ಬ್ರೇಕಿಂಗ್ ನ್ಯೂಸ್
24-10-26 08:06 pm HK News Desk ಕರಾವಳಿ
ಮಂಗಳೂರು, ಅ.24: ರಾಜ್ಯದಲ್ಲಿ ನಡೆದಿರುವ ಸ್ಟಿಂಗ್ ಪ್ರಕರಣದಲ್ಲಿ ಪುತ್ತೂರಿನ ಹೆಸರು ಉಲ್ಲೇಖಗೊಂಡಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತಂದಿದೆ. ಸ್ಟಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರೇ ಭಾಗಿಯಾಗಿದ್ದು ಪುತ್ತೂರು ಕ್ಷೇತ್ರದ ಟಿಕೆಟ್ ಗಾಗಿ ನಡೆದಿದೆ ಎನ್ನುವುದು ಈ ಜಿಲ್ಲೆಗೆ ಕಪ್ಪು ಚುಕ್ಕೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಸ್ಟಿಂಗ್ ಪ್ರಕರಣದಲ್ಲಿ ಪುತ್ತೂರಿನ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪುತ್ತೂರಿನ ಈಗಿನ ಶಾಸಕರೂ ಅದೇ ರೀತಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆಯೇ ಎಂಬ ಶಂಕೆ ಬರುತ್ತಿದೆ ಎಂದು ಹೇಳಿದ ಕುಂಪಲ, ಸ್ಟಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರೇ ಇದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಈ ಸ್ಟಿಂಗ್ ನಡೆದಿದೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ, ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಮಗ್ರ ತನಿಖೆ ನಡೆದು, ಸತ್ಯಾಸತ್ಯತೆ ಜನತೆಗೆ ತಿಳಿಯಬೇಕಾಗಿದೆ.
ಪ್ರಕರಣ 2011ರಲ್ಲಿ ನಡೆದಿದ್ದರೂ, 2023ರ ಚುನಾವಣೆ ಸಂದರ್ಭದಲ್ಲಿ ಟಿಕೆಟ್ಗಾಗಿ ಈ ಪ್ರಕರಣವನ್ನು ಬಳಸಲಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣವನ್ನು ದಾಳವಾಗಿ ಬಳಸಿ ಚುನಾವಣೆಯಲ್ಲಿ ಯಾರ್ಯಾರು ಟಿಕೆಟ್ ಪಡೆದುಕೊಂಡಿದ್ದಾರೆ?ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ? ಯಾರ್ಯಾರ ಸ್ಟಿಂಗ್ ಆಗಿದೆ ಎಂಬ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಹೇಳಿದರು.
ತಂದೆಯ ಹೆಸರನ್ನು ಕೆಡಿಸಲು ಈ ಸ್ಟಿಂಗ್ ನಡೆಸಲಾಗಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಇದನ್ನು ಕಾಂಗ್ರೆಸ್ ಟಿಕೆಟ್ ಪಡೆಯಲು ಮಾಡಿದ್ದಾರೆಂದು ಸುದ್ದಿಯಾಗಿದೆ. ಬೇರೆ ಕ್ಷೇತ್ರಗಳಲ್ಲೂ ಇದೇ ರೀತಿ ಟಿಕೆಟ್ ಪಡೆಯಲು ಸ್ಟಿಂಗ್ ನಡೆದಿರುವ ಅನುಮಾನವಿದೆ. ಈ ಬಗ್ಗೆ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಮಗ್ರ ತನಿಖೆ ನಡೆದು, ಶೀಘ್ರದಲ್ಲಿ ವಾಸ್ತವ ವಿಚಾರ ತಿಳಿಯಬೇಕು ಎಂದು ಸತೀಶ್ ಕುಂಪಲ ಆಗ್ರಹಿಸಿದರು.
24-10-26 05:35 pm
HK News Desk
Parvez dharwad: 40 ದಿನಗಳ ನಿಗೂಢತೆ ಅಂತ್ಯ ; ಡೆತ್...
24-10-26 12:22 pm
ಸ್ಟಿಂಗ್ ಆಪರೇಶನ್ ಹಿಂದಿರುವವರು ಯಾರೆಂಬ ಸತ್ಯ ಗೊತ್...
23-10-26 08:34 pm
ಮಾಧ್ಯಮದ ಮುಖ್ಯಸ್ಥನ ಜೊತೆಗಿದ್ದ ವಿಕ್ಕಿ ಎಂಬ ವ್ಯಕ್ತ...
23-10-26 05:47 pm
ಬ್ಲ್ಯಾಕ್ಮೇಲ್ ಉದ್ದೇಶದಿಂದ ಸ್ಟಿಂಗ್ ಮಾಡಿದ್ದಾರೆ...
23-10-26 03:56 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
24-10-26 08:06 pm
HK News Desk
ಪೊಳಲಿ ಕ್ಷೇತ್ರದಲ್ಲಿ ₹1.50 ಕೋಟಿ ವೆಚ್ಚದ ಗೋಶಾಲೆ ನ...
24-10-26 01:59 pm
Subbanna Pandit, Folk Academy Award: 45 ವರ್ಷಗ...
24-10-26 12:19 pm
Soujanya Case, SIT: ಸೌಜನ್ಯಾ ಕೊಲೆ ಪ್ರಕರಣದ ಮರು...
23-10-26 05:48 pm
19 ಗಂಟೆ 29 ನಿಮಿಷಗಳ ಸಾಧನೆ: 2,000 ಮೆಹಂದಿ ಕೋನ್ ತ...
23-10-26 02:56 pm
24-10-26 05:17 pm
HK News Desk
ಉದ್ಯಮಿಗಳಿಗೆ ಕೊಲೆ ಬೆದರಿಕೆ ಪ್ರಕರಣ ; ಭೂಗತ ಪಾತಕಿ...
24-10-26 05:00 pm
Bantwal Crime: ದಾಂಪತ್ಯ ಕಲಹ ; ಹೆರಿಗೆ ತೆರಳಿದ್ದ...
24-10-26 12:51 pm
ಪುಲಿಕೇಶಿ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ ;...
23-10-26 05:48 pm
B Care Company, Madhumita Kaur: ಇನ್ಶೂರೆನ್ಸ್ ಪ...
22-10-26 03:21 pm