ಬ್ರೇಕಿಂಗ್ ನ್ಯೂಸ್
15-08-26 04:52 pm HK News Staffer ಕರಾವಳಿ
ಮಂಗಳೂರು, ಆ.15: ಪಾನ್ ಮಸಾಲಾದಲ್ಲಿ ನಿಕೋಟಿನ್, ತಂಬಾಕು ಹೆಚ್ಚಿರುವುದರಿಂದ ಗುಟ್ಕಾ ಬ್ಯಾನ್ ಮಾಡಲಾಗಿದೆ. ಪ್ರತ್ಯೇಕವಾಗಿ ಪಾನ್ ಮಸಾಲ ಮಾತ್ರ ಬರೋದಾದ್ರೆ ನಮ್ಮ ನಿರ್ಬಂಧ ಇಲ್ಲ. ಇದರಿಂದ ಅಡಿಕೆ ಬೆಳೆಗಾರರಿಗೆ ಅಥವಾ ವ್ಯಾಪಾರಸ್ಥರಿಗೆ ಯಾವ ತೊಂದರೆಯೂ ಆಗಲ್ಲ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
2014ರಲ್ಲಿ ಗುಟ್ಕಾ ನಿಷೇಧ ಮಾಡಿದಾಗಲೂ ಇದೇ ರೀತಿ ಆಗಿತ್ತು. ಆದರೆ ಆಗಲೂ ಅಡಿಕೆ ಬೆಲೆ ಕಡಿಮೆ ಆಗಿಲ್ಲ, ಜಾಸ್ತಿ ಆಗಿತ್ತು. ಈಗಲೂ ಮೂರು ತಿಂಗಳು ಕಾಯಿರಿ, ಆ ಬಳಿಕ ಹೇಳುತ್ತೇನೆ. ಇದನ್ನ ನಾನು ರಾಜಕೀಯ ಮಾಡಲ್ಲ, ನಮ್ಮದು ಆರೋಗ್ಯಕ್ಕೆ ಪೂರಕ ಉದ್ದೇಶ. ಇವರು ಗುಟ್ಕಾ ಲಾಬಿಗೆ ಮಣಿದು ನಮ್ಮನ್ನ ವಿರೋಧ ಮಾಡ್ತಾ ಇದಾರೆ ಅಂತ ಆರೋಪ ಇದೆ. ಅಡಿಕೆಗೂ ಗುಟ್ಕಾ ನಿಷೇಧಕ್ಕೂ ಸಂಬಂಧ ಇಲ್ಲ ಎನ್ನೋದನ್ನು ಹೇಳುತ್ತೇನೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಚಟುವಟಿಕೆ ನಿರ್ಬಂಧ ಕಾಯಿದೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ, ಕಾನೂನಿಗೆ ಅನುಗುಣವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಕಾಂಗ್ರೆಸ್ ಸರ್ಕಾರ ಕುಳಿತು ಚರ್ಚಿಸಿ ಇದರ ಬಗ್ಗೆ ತೀರ್ಮಾನ ಮಾಡಲಿದೆ. ಜನರಿಗೆ ತೊಂದರೆ ಆಗದಂತೆ ನಾವು ಪ್ರತಿಪಕ್ಷ ನಾಯಕರ ಜೊತೆಗೂ ಚರ್ಚಿಸ್ತೇವೆ. ಸರ್ಕಾರ ಜನಸಾಮಾನ್ಯರಿಗೆ ತೊಂದರೆ ಕೊಡುವುದಾಗಲೀ, ಸಂವಿಧಾನದ ವಿರುದ್ಧ ತೀರ್ಮಾನ ತೆಗೊಳ್ಳುವುದಾಗಲೀ ಮಾಡಲ್ಲ ಎಂದರು.
ಜಮೀರ್ ಆಹ್ಮದ್ ಸ್ವಾತಂತ್ರ್ಯ ಧ್ವಜಾರೋಹಣ ನಿರಾಕರಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಖಾಸರ್, ಜಮೀರ್ ಅವರ ದೇಶಪ್ರೇಮ ಬೇರೆಯವರಿಗಿಂತ ಹೆಚ್ಚಿದೆ. ದೇಶದ ಸತ್ಪ್ರಜೆಯಾಗಿ ಸೌಹಾರ್ದತೆ ಮತ್ತು ದೇಶಪ್ರೇಮ ತೋರಿಸಿದ್ದಾರೆ. ಕೆಲವೊಂದು ಕಾರಣದಿಂದ ಇವತ್ತಿನ ಕಾರ್ಯಕ್ರಮ ಬರಲು ಆಗಲ್ಲ ಎಂದು ಹೇಳಿದ್ದಾರೆ. ಅವರು ಬರೆದ ಪತ್ರದಲ್ಲಿ ಒಂದೆರಡು ಅಕ್ಷರ ಹೆಚ್ಚು ಕಡಿಮೆ ಆಗಿದೆ. ಅವರ ಉದ್ದೇಶ ಸರಿಯಿದೆ, ಅದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ಅದನ್ನೇ ಅಪಾರ್ಥ ಮಾಡಿಕೊಂಡು ರಾಜಕೀಯ ಮಾಡೋದು ಸರಿಯಲ್ಲ
ಅವರಿಗೆ ಕಡೆ ಘಳಿಗೆಯಲ್ಲಿ ಅವರಿಗೆ ಹೋಗಲು ಆಗದೇ ಪತ್ರ ಬರೆದಿದ್ದಾರೆ. ದೇಶದ ಎಲ್ಲರಿಗೂ ದೇಶ ಪ್ರೇಮ ಇದೆ, ಜಮೀರ್ ಆಹ್ಮದ್ ಅವರಿಗೂ ಇದೆ. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಒಗ್ಗಟ್ಟಿನಿಂದ ಅಭಿವೃದ್ಧಿಯ ಕರ್ನಾಟಕ ನಿರ್ಮಿಸೋಣ. ಜಮೀರ್ ಅವರಿಗೆ ಖಾತೆ ಬಗ್ಗೆ ಅಸಮಾಧಾನ ಇಲ್ಲ, ಅದು ಹೈಕಮಾಂಡ್ ಕೊಟ್ಟಿರೋದು. ಎಲ್ಲರೂ ಒಪ್ಪಿಕೊಂಡೇ ಈ ತೀರ್ಮಾನ ಆಗಿದೆ, ಜಮೀರ್ ಕೂಡ ಒಪ್ಪಿದ್ದಾರೆ ಎಂದರು.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
08-10-26 08:44 pm
HK News Staffer
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am