ಬ್ರೇಕಿಂಗ್ ನ್ಯೂಸ್
10-01-21 01:24 pm Mangalore Correspondent ಕರಾವಳಿ
ಮಂಗಳೂರು, ಜ.10: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣಾ ಕಣದಿಂದ ದಿಢೀರ್ ಆಗಿ ಮಿಥುನ್ ರೈ ಹಿಂದೆ ಸರಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತನೆಂದೇ ಗುರುತಿಸ್ಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯನ್ನು ಚುನಾವಣೆಗೆ ಎರಡು ದಿನ ಇರುವಾಗ ಹಿಂದಕ್ಕೆ ಸರಿಸಿದ್ದು ಯಾಕೆ ಎನ್ನುವ ಕುತೂಹಲ ಕಾರ್ಯಕರ್ತರಲ್ಲಿ ಮೂಡಿದೆ. ಈ ಬಗ್ಗೆ ಕೆದಕುತ್ತಾ ಹೋದಂತೆ, ಕೆಲವು ವಿಚಾರಗಳು ಹೊರಬೀಳುತ್ತಿವೆ.
ಜ.12 ಮತ್ತು 13ರಂದು ನಡೆಯುವ ಆನ್ ಲೈನ್ ಚುನಾವಣೆಯಲ್ಲಿ ಮಿಥುನ್ ರೈಯದ್ದೇ ಪ್ರಭಾವ ಇತ್ತು. ಒಟ್ಟು ನಾಲ್ಕು ಲಕ್ಷ ಮತ್ತು ಚಿಲ್ಲರೆ ಮತಗಳನ್ನು ಹೊಂದಿರುವ ಯುವ ಕಾಂಗ್ರೆಸ್ ಘಟಕದಲ್ಲಿ ಮಿಥುನ್ ರೈ ಈ ಬಾರಿ ಸುಲಭದಲ್ಲಿ ಜಯ ಗಳಿಸುತ್ತಾರೆಂಬ ಮಾತು ಕೇಳಿಬಂದಿತ್ತು. ಯಾಕಂದ್ರೆ, ಕರಾವಳಿಯಲ್ಲಿ ಮಿಥುನ್ ರೈಗೆ ಪೂರ್ತಿ ಫೇವರ್ ಇದ್ದಾರೆ. ಅಲ್ಲದೆ, ಅತಿ ಹೆಚ್ಚು ಮುಸ್ಲಿಂ ಮತದಾರರ ಒಲವು ಕೂಡ ಮಿಥುನ್ ರೈಗಿತ್ತು.
ಇನ್ನು ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ನಲಪ್ಪಾಡ್ ಮುಸ್ಲಿಂ ಅಭ್ಯರ್ಥಿಯಾದರೂ, ಕರಾವಳಿಯಲ್ಲಿ ಇನ್ನೂ ಕಾಂಗ್ರೆಸ್ ವಲಯದಲ್ಲೇ ಒಲವು ಗಳಿಸಿಲ್ಲ. ಬೆಂಗಳೂರಿನಲ್ಲಿಯೂ ಮುಸ್ಲಿಂ ಮತದಾರರಷ್ಚೇ ನಲಪ್ಪಾಡ್ ಜೊತೆಗಿರುವುದು ಅನ್ನೋ ಅಭಿಪ್ರಾಯ ಇದೆ. ಈ ನಡುವೆ, ರಾಜ್ಯಾಧ್ಯಕ್ಷ ಹುದ್ದೆಗೆ ಇನ್ನೊಬ್ಬ ಪ್ರತಿಸ್ಪರ್ಧಿಯಾಗಿರುವ ರಕ್ಷಾ ರಾಮಯ್ಯ ಕೂಡ ಸ್ಪರ್ಧೆ ಒಡ್ಡಿದ್ದಾರೆ. ಮೂವರ ನಡುವೆ ಸ್ಪರ್ಧೆ ಇರೋದಾದ್ರೂ ಬೆಂಗಳೂರು, ಮೈಸೂರು ಮತ್ತು ಕರಾವಳಿಯ ಮತದಾರರದ್ದೇ ನಿರ್ಣಾಯಕ. ಅಲ್ಲದೆ, ಈ ಭಾಗದಲ್ಲೇ ಅತಿ ಹೆಚ್ಚು ಮತದಾರರು ಇರುವ ಕಾರಣ ಮೇಲ್ನೋಟಕ್ಕೆ ಮಿಥುನ್ ರೈ ಪ್ರಬಲ ಅಭ್ಯರ್ಥಿಯಾಗಿದ್ದರು. ಇದಲ್ಲದೆ, ಮಿಥುನ್ ರೈ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರ ಕಟ್ಟಾ ಬೆಂಬಲಿಗನಾಗಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿತ್ತು.
ಇದೇ ಕಾರಣಕ್ಕೆ ಮಿಥುನ್ ರೈಯನ್ನು ಕೊನೆಕ್ಷಣದಲ್ಲಿ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಇನ್ನೊಂದು ಬಣ ಯಶಸ್ವಿಯಾಗಿದೆ ಅನ್ನೋ ಮಾತು ಕೇಳಿಬಂದಿದೆ. ಬೆಂಗಳೂರಿನಲ್ಲಿ ಪ್ರಭಾವಿಯಾಗಿರುವ ಜಮೀರ್ ಅಹ್ಮದ್ ಮತ್ತು ಎನ್.ಎ.ಹ್ಯಾರಿಸ್ ಏನಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಬಣದವರು. ಬೆಂಗಳೂರಿನ ಮುಸ್ಲಿಂ ಮತದಾರರು ಕೂಡ ಇವರ ಬೆನ್ನಿಗಿದ್ದಾರೆ. ಯುವ ಕಾಂಗ್ರೆಸ್ ಘಟಕದಲ್ಲಿ ಡಿಕೆಶಿ ಬೆಂಬಲಿಗನೇ ಅಧ್ಯಕ್ಷನಾಗುವುದರಿಂದ ಪಕ್ಷದ ಹಿಡಿತ ಕೈತಪ್ಪುತ್ತದೆ ಎಂಬ ಭೀತಿಯಿಂದ ಸಿದ್ದರಾಮಯ್ಯ ಎಂಡ್ ಟೀಂ ಮಿಥುನ್ ರೈಯನ್ನು ಕಣದಿಂದಲೇ ಹಿಂದೆ ಸರಿಯುವಂತೆ ಮಾಡಿದೆ ಎನ್ನಲಾಗುತ್ತಿದೆ.
ಅದಕ್ಕಾಗಿ, ಈ ತಂಡ ತಂತ್ರ ಹೂಡಿದ್ದು ಡಿಕೆಶಿ ಮೇಲೆ. ನೀವು ಮಿಥುನ್ ರೈಗೆ ಫೇವರ್ ಆಗಿದ್ದೀರಿ ಎಂದು ಡಿಕೆಶಿ ಮೇಲೆ ನಲಪ್ಪಾಡ್ ಬೆಂಬಲಿಗರು ಗೂಬೆ ಕೂರಿಸಿದ್ದಾರೆ. ಇದರಿಂದ ಯುವ ಕಾಂಗ್ರೆಸ್ ಘಟಕದಲ್ಲೂ ಗುಂಪುಗಾರಿಕೆ ಏಳುವ ಸೂಚನೆ ಲಭಿಸಿದ ಡಿಕೆಶಿ, ತನ್ನ ಆಪ್ತನಿಗೆ ಕಣದಿಂದ ಹಿಂದೆ ಸರಿಯಲು ಸೂಚನೆ ನೀಡಿದ್ದಾರೆ. ಆದರೆ, ಎರಡು ದಿನ ಇರುವಾಗ ಕಣದಿಂದ ಹಿಂದೆ ಸರಿದರೂ, ಚುನಾವಣಾ ಕಣದಲ್ಲಿ ಮಿಥುನ್ ರೈ ಹೆಸರು ಇದ್ದೇ ಇರುತ್ತದೆ. ಅಲ್ಲದೆ, ಮಿಥುನ್ ರೈ ಜೊತೆಗಿರುವ ಬಹಳಷ್ಟು ಯುವ ಕಾಂಗ್ರೆಸ್ ಕಾರ್ಯಕರ್ತರು ಒಂದೋ ಸೈಲೆಂಟ್ ಆಗುತ್ತಾರೆ, ಇಲ್ಲಾ ಮಿಥುನ್ ರೈಗೇ ಮತ ಚಲಾಯಿಸುವ ಸಾಧ್ಯತೆ ಇದೆ. ಇದೇನಿದ್ದರೂ, ಮಿಥುನ್ ರೈ ತನ್ನ ಗಾಡ್ ಫಾದರ್ ಹೇಳಿದ ಹಾಗೆ ಕಣದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದಾರೆ. ಇದರಿಂದ ಮಹಮ್ಮದ್ ನಲಪ್ಪಾಡ್ ಗೆ ಲಾಭವಾಗಬಹುದೆಂದು ಆತನ ಬಣ ಅಂದ್ಕೊಂಡಿದೆ. ಆದರೆ, ಚುನಾವಣಾ ಕಣದಲ್ಲಿ ಏನೂ ಆಗಬಹುದು ಅನ್ನೋದನ್ನು ಡಿಕೆಶಿ ಬಲ್ಲದ ಮನುಷ್ಯನಂತೂ ಅಲ್ಲ.
ಅತ್ತ ಹಾವು ಸಾಯಬಾರದು, ಕೋಲು ಮುರಿಯಬಾರದು ಎನ್ನುವಂತೆ, ಪಕ್ಷದಲ್ಲಿ ಗುಂಪುಗಾರಿಕೆ ಆಗೋದು ಬೇಡ ಎಂದು ಡಿಕೆಶಿ ಈ ನಡೆಯನ್ನು ಇಟ್ಟಿದ್ದಾರೆ. ಆದರೆ, ಪ್ರತಿ ಬಾರಿಯೂ ಡಿಕೆಶಿ ತಂತ್ರಗಾರಿಕೆಗೆ ಪ್ರತಿತಂತ್ರ ಹೂಡುವುದೇ ಇನ್ನೊಂದು ಬಣದ ಕೆಲಸವಾದರೆ ಸಾಮಾನ್ಯ ಕಾರ್ಯಕರ್ತರು ಕೂಡ ಯೋಚನೆ ಮಾಡಿಯೇ ಮತ ಚಲಾಯಿಸಲು ನಿರ್ಧರಿಸಲೂ ಬಹುದು. ಹಾಗಾದರೆ, ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಆಗಲಿಕ್ಕಿಲ್ಲ ಎನ್ನುವಂತಿಲ್ಲ.
— Mithun Rai (@TheMithunRai) January 9, 2021
Dakshina Kannada Youth Congress president Mithun Rai will not be contesting for the position of state Youth Congress chief.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm