ಬ್ರೇಕಿಂಗ್ ನ್ಯೂಸ್
28-09-26 08:29 pm HK News Staffer ಕರಾವಳಿ
ಮಂಗಳೂರು, ಸೆ.28: ದಸರಾ ಹಬ್ಬಕ್ಕೆ ಈಗಾಗಲೇ ಸರ್ಕಾರ ರಜೆ ಘೋಷಿಸಿದ್ದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಕಡ್ಡಾಯ ಪಾಲನೆ ಮಾಡಬೇಕು. ಆದರೆ ದಸರಾ ರಜೆಯನ್ನು ಸರ್ಕಾರದ ಅನುದಾನ ಪಡೆಯುವ ಕ್ರಿಶ್ಚಿಯನ್ ಕಾನ್ವೆಂಟ್ ಸ್ಕೂಲ್ ಗಳು ಪಾಲಿಸುತ್ತಿಲ್ಲ. ಅಂತಹ ಶಾಲೆಗಳ ಎದುರಲ್ಲಿ ಈ ಬಾರಿ ಶ್ರೀರಾಮ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹಿಂದುಗಳ ದಸರಾ ಹಬ್ಬಕ್ಕಾಗಿ ಒಂದು ತಿಂಗಳ ಸರ್ಕಾರಿ ರಜೆ ಇದೆ, ಆದರೆ ಇದೇ ದಸರಾ ಸಂದರ್ಭದಲ್ಲಿ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳಲ್ಲಿ ಪರೀಕ್ಷೆ, ಪಾಠ ಪ್ರವಚನ ಮಾಡಿಸುತ್ತಾರೆ. ಈ ಅವಧಿಗೆ ನೀಡಲಾಗುವ ರಜೆಯನ್ನು ಕ್ರಿಸ್ಮಸ್ ವೇಳೆಗೆ ಕೊಡುತ್ತಾರೆ. ಇದರಿಂದ ಅಲ್ಲಿ ಕಲಿಯುವ ಶಾಲಾ ಮಕ್ಕಳಿಗೆ, ಅಲ್ಲಿ ಕೆಲಸ ಮಾಡುವ ಸಿಬಂದಿಗೆ ಹಬ್ಬ ಆಚರಿಸಲು ಅಥವಾ ದಸರಾಕ್ಕೆ ಹೊರಗೆ ಹೋಗಲು ಆಗುತ್ತಿಲ್ಲ. ಇದರ ಬಗ್ಗೆ ಹಲವು ಪೋಷಕರು ನಮ್ಮಲ್ಲಿ ನೋವು ಹೇಳಿಕೊಂಡಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಎಲ್ಲ ಕ್ರಿಶ್ಚಿಯನ್ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರು 99 ಪರ್ಸೆಂಟ್ ಹಿಂದುಗಳೇ ಇದ್ದಾರೆ. ಆದರೆ ದಸರಾ ಸಂದರ್ಭದಲ್ಲಿ ಈ ಶಾಲೆಗಳಲ್ಲಿ ಪರೀಕ್ಷೆ ಇಟ್ಟರೆ ಹಬ್ಬ ಆಚರಣೆ ಮಾಡಕ್ಕಾಗಲ್ಲ. ಇದರಿಂದ ಆ ಮಕ್ಕಳಿಗೆ ದ್ರೋಹ ಬಗೆದಂತೆ. ಈ ಬಾರಿಯೂ ಇದೇ ನೀತಿ ಮುಂದುವರಿದರೆ ಶಾಲೆಗಳ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಮುತಾಲಿಕ್ ಹೇಳಿದರು.
ಡಿ.25ರ ಒಂದು ದಿನ ರಜೆ ಇರುವುದನ್ನು ಕ್ರಿಸ್ತಿಯನ್ ಶಾಲೆಗಳು ಹತ್ತು ದಿನ ರಜೆ ಕೊಟ್ಟು ಸಾಂಸ್ಕೃತಿಕ ಮತಾಂತರ ಮಾಡುವ ಯತ್ನ ಮಾಡುತ್ತಿದ್ದಾರೆ. ಸರ್ಕಾರದ ಅನುದಾನ ಪಡೆಯುವ ಶಾಲೆಗಳು ಸರ್ಕಾರದ ನೀತಿಯನ್ನು ಕಡ್ಡಾಯ ಪಾಲಿಸಬೇಕು ಎಂದರು. ಅಲ್ಲಿ ಮೊದಲೇ ರಜೆ ಮತ್ತು ಇತರ ನೀತಿಗಳ ಬಗ್ಗೆ ಗೊತ್ತಿರುತ್ತದೆ, ವಿರೋಧ ಇರೋರು ಯಾಕೆ ಮಕ್ಕಳನ್ನು ಕಳಿಸಬೇಕು ಎಂದು ಕೇಳಿದ ಪ್ರಶ್ನೆಗೆ, ನಾವು ಹಿಂದು ವಿರೋಧಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು ಎಂದು ಅಭಿಯಾನ ಮಾಡುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ರಾಮ ಸೇನೆ ಮತ್ತು ಶ್ರೀರಾಮ ಸೇನೆ ಪ್ರತ್ಯೇಕ ಇರುವುದಿಲ್ಲ. ನಾವು ಸಂಘಟನೆಯ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡುತ್ತೇವೆ. ಇದರ ಬಗ್ಗೆ ಪ್ರಸಾದ್ ಅತ್ತಾವರ ಜೊತೆಗೆ ಮಾತುಕತೆ ಮಾಡಿದ್ದೇವೆ. ಅನಾರೋಗ್ಯದಲ್ಲಿರುವ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಸಂಘಟನೆ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದರು.
Sri Rama Sene national president Pramod Muthalik has warned that his organisation will hold protests outside Christian convent schools if they do not observe the Dasara holidays announced under the Karnataka school academic calendar.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
28-09-26 11:08 pm
Mangaluru Staffer
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿಗೇನು ಕೊಟ್ಟಿ...
28-09-26 09:33 pm
30 ನಿಮಿಷದಲ್ಲಿ 3 ಸಾವಿರಕ್ಕೂ ಹೆಚ್ಚು ಬಾರಿ ಮುಂಗೈ ಸ...
28-09-26 08:33 pm
ದಸರಾಗೆ ಕಾನ್ವೆಂಟ್ ಸ್ಕೂಲ್ ಗಳಲ್ಲಿ ರಜೆ ಯಾಕಿಲ್ಲ, ರ...
28-09-26 08:29 pm
ಅಬ್ದುಲ್ ರೆಹಮಾನ್ ಕೊಲೆಯಾಗಿದ್ದು ವೈಯುಕ್ತಿಕ ಕಾರಣಗಳ...
28-09-26 02:13 pm
28-09-26 11:03 pm
Mangaluru Staffer
ಮಂಗಳೂರಲ್ಲಿ ಡ್ರಗ್ಸ್ ಜಾಲಕ್ಕೆ ಸಿಸಿಬಿ ಶಾಕ್ : ₹ 24...
28-09-26 03:08 pm
ಹೆಲ್ಮೆಟ್ ರಹಿತ ಚಾಲನೆಯಿಂದ ಹೆಚ್ಚುತ್ತಿರುವ ಸಾವು- ನ...
27-09-26 08:06 pm
Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ...
27-09-26 06:10 pm
ಶಾರ್ಜಾದಲ್ಲಿ ಹತ್ಯೆಯಾದ ಕುಂದಾಪುರದ ವ್ಯಕ್ತಿಯ ಶವ ಹು...
25-09-26 04:53 pm