ಬ್ರೇಕಿಂಗ್ ನ್ಯೂಸ್
12-01-21 02:55 pm Mangalore Correspondent ಕರಾವಳಿ
ಮಂಗಳೂರು, ಜ.12: ಮಂಗಳೂರಿನ ಬೀಚ್ ಗಳಂದ್ರೆ ಇಲ್ಲಿ ಬರೋ ಪ್ರವಾಸಿಗರಿಗೆ ನೆಚ್ಚಿನ ತಾಣ. ಇಂಥ ಪ್ರವಾಸಿ ತಾಣಗಳಲ್ಲಿ ಕುಳಿತು ಕುಡಿಯುವುದು, ನೀರಿನ ಬಾಟಲಿಗಳಲ್ಲಿ ಆಲ್ಕೊಹಾಲ್ ಮಿಕ್ಸ್ ಮಾಡಿ ಕುಡಿಯುವುದು, ಗಾಂಜಾ ಸೇವಿಸುತ್ತಾ ಕೂರುವುದು ಸರಿಯಲ್ಲ. ಇದನ್ನು ಹತ್ತಿಕ್ಕಲು ನಾವು ಪೊಲೀಸರ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಶಶಿಕುಮಾರ್, ಬೀಚ್ ಜಾಗೃತಿ ಕಾರ್ಯಕ್ಕೆ ಕೆಲವು ಕಡೆಗಳಿಂದ ಆಕ್ಷೇಬ ಬಂದಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಷೇಪಿಸಿದವರಿಗೆ ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದೇವೆ. ಆಕ್ಷೇಪ, ದೂರು ಬರುತ್ತದೆಂದು ನಾವು ಕೈಗೊಂಡ ಜಾಗೃತಿ ಕಾರ್ಯದಿಂದ ಹಿಂದಕ್ಕೆ ಸರಿಯುವುದಿಲ್ಲ. ಬೀಚ್ ನಿಂದ ಮುಂದೆ ಹೋಗಿ ಎಲ್ಲೋ ಮೂಲೆಯಲ್ಲಿ ಕುಳಿತು, ಅಲ್ಲೇನಾದ್ರೂ ತೊಂದರೆಗಳಾದರೆ ಮಂಗಳೂರು ಮತ್ತು ಇಲ್ಲಿನ ಪೊಲೀಸರಿಗೆ ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಮುಂಬೈನಲ್ಲಿ ಹೋದರೆ ನಡುರಾತ್ರಿಯಲ್ಲೂ ಫ್ಯಾಮಿಲಿ, ಗಂಡ-ಹೆಂಡತಿ ಬೀಚ್ ನಲ್ಲಿ ಕುಳಿತು ಬರುವಂಥ ವ್ಯವಸ್ಥೆ ಇದೆ. ಬೀಚ್ ನಲ್ಲಿ ಕುಳಿತುಕೊಳ್ಳುವುದಕ್ಕೆ ಭಯ ಪಡುವ ಸನ್ನಿವೇಶ ಇಲ್ಲ. ಆದರೆ, ಅದನ್ನು ಮಂಗಳೂರಿನಲ್ಲಿ ನಿರೀಕ್ಷೆ ಮಾಡುವಂತೆ ಇಲ್ಲ. ಯಾಕೆ ಸಾಧ್ಯವಿಲ್ಲ ಎಂಬ ಬಗ್ಗೆ ನಾವು ಆಲೋಚನೆ ಮಾಡಬೇಕು. ಬೀಚ್ ನಲ್ಲಿ ಜನಸ್ನೇಹಿ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸಲು ನಾವು ಜಿಲ್ಲಾಧಿಕಾರಿ ಮತ್ತು ಟೂರಿಸಂ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ, ಹೆಚ್ಚುತ್ತಿರುವ ಸೈಬರ್ ಕ್ರೈಮ್ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿ ಕಮಿಷನರ್, ಸೈಬರ್ ಅಪರಾಧಗಳಲ್ಲಿ ಯಾರೋ ಎಲ್ಲೋ ಕುಳಿತುಕೊಂಡು ಇಂಥ ಕೆಲಸಗಳನ್ನು ಮಾಡುತ್ತಾನೆ. ಜನರು ಜಾಗೃತಿಗೊಳ್ಳುವುದೇ ಇದಕ್ಕೆ ಪರಿಹಾರ. ಎಟಿಎಂ ಪಿನ್ ಕೇಳುವುದು, ಬ್ಯಾಂಕ್ ಖಾತೆ ವಿವರ ಕೇಳುವುದು ಹೀಗೆ ಫೋನ್ ಮಾಡಿ, ಮಾಹಿತಿ ಕೇಳುವಾಗ ಎಚ್ಚರ ವಹಿಸಬೇಕು. ನಮ್ಮ ಖಾತೆಯಿಂದ ಹಣ ಹೋಗುತ್ತದೆ ಅಂದರೆ ಅದರಲ್ಲಿ ಎಲ್ಲಾದರೂ ಟೆಕ್ನಿಕಲ್ ಲೋಪ ಇದ್ದೇ ಇರುತ್ತದೆ. ಎಲ್ಲೇ ಆಗಲಿ, ನಾವು ಎಟಿಎಂ ಕಾರ್ಡ್ ಬಳಕೆ ಮಾಡುವಾಗ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ಒಂದೇ ಠಾಣೆಯಲ್ಲಿ ವರ್ಷ ಒಂದರಲ್ಲಿ 12 ಸಾವಿರಕ್ಕಿಂತಲೂ ಸೈಬರ್ ಅಪರಾಧಗಳು ದಾಖಲಾಗುತ್ತವೆ. ಈ ಪೈಕಿ ಹೆಚ್ಚಿನವನ್ನು ಪತ್ತೆ ಮಾಡುವುದು ಕಷ್ಟದ ಕೆಲಸವಾಗುತ್ತದೆ. ಜಾರ್ಖಂಡ್, ಮಧ್ಯಪ್ರದೇಶ ಹೀಗೆ ಎಲ್ಲೆಲ್ಲೋ ಕುಳಿತು ಅದ್ಹೇಗೋ ಮಾಹಿತಿ ಪಡೆದು ಈ ಕೆಲಸ ಮಾಡುತ್ತಾರೆ. ಎಟಿಎಂ ನಂಬರ್, ಓಟಿಪಿ ನಂಬರ್ ಕೇಳಲು ಫೋನ್ ಮಾಡಿದರೆ, ಆ ಸಂಖ್ಯೆಗಳನ್ನು ನೋಟ್ ಮಾಡಿ ಪೊಲೀಸರಿಗೆ ತಿಳಿಸಿ. ಅದು ಬಿಟ್ಟು ಯಾರೋ ಕಸ್ಟಮ್ಸ್ ಅಥವಾ ಬ್ಯಾಂಕ್ ಸಿಬಂದಿ ಎಂದು ಹೇಳಿ ಫೋನ್ ಮಾಡಿದ ಕೂಡಲೇ ಯಾವುದೇ ವಿವರವನ್ನು ನಾವು ಕೊಡಬಾರದು ಎಂದು ಕಿವಿಮಾತು ಹೇಳಿದರು.
ಮಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಪ್ರಮುಖವಾಗಿದ್ದು, ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು.
Video:
We won't tolerate those who Drink and consume Ganja at Beaches warns Mangalore City Police Commissioner Shashi Kumar at the Press Club during his interaction with Media Members.
23-05-25 02:35 pm
Bangalore Correspondent
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
ಕೊಡಗಿನಲ್ಲಿ ಈ ಬಾರಿ ಮಳೆ ಹೆಚ್ಚು ; ಮತ್ತೆ ಪ್ರಕೃತಿ...
22-05-25 11:09 pm
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
23-05-25 10:46 pm
Mangalore Correspondent
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
VHP, Mangalore, Suhas Shetty Murder: ಸುಹಾಸ್ ಶ...
22-05-25 10:29 pm
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm