ಬ್ರೇಕಿಂಗ್ ನ್ಯೂಸ್
12-01-21 04:58 pm Mangalore Correspondent ಕರಾವಳಿ
ಮಂಗಳೂರು, ಜ.12: ಸುರತ್ಕಲ್ ಬಳಿಯ ಮುಕ್ಕದಲ್ಲಿ ಫಿಶ್ ಮಿಲ್ ಗಳಿಂದ ತೀವ್ರ ಮಾಲಿನ್ಯ ಹೊರಬೀಳುತ್ತಿದ್ದು ಅಲ್ಲಿನ ನಿವಾಸಿಗಳು ಬದುಕುವುದೇ ದುಸ್ತರ ಅನ್ನುವ ದೂರು ಕೇಳಿಬಂದಿದೆ. ಈ ಬಗ್ಗೆ ಅಲ್ಲಿನ ನಿವಾಸಿಗಳು ಸುದ್ದಿಗೋಷ್ಠಿ ನಡೆಸಿ, ಮಾಧ್ಯಮದ ಮೂಲಕ ಸಮಸ್ಯೆ ಹೇಳಿಕೊಂಡಿದ್ದಾರೆ.
ಫಿಶ್ ಮಿಲ್ ಗಳಿಂದ ಬರುವ ತ್ಯಾಜ್ಯವನ್ನು ಫಿಲ್ಟರ್ ಮಾಡದೆ ಹಾಗೆಯೇ ಹೊರಬಿಡಲಾಗುತ್ತಿದೆ. ಇದರಿಂದ ತೀವ್ರ ಮಾಲಿನ್ಯ ಎದುರಾಗಿದ್ದು, ಜನರು ಮೂಗು ಮುಚ್ಚಿಕೊಂಡು ಬುದುಕುವ ಪರಿಸ್ಥಿತಿ ಉಂಟಾಗಿದೆ. ಎಚ್.ಕೆ.ಬಾವಾ ಫಿಶ್ ಮಿಲ್, ಬಾವಾ ಫಿಶ್ ಮಿಲ್ ಸನ್ಸ್ ಮತ್ತು ಮುಕ್ಕಿ ಸೀಫುಡ್ ಎಂಬ ಮೂರು ಫಿಶ್ ಮಿಲ್ ಗಳಿಂದ ಹೊರಬಿಡುವ ತ್ಯಾಜ್ಯದಿಂದಾಗಿ ಪರಿಸರ ದುರ್ನಾತ ಬೀರುತ್ತಿದೆ. ಈ ಬಗ್ಗೆ ಪರಿಸರದ ನಿವಾಸಿಗಳು ಪರಿಸರ ಮಾಲಿನ್ಯ ಇಲಾಖೆ, ಸ್ಥಳೀಯ ಸುರತ್ಕಲ್ ಪೊಲೀಸ್ ಠಾಣೆ, ಮಂಗಳೂರು ಜಿಲ್ಲಾಧಿಕಾರಿ ಹೀಗೆ ಎಲ್ಲ ಕಡೆಗೂ ದೂರು ನೀಡಿದ್ದಾರೆ. ಆದರೆ, ಫಿಶ್ ಮಿಲ್ ಮಾಲಕರ ಪ್ರಭಾವದಿಂದಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿ, ನಿವೃತ್ತ ಯೋಧ ಪಿ.ಆರ್.ಪಿ ಶೆಟ್ಟಿ ದೂರಿದ್ದಾರೆ.

ಮೂರು ಫಿಶ್ ಮಿಲ್ ಗಳು ಕೂಡ ರಾತ್ರಿ ಹಗಲು ಕಾರ್ಯಾಚರಿಸುತ್ತಿದ್ದು , ಕಳೆದ ಮೂರ್ನಾಲ್ಕು ತಿಂಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗಿದೆ. ರಾತ್ರಿ ಫ್ಯಾಕ್ಟರಿಯ ಸದ್ದಿನಿಂದಾಗಿ ನಿದ್ದೆ ಬರುತ್ತಿಲ್ಲ. ಅಲ್ಲದೆ, ಅದು ಹೊರಸೂಸುವ ದಟ್ಟ ಹೊಗೆಯಿಂದಾಗಿ ಪರಿಸರದಲ್ಲಿ ಕಪ್ಪು ಧೂಳು ಮಸಿಯ ರೂಪದಲ್ಲಿ ಬೀಳುತ್ತಿದೆ. ಒಣ ಮೀನಿನ ಪುಡಿ ಗಾಳಿಯಲ್ಲಿ ಹರಡುತ್ತಿದ್ದು, ಮೈಮೇಲೆ ಬೀಳುತ್ತಿದೆ. ಕೇರಳದಲ್ಲಿ ಫಿಶ್ ಮಿಲ್ ನಿಷೇಧ ಆಗಿರುವುದರಿಂದ ಹೊರ ರಾಜ್ಯಗಳಿಂದಲೂ ಕೊಳೆತ ಮೀನುಗಳು ಬರುತ್ತಿದ್ದು, ಇಲ್ಲಿ ಸಂಸ್ಕರಿಸಿ ಎಣ್ಣೆ ತೆಗೆಯಲಾಗುತ್ತಿದೆ. ಆದರೆ, ತ್ಯಾಜ್ಯವನ್ನು ಫಿಲ್ಟರ್ ಮಾಡದೆ ಸಮುದ್ರಕ್ಕೆ ಬಿಡುತ್ತಿದ್ದಾರೆ ಎಂದು ಅಲ್ಲಿನ ನಿವಾಸಿ ಪ್ರತಿಮಾ ಶೆಟ್ಟಿ ಹೇಳಿದರು.
2017ರ ವರೆಗೂ ಸಾರ್ವಜನಿಕರು ಆಕ್ಷೇಪ ಸೂಚಿಸಿದಲ್ಲಿ ಕಾರ್ಯಾಚರಣೆ ಮಾಡಬಾರದು ಎಂಬ ಮಾನದಂಡ ಇತ್ತು. ಆದರೆ, ಕಳೆದ ಬಾರಿ ಅಂತಹ ಮಾನದಂಡವನ್ನು ತೆಗೆದು ಹಾಕಿ, ಅಧಿಕಾರಿಗಳು ಅವರ ಪರವಾನಗಿ ನವೀಕರಣ ಮಾಡಿದ್ದಾರೆ. ಇದರಿಂದಾಗಿ ಫಿಶ್ ಮಿಲ್ ಮಾಲಕರು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ಜನವಸತಿ ಪ್ರದೇಶದಲ್ಲಿ ಇಂತಹ ಫಿಶ್ ಮಿಲ್ ಗಳಿಗೆ ಅನುಮತಿ ನೀಡುವಂತಿಲ್ಲ ಎಂದು ಹೇಳಿದರು.
ಕಳೆದ ಬಾರಿ ಈ ಭಾಗದ ಕಾರ್ಪೊರೇಟರ್ ಚುನಾವಣೆ ಸಂದರ್ಭದಲ್ಲಿ ಫಿಶ್ ಮಿಲ್ ಸಮಸ್ಯೆ ಪರಿಹರಿಸುವುದಾಗಿ ಹೇಳಿಕೊಂಡು ಬಂದಿದ್ದರು. ಚುನಾವಣೆ ಬಳಿಕ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆಂದು ಪ್ರತಿಮಾ ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹರೀಶ್ ಐತಾಳ್ ಮುಕ್ಕ, ಪ್ರಖ್ಯಾತ್, ಚಿದಾನಂದ ಮುಕ್ಕ ಉಪಸ್ಥಿತರಿದ್ದರು.
The locals of Mukka in Surathkal in Mangalore are agitated with the fish oil factories located at the surroundings causing health hazards, air, sound and water pollution.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm