ ಮೀನುಗಳು ನಾವು ಗಾಳ ಹಾಕಿ ಹಿಡಿಯುತ್ತೇವೆ. ಗಾಳಕ್ಕೆ ಸಿಕ್ಕಿಬಿದ್ದರೆ ಅವುಗಳಿಗೆ ಪಾರಾಗಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಜಯಪ್ರಕಾಶ್.
ಕರಾವಳಿಯಲ್ಲಿ ತುಳುವಿನಲ್ಲಿ ಮಡಲ್ ಮೀನು ಅಂತಲೂ ಇಂಥ ಮೀನುಗಳನ್ನು ಕರೆಯುತ್ತಾರೆ. ಆದರೆ, ಮಡಲ್ ಮೀನಂದ್ರೆ ಇದೇ ರೀತಿಯಲ್ಲಿ ಮತ್ತೊಂದು ಪ್ರಭೇದ. ಅದಕ್ಕೆ ದೊಡ್ಡ ರೆಕ್ಕೆಯಿದ್ದು ಈಜಿಕೊಂಡು ಬರುವಾಗಲೇ ಗುರುತಿಸಲು ಸುಲಭವಾಗುತ್ತದೆ. ಈಗ ಡಿಕ್ಕಿಯಾಗಿರುವ ಮೀನು ಸಣ್ಣ ಗಾತ್ರದ್ದು. ಅದು ಬೋಟಿಗೆ ಡಿಕ್ಕಿಯಾಗಿ ಅದರ ಚೂಪಾದ ತುದಿ ತುಂಡಾಗಿ ಬೋಡಿನಲ್ಲೇ ಉಳಿದಿತ್ತು. ಎರಡಿಂಚು ದಪ್ಪದ ಮರದ ಬೋಟ್ ತುಂಡಾಗಿದ್ದರೆ, ಎರಡಿಂಚು ಅಗಲಕ್ಕೆ ತೂತು ಆಗಿತ್ತು. ತೂತಿನಲ್ಲಿ ಮೀನಿನ ಮುಂಭಾಗದ ತುದಿ ಉಳಿದುಕೊಂಡಿದೆ. ಹೀಗಾಗಿ ಬೋಟಿಗೆ ಅಪಾಯ ಆಗಿಲ್ಲ. ಇಲ್ಲದಿದ್ದರೆ ನೀರು ತುಂಬಿ ಅಪಾಯಕ್ಕೆ ಕಾರಣವಾಗುತ್ತಿತ್ತು ಎಂದರು ಜಯಪ್ರಕಾಶ್.
ಮೀನು ಡಿಕ್ಕಿಯಾದ ಬಳಿಕ ಅದು ಬೋಟಿನ ಸನಿಹದಲ್ಲೇ ಈಜುತ್ತಿತ್ತು. ಈ ವೇಳೆ, ರಕ್ತಸ್ರಾವ ಆಗಿದ್ದನ್ನು ಕಂಡೆವು. ಇಷ್ಟು ರಕ್ತ ಯಾಕೆ ಸೋರುತ್ತಿದೆ ಎಂದು ನೋಡಿದಾಗ, ಬೋಟಿಗೆ ಡಿಕ್ಕಿಯಾಗಿದ್ದು ತಿಳಿದುಬಂದಿತ್ತು. ಅತ್ಯಂತ ಅಪರೂಪದ ಮೀನು ಇದಾಗಿದ್ದು, ಸಮುದ್ರದಲ್ಲಿ ಈ ರೀತಿಯ ಬಹಳಷ್ಟು ಮೀನುಗಳಿರುತ್ತವೆ ಎಂದು ವಿವರಿಸಿದರು ಜಯಪ್ರಕಾಶ್.
Video:
During the deep-sea fishing, a boat suffered damages after having been hit by Marlin Fish in Mangalore.
23-05-25 02:35 pm
Bangalore Correspondent
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
ಕೊಡಗಿನಲ್ಲಿ ಈ ಬಾರಿ ಮಳೆ ಹೆಚ್ಚು ; ಮತ್ತೆ ಪ್ರಕೃತಿ...
22-05-25 11:09 pm
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
23-05-25 10:46 pm
Mangalore Correspondent
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
VHP, Mangalore, Suhas Shetty Murder: ಸುಹಾಸ್ ಶ...
22-05-25 10:29 pm
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm