ಬ್ರೇಕಿಂಗ್ ನ್ಯೂಸ್
26-09-26 03:35 pm HK News Staffer ಕರಾವಳಿ
ಮಂಗಳೂರು , ಸೆ.26: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದಂತೆ ಸೌಜನ್ಯಾ ಅವರ ತಾಯಿ ಕುಸುಮಾವತಿ ಗೌಡ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಅಶುತೋಷ್ ದುಬೆ ಅವರು ತನಿಖೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸುವಲ್ಲಿ ಹಲವು ಅಂಶಗಳನ್ನು ಪರಿಗಣಿಸುವಂತೆ ವಿಶೇಷ ತನಿಖಾ ತಂಡಕ್ಕೆ ಮನವಿ ಸಲ್ಲಿಸಿದ್ದಾರೆ. ಹಿರಿಯ ಅಧಿಕಾರಿಗಳು, ಕಾನೂನು ಅಧಿಕಾರಿಗಳು ಅಥವಾ ಇತರ ಸರ್ಕಾರಿ ಪ್ರಾಧಿಕಾರಗಳಿಂದ ತನಿಖೆಗೆ ಸಂಬಂಧಿಸಿದಂತೆ ನೀಡುವ ಯಾವುದೇ ನಿರ್ದೇಶನ, ಸಲಹೆ ಅಥವಾ ಮಾರ್ಗದರ್ಶನ ಕಡ್ಡಾಯವಾಗಿ ಲಿಖಿತ ರೂಪದಲ್ಲಿರಬೇಕು ಮತ್ತು ಅದನ್ನು ಅಧಿಕೃತ ಕಡತಗಳಲ್ಲಿ ದಾಖಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 21ರಂದು ಸೌಜನ್ಯಾ ಕೊಲೆ ಪ್ರಕರಣದಲ್ಲಿ ಮರು ತನಿಖೆಗೆ ಆದೇಶಿಸಿದ್ದು, ಹಿಂದಿನ ತನಿಖೆಗಳಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಹೊರಗಿಟ್ಟು ಹೊಸ SIT ರಚಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆಯೂ ಸೂಚಿಸಿತ್ತು.
ಹೊಸ ತನಿಖೆಯಲ್ಲಿ ಹಿಂದಿನ ಲೋಪಗಳು ಮರುಕಳಿಸದಂತೆ ಸ್ಪಷ್ಟವಾದ ದಾಖಲೆ ವ್ಯವಸ್ಥೆ ಇರಬೇಕು ಎಂದು ವಕೀಲರು ಒತ್ತಾಯಿಸಿದ್ದಾರೆ. ವಿಶೇಷವಾಗಿ ತನಿಖಾಧಿಕಾರಿಗಳಿಗೆ ಹೊರಗಿನಿಂದ ಬರುವ ಯಾವುದೇ ಸೂಚನೆ ಅಥವಾ ಮಾರ್ಗದರ್ಶನದ ಸಂಪೂರ್ಣ ದಾಖಲೆ ಲಭ್ಯವಿರಬೇಕು ಎಂಬುದು ಮನವಿಯ ಪ್ರಮುಖ ಅಂಶವಾಗಿದೆ.
ಹಿಂದಿನ ತನಿಖೆಯ ವೇಳೆ ಬೆಳ್ತಂಗಡಿ ಪೊಲೀಸರು, ಸಿಐಡಿ ಹಾಗೂ ಸಿಬಿಐ ನಡೆಸಿದ ತನಿಖೆಯ ಕುರಿತು ಸುಪ್ರೀಂ ಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ತನಿಖೆ ನಡೆದ ರೀತಿ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ಉಂಟುಮಾಡಿದೆ ಎಂದು ನ್ಯಾಯಾಲಯ ಹೇಳಿದ್ದು, ನಿಜವಾದ ಆರೋಪಿಗಳು ಹಿಂದಿನ ತನಿಖೆಯ ಹಾದಿಯನ್ನು ಪ್ರಭಾವಿಸಿರುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಹಿಂದಿನ ತನಿಖೆಯ ಲೋಪಗಳ ಬಗ್ಗೆ ಉಲ್ಲೇಖ
ಸೌಜನ್ಯ ಪ್ರಕರಣದ ಹಿಂದಿನ ತನಿಖಾಧಿಕಾರಿಗಳಲ್ಲಿ ಒಬ್ಬರಾಗಿದ್ದ ಯೋಗೇಶ್ ಕುಮಾರ್ ಅವರ ಸಾಕ್ಷ್ಯವನ್ನು ವಕೀಲರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಶವ ಪರೀಕ್ಷೆಯ ಸಂದರ್ಭದಲ್ಲಿ ವಿಸೆರಾ ಸಂಗ್ರಹಿಸಿ ಸಂರಕ್ಷಿಸುವಂತೆ ವೈದ್ಯರಿಗೆ ಲಿಖಿತವಾಗಿ ಮನವಿ ಮಾಡಿರಲಿಲ್ಲ ಎಂಬ ಅಂಶವನ್ನು ಅವರು ಪ್ರಸ್ತಾಪಿಸಿದ್ದಾರೆ. ಯೋಗೇಶ್ ಕುಮಾರ್ ಹೇಳಿಕೆಯ ಪ್ರಕಾರ, ಕುತ್ತಿಗೆಯ ಮೇಲೆ ಹಗ್ಗದ ಗುರುತು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಹಾಗೂ ಕತ್ತು ಹಿಸುಕಿ ಸಾವು ಸಂಭವಿಸಿದೆ ಎಂದು ಭಾವಿಸಲಾಗಿದ್ದರಿಂದ ವಿಸೆರಾ ಸಂರಕ್ಷಿಸದಿರಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗಿತ್ತು.
ಆದರೆ, ಇಂತಹ ಪ್ರಮುಖ ಫೋರೆನ್ಸಿಕ್ ಸಾಕ್ಷ್ಯವನ್ನು ಸಂರಕ್ಷಿಸದಿರುವ ನಿರ್ಧಾರದಲ್ಲಿ ಯಾರೆಲ್ಲ ಭಾಗಿಯಾಗಿದ್ದರು, ಯಾವ ಕಾರಣಕ್ಕೆ ಆ ನಿರ್ಧಾರ ಕೈಗೊಳ್ಳಲಾಯಿತು ಹಾಗೂ ಯಾರು ಸೂಚನೆ ನೀಡಿದರು ಎಂಬುದಕ್ಕೆ ಲಿಖಿತ ದಾಖಲೆ ಇರಲಿಲ್ಲ ಎಂದು ವಕೀಲರು ಮನವಿಯಲ್ಲಿ ಪ್ರಶ್ನಿಸಿದ್ದಾರೆ. ಮೃತದೇಹದ ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಪತ್ತೆಯಾಗಿದ್ದರೂ, ಆ ಆಹಾರ ಪದಾರ್ಥಗಳನ್ನು ಸಂರಕ್ಷಿಸುವಂತೆ ವೈದ್ಯರಿಗೆ ಯಾವುದೇ ಲಿಖಿತ ಮನವಿ ಮಾಡಲಾಗಿರಲಿಲ್ಲ ಎಂಬ ಅಂಶವನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದೇ ರೀತಿಯಲ್ಲಿ ಮೃತ ಯುವತಿಯ ಒಳ ಉಡುಪನ್ನು ಆಕೆಯ ಕುಟುಂಬದಿಂದ ತರಿಸಿಕೊಂಡ ವಿಚಾರದಲ್ಲೂ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿತ್ತು ಎಂಬ ಸಾಕ್ಷ್ಯವನ್ನು ವಕೀಲರು ಪ್ರಸ್ತಾಪಿಸಿದ್ದಾರೆ. ಆದರೆ ಆ ಸೂಚನೆ ನೀಡಿದವರು ಯಾರು ಮತ್ತು ಅದರ ಉದ್ದೇಶವೇನು ಎಂಬುದಕ್ಕೆ ಸೂಕ್ತ ಲಿಖಿತ ದಾಖಲೆ ಇರಲಿಲ್ಲ ಎಂಬುದು ಮನವಿಯಲ್ಲಿನ ಪ್ರಮುಖ ಪ್ರಶ್ನೆಯಾಗಿದೆ. ಶವಪರೀಕ್ಷೆ ನಡೆಸಿದ್ದ ವೈದ್ಯೆ ಡಾ. ರಶ್ಮಿ ಅವರು ನ್ಯಾಯಾಲಯದಲ್ಲಿ ಶವಪರೀಕ್ಷೆಯನ್ನು “ಒತ್ತಡದಲ್ಲಿ” ನಡೆಸಲಾಗಿತ್ತು ಎಂದು ಸಾಕ್ಷ್ಯ ನೀಡಿದ್ದನ್ನೂ ವಕೀಲರು ಉಲ್ಲೇಖಿಸಿದ್ದಾರೆ.
SITಗೆ ಪ್ರಮುಖ ಬೇಡಿಕೆಗಳು
ವಕೀಲರ ಈ ಮನವಿಯ ಪ್ರತಿಯನ್ನು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ವಿಶೇಷ ಕಾರ್ಯದರ್ಶಿ ಹಾಗೂ ರಾಜ್ಯ ಡಿಜಿ-ಐಜಿಪಿ ಕಚೇರಿಗೂ ಕಳುಹಿಸಲಾಗಿದೆ.
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 11:51 am
HK News Staffer
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
26-09-26 03:35 pm
HK News Staffer
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ಶಶಿಕುಮಾರ್ ನೇ...
24-09-26 10:46 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm