ಬ್ರೇಕಿಂಗ್ ನ್ಯೂಸ್
01-02-21 11:32 am Mangalore Correspondent ಕರಾವಳಿ
ಮಂಗಳೂರು, ಫೆ.1: ಕರಾವಳಿಯ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಸಹಕಾರಿ ಧುರೀಣ ಎಂ.ಎನ್. ರಾಜೇಂದ್ರ ಕುಮಾರ್ ವಿರುದ್ಧ ಮಂಗಳೂರಿನ ಬಂದರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನೌಕರರ ಪಿಎಫ್ ಟ್ರಸ್ಟಿನ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ಅವ್ಯವಹಾರ ಮಾಡಿರುವ ಆರೋಪದಲ್ಲಿ ಮಂಗಳೂರಿನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಎಸ್ಸಿಡಿಸಿಸಿ ಬ್ಯಾಂಕಿನ ಉಭಯ ಜಿಲ್ಲೆಗಳ 106 ಹೆಚ್ಚು ಶಾಖೆಗಳ 900ಕ್ಕೂ ಹೆಚ್ಚು ನೌಕರರನ್ನು ಒಳಗೊಂಡು ಭವಿಷ್ಯ ನಿಧಿಯ ಹಣಕ್ಕಾಗಿ ಪ್ರತ್ಯೇಕ ಟ್ರಸ್ಟ್ ಸ್ಥಾಪಿಸಲಾಗಿತ್ತು. ಆದರೆ, ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿದ್ದ ಶೈಲಜಾ ಸೇರಿ ಟ್ರಸ್ಟ್ ನಲ್ಲಿರುವ ಹಣವನ್ನು ಅವ್ಯವಹಾರಕ್ಕೆ ಬಳಸಿದ್ದು, ಹೊರರಾಜ್ಯದ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದರು. ಹೊರ ರಾಜ್ಯದ ಸಾರ್ವಜನಿಕ ಸಂಸ್ಥೆಗಳ ವಿವಿಧ ಬಾಂಡ್ ಗಳಲ್ಲಿ ಪಿಎಫ್ ಟ್ರಸ್ಟ್ ನಲ್ಲಿದ್ದ 55 ಕೋಟಿ ರೂಪಾಯಿ ಹಣವನ್ನು ಟ್ರಸ್ಟ್ ಸದಸ್ಯರ ಅರಿವಿಗೆ ಬಾರದಂತೆ ಹೂಡಿಕೆ ಮಾಡಲಾಗಿತ್ತು. ಈ ಬಗ್ಗೆ ಮಂಗಳೂರಿನ ಭವಿಷ್ಯ ನಿಧಿ ಕಚೇರಿ ಮತ್ತು ಸಹಕಾರ ಸಂಘಗಳ ನಿಬಂಧಕರಿಗೆ ನೌಕರರ ಯೂನಿಯನ್ ದೂರು ನೀಡಿತ್ತು.
ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಪಿಎಫ್ ಕಚೇರಿಯ ಅಧಿಕಾರಿಗಳು, 2016ರಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಬ್ಯಾಂಕಿನ ವಿರುದ್ಧ 48.35 ಲಕ್ಷ ರೂಪಾಯಿ ದಂಡ ವಿಧಿಸಿದ್ದರು. ಆದರೆ, ಬ್ಯಾಂಕಿನ ಅಧ್ಯಕ್ಷರು ಮತ್ತು ಜನರಲ್ ಮ್ಯಾನೇಜರ್ ಮಾಡಿದ್ದ ಅವ್ಯವಹಾರದ ಕಾರಣಕ್ಕೆ ವಿಧಿಸಿದ್ದ ದಂಡದ ಮೊತ್ತವನ್ನು ಬ್ಯಾಂಕಿನಿಂದ ಪಿಎಫ್ ಕಚೇರಿಗೆ ಕಟ್ಟಲಾಗಿತ್ತು. ಅಲ್ಲದೆ, ಪಿಎಫ್ ಖಾತೆಗೆ ಮಾಡಲಾಗಿದ್ದ ಪ್ರತ್ಯೇಕ ಟ್ರಸ್ಟ್ ಅನ್ನು 2016ರಲ್ಲಿ ದಿಢೀರ್ ಆಗಿ ಬರ್ಖಾಸ್ತುಗೊಳಿಸಿ, ಪಿಎಫ್ ಕಚೇರಿಯ ಅಧೀನಕ್ಕೆ ನೀಡಲಾಗಿತ್ತು.
ಪಿಎಫ್ ಅಧಿಕಾರಿಗಳು ಪಿಎಫ್ ಟ್ರಸ್ಟ್ ಹೆಸರಲ್ಲಿ ನಡೆದಿದ್ದ ಅವ್ಯವಹಾರವನ್ನು ಪತ್ತೆ ಮಾಡಿ ದಂಡ ವಿಧಿಸಿದ್ದು ಮತ್ತು ನೌಕರರ ಪಿಎಫ್ ಟ್ರಸ್ಟ್ ನಲ್ಲಿದ್ದ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಿದ್ದು ಕ್ರಿಮಿನಲ್ ಅಪರಾಧವಾಗಿದ್ದು ಆರೋಪಿತರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟಿಗೆ ಖಾಸಗಿ ದೂರು ನೀಡಲಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್, ಆರೋಪಿತ ಇಬ್ಬರು ವ್ಯಕ್ತಿಗಳ ವಿರುದ್ಧ ಸಿಆರ್ ಪಿಸಿ ಸೆಕ್ಷನ್ 153 (3)ರ ಅಡಿ ಕೇಸು ದಾಖಲಿಸಲು ಬಂದರು ಠಾಣೆಗೆ ಸೂಚನೆ ನೀಡಿತ್ತು. ಕಳೆದ ಜ.12ರಂದು ಕೋರ್ಟ್ ಈ ಬಗ್ಗೆ ಆದೇಶ ನೀಡಿದ್ದು, ಕೋರ್ಟ್ ಸೂಚನೆ ಪ್ರಕಾರ ಜ.29ರಂದು ಬಂದರು ಠಾಣೆಯಲ್ಲಿ ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಶೈಲಜಾ ವಿರುದ್ಧ ಐಪಿಸಿ ಸೆಕ್ಷನ್ 405, 408, 409, 415, 420 ಮತ್ತು 34 ಅಡಿ ಪ್ರಕರಣ ದಾಖಲಾಗಿದೆ.
ನೌಕರರ ಭವಿಷ್ಯ ನಿಧಿಯ ಹಣವನ್ನು ದುರ್ಬಳಕೆ ಮಾಡಿದ್ದು ಕ್ರಿಮಿನಲ್ ಪ್ರಕರಣವಾಗಿದ್ದು, ಪ್ರತಿಷ್ಠಿತ ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಗೆ ಸಂಕಷ್ಟ ಎದುರಾಗಿದೆ. ಅಲ್ಲದೆ, 2016ರಲ್ಲಿ ಬ್ಯಾಂಕಿನಿಂದ ನಿವೃತ್ತಿ ಆಗಿದ್ದಾರೆ ಎನ್ನಲಾಗುವ ಶೈಲಜಾರಿಗೂ ಕಂಟಕವಾಗಿ ಪರಿಣಮಿಸಿದೆ.
Mangalore Civil Court has directed the police department to file a FIR on SCDCC Bank Rajendra Kumar over irregularities in PF Fund.
18-08-25 10:47 pm
Bangalore Correspondent
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am