ಬ್ರೇಕಿಂಗ್ ನ್ಯೂಸ್
07-01-21 11:40 pm Mangaluru Correspondent ಕರಾವಳಿ
ಮಂಗಳೂರು, ಜ.7: ಇಂದು ಸಂಜೆಯಾಗುತ್ತಿದ್ದಂತೆ ಮಂಗಳೂರಿನ ಬೀಚ್ ಗಳಿಗೆ ತೆರಳಿದ್ದವರು ಶಾಕ್ ಆಗಿದ್ದರು. ಪೊಲೀಸರು ಬಂದು ನೇರವಾಗಿ ಜೀಪು ಹತ್ತಿಸುತ್ತಿದ್ದರು. ಯಾಕೆ, ಏನೆಂದು ಕೇಳುವ ಪುರುಸೊತ್ತು ಇರಲಿಲ್ಲ. ಎಲ್ಲರನ್ನೂ ತಂದು ಮಂಗಳೂರಿನ ಟೌನ್ ಹಾಲ್ ಬಳಿ ಕೂಡಿ ಹಾಕಿದ್ದರು.
ಹೌದು.. ಪೊಲೀಸರಿಗೆ ಇಂದು ಸಂಜೆ ಹೊತ್ತಿಗೆ ಮಂಗಳೂರಿನ ನೂತನ್ ಕಮಿಷನರ್ ಟಾರ್ಗೆಟ್ ಕೊಟ್ಟಿದ್ದರಂತೆ. ಉಳ್ಳಾಲ, ಸೋಮೇಶ್ವರ, ಪಣಂಬೂರು, ತಣ್ಣೀರುಬಾವಿಗೆ ಬಂದಿದ್ದವರನ್ನು ಹಿಡಿದು ತರುವಂತೆ ಫರ್ಮಾನು ಹೋಗಿತ್ತು. ಕಮಿಷನರ್ ಹೇಳಿದ ಮೇಲೆ ಹೂಂಗುಟ್ಟದೆ ಆಗುತ್ತಾ..? ಅದಕ್ಕಾಗಿ ಡಿಸಿಪಿ, ಎಸಿಪಿಗಳು ಸೇರಿ 16 ಮಂದಿಯ ತಂಡವನ್ನೂ ಮಾಡಿದ್ದರಂತೆ. ಒಂದೊಂದ್ಕಡೆಯಿಂದ ಇಷ್ಟೂಂತ ಹಿಡಿದು ತರಲು ಸೂಚನೆ ಇದ್ದುದರಿಂದ ಸಂಜೆ ಆರು ಗಂಟೆಗೇ ಪೊಲೀಸರು ಬೀಚ್ ಕಡೆಗೆ ಓಡಿದ್ದರು.



ಯುವಕರು, ಕಾಲೇಜು ವಿದ್ಯಾರ್ಥಿಗಳು, ಬೀಚ್ ಸುತ್ತಲು ಬಂದಿದ್ದ ಗೆಳೆಯರು, ದೂರದಿಂದ ಪ್ರವಾಸ ಬಂದಿದ್ದ ಕುಟುಂಬಸ್ಥರು ಎಲ್ಲ ಬೀಚ್ ನಲ್ಲಿ ಇದ್ದರು. ಹಿಡಿದು ತರಲೇಬೇಕೆಂಬ ಸೂಚನೆ ಇದ್ದುದರಿಂದ ಇದ್ದುದರಲ್ಲಿ ಒಂದಷ್ಟು ಮಂದಿಯನ್ನು ಪೊಲೀಸರು ಎತ್ತಾಕ್ಕೊಂಡು ಬರಲೇ ಬೇಕಾಗಿತ್ತು. ಒಂಬತ್ತು ಗಂಟೆ ಒಳಗೆ ಮಂಗಳೂರು ನಗರದ ಟೌನ್ ಹಾಲ್ ಬಳಿಯ ಮಿನಿ ಹಾಲ್ ನಲ್ಲಿ ಕೂಡಿಹಾಕಿದ್ದರು.
74 ಮಂದಿ ಹುಡುಗರು, ಎಂಟು ಮಂದಿ ಕಾಲೇಜು ಹುಡುಗಿಯರು ಕರೆದು ಕೂರಿಸಿದ್ದರು. ಕಮಿಷನರ್ ಶಶಿಕುಮಾರ್ ಅಲ್ಲಿ ಕರೆತಂದಿದ್ದವರಿಗೆ ಪೊಲೀಸರ ಮುಂದೆ ಒಂದಷ್ಟು ಕ್ಲಾಸ್ ತೆಗೆದುಕೊಂಡರು. ನೀವು ಹೀಗೆ ರಾತ್ರಿ ಹೊತ್ತಿಗೆ ಬೀಚ್ ನತ್ತ ಹೋಗಿ ಏನಾದ್ರೂ ಹೆಚ್ಚು ಕಮ್ಮಿ ಆದರೆ ಯಾರು ಹೊಣೆ ? ನಿಮ್ಗೇನು ಹೇಳೋರು ಕೇಳೋರು ಇಲ್ವಾ..? ರಾತ್ರಿ ಆದ ಕೂಡಲೇ ನೀವು ನಿಮ್ಮ ಮನೆಗೆ ಹೋಗಬೇಕು. ಬೀಚ್ ನಲ್ಲಿ ಹೋಗಿ ಕುಡಿಯುವುದು, ಇನ್ನೇನೋ ಮೋಜು ಮಾಡುವುದು ಕಂಡರೆ ಇನ್ಮುಂದೆ ಸರಿ ಇರಲ್ಲ. ಕೇಸ್ ಹಾಕಿ ಒಳಗೆ ಹಾಕಿಸ್ತೀನಿ ಎಂದು ವಾರ್ನ್ ಮಾಡಿದ್ರು.

ಮಾಧ್ಯಮದ ಕ್ಯಾಮರಾ ಬರುತ್ತಿದ್ದಂತೆ ಹುಡುಗಿಯರನ್ನು ತೋರಿಸಬೇಡಿ ಎನ್ನುತ್ತಲೇ ಅವರನ್ನು ಎಸಿಪಿಗೆ ಹೇಳಿ ಅವರ ಮನೆಗೇ ಬಿಟ್ಟು ಬನ್ನಿ ಎಂದು ಕಮಿಷನರ್ ಸೂಚನೆ ನೀಡಿದ್ರು. ಹುಡುಗರ ಪೈಕಿ 60 ಶೇ. ಮಂದಿ ಸಂಭಾವಿತರೇ ಆಗಿದ್ದವರು. ಪೊಲೀಸರು ಹಿಡಿದು ತಂದಿದ್ದು ನೋಡಿ ಶಾಕ್ ಆಗಿದ್ದರು. ಹುಡುಗಿಯರಂತೂ ಪೊಲೀಸರನ್ನು ನೋಡಿ ಬೆವತು ಹೋಗಿದ್ದರು. ಕೊನೆಗೆ ಎಲ್ಲರನ್ನೂ ವಾರ್ನಿಂಗ್ ಕೊಟ್ಟು ಸಾಗಹಾಕಿದ್ರು. ಒಂದಿಬ್ಬರ ಮೇಲೆ ಕೇಸು ಹಾಕಿದ್ದಾರೆ. 17 ಬೈಕ್, ಏಳು ಕಾರುಗಳನ್ನು ವಶಕ್ಕೆ ಪಡೆದಿದ್ದಾಗಿ ಮಾಹಿತಿ ನೀಡಿದ್ದಾರೆ.
ಈಗ ಪ್ರಶ್ನೆ ಇರೋದು, ಯಾವುದೇ ಮುನ್ಸೂಚನೆ ಇಲ್ಲದೆ ಬೀಚ್ ಕಡೆಗೆ ನುಗ್ಗಿ ಪೊಲೀಸರು ಅಲ್ಲಿರುವ ಮಂದಿಯನ್ನು ಹಿಡಿದು ತಂದಿದ್ದು ಎಷ್ಟು ಸರಿ ಅನ್ನೋದು. ಬೀಚ್ ಟೂರಿಸಂ ವ್ಯಾಪ್ತಿಗೆ ಬರೋ ವಿಚಾರ. ಪ್ರವಾಸೋದ್ಯಮಕ್ಕೆ ಜಿಲ್ಲಾಧಿಕಾರಿಯೇ ಅಧ್ಯಕ್ಷರು. ಜಿಲ್ಲಾಧಿಕಾರಿಗೆ ಸೂಚನೆಯನ್ನೂ ಕೊಡದೆ, ಕಾನೂನು ಸುವ್ಯವಸ್ಥೆ ನೆಲೆಯಲ್ಲಿ ನೋಡಿದ್ರೂ ಬೀಚ್ ಹೋಗುವ ಮಂದಿಗೆ ಮೊದಲೇ ಎಲರ್ಟ್ ಸೂಚನೆಯನ್ನೇ ಕೊಡದೆ ಕಮಿಷನರ್ ಸಾಹೇಬ್ರು ಎಲ್ರನ್ನು ಹಿಡ್ಕೊಂಡು ಬಂದು ಕೂಡಿಹಾಕಿದ್ದಾರೆ.

ಅಷ್ಟಕ್ಕೂ ವಾರ್ನ್ ಮಾಡೋದಿದ್ದರೆ ಪೊಲೀಸರನ್ನು ಕಳಿಸಿ, ಬೀಚ್ ನಲ್ಲಿ ಸುತ್ತಾಡುವ ಮಂದಿಯನ್ನು ಅಲ್ಲಿಂದಲೇ ಗದರಿಸಿ ಕಳಿಸುವ ಏರ್ಪಾಡು ಮಾಡಬಹುದಿತ್ತು. ಅದು ಬಿಟ್ಟು ಹದಿಹರೆಯದ ಹುಡುಗ, ಹುಡುಗಿಯರನ್ನು ರಾತ್ರಿ ಹೊತ್ತಿಗೆ ಏಕಾಏಕಿ ಪೊಲೀಸ್ ಜೀಪಿನಲ್ಲಿ ಎತ್ತಾಕ್ಕೊಂಡು ಬಂದು ಏನಾದ್ರೂ ಆಮೇಲೆ ಹೆಚ್ಚು ಕಮ್ಮಿ ಆದರೆ ಅದನ್ನು ಕಮಿಷನರ್ ಹೊತ್ತುಕೊಳ್ಳುತ್ತಾರೆಯೇ ? ಬೀಚ್ ಪ್ರವೇಶಕ್ಕೆ ಅಥವಾ ಅಲ್ಲಿರೋದಕ್ಕೆ ನಿರ್ಬಂಧ ಏನೂ ವಿಧಿಸದೆ ಅಲ್ಲಿರೋ ಮಂದಿಯನ್ನು ಹಿಡಿದು ತನ್ನಿ ಎನ್ನಲು ಪೊಲೀಸರು ಏನು ಮಾಡಲು ಹೊರಟಿದ್ದಾರೆ ಎಂಬ ಪ್ರಶ್ನೆ ಕೇಳಿಬಂದಿದೆ. ಬೀಚ್ ನಿರ್ಬಂಧಿತ ಪ್ರದೇಶವೇ ? ಕುಡಿಯುತ್ತಿದ್ದರೆ ಅಥವಾ ಇನ್ನಾವುದೇ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದರೆ ಅವರನ್ನು ಮಾತ್ರ ವಶಕ್ಕೆ ಪಡೆಯಬಹುದಿತ್ತಲ್ಲ..
ಐಪಿಎಸ್ ಅಧಿಕಾರಿಯಾಗಿರುವ ಪೊಲೀಸ್ ಕಮಿಷನರ್ ಗೆ ಜಿಲ್ಲಾಧಿಕಾರಿಗೆ ತಿಳಿಸದೆ ನಿಯಮಗಳನ್ನು ಹೇರುವ ಅಧಿಕಾರ ಇದೆ. ಹಾಗಂತ, ಬೇಕಾಬಿಟ್ಟಿ ಅಧಿಕಾರವನ್ನು ಬಳಸೋದು ಭಯ ಹುಟ್ಟಿಸೋದು ಟೂರಿಸಂ ಆಕರ್ಷಿಸಬೇಕೆಂದು ಶ್ರಮಿಸುತ್ತಿರುವ ಜಿಲ್ಲಾಧಿಕಾರಿಗಳ ಶ್ರಮಕ್ಕೆ ಪೊಲೀಸ್ ಕಮಿಷನರ್ ಎಳ್ಳುನೀರು ಬಿಟ್ಟಂತೆ.. ಈಗಾಗ್ಲೇ ರಾತ್ರಿ ವೇಳೆ ವಿನಾಕಾರಣ ಅಡ್ಡಾಡುವ ಮಂದಿಯನ್ನು ವಶಕ್ಕೆ ಪಡೆಯುವ ಕೆಲಸವನ್ನು ಕೊಟ್ಟು ಪೊಲೀಸರಿಗೆ ಚುರುಕು ಮುಟ್ಟಿಸಿದ್ದಾರೆ. ಕಮಿಷನರ್ ತೆಗೆದುಕೊಂಡ ಈ ಕ್ರಮಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೆಂದು, ಏನೋ ಮಾಡಲು ಹೋಗಿ ಇನ್ನೇನೋ ಆಗುವ ಕೆಲಸ ಆಗಬಾರದು ಅಷ್ಟೇ..
Mangalore Police Commissioner Shashi Kumar raided on beaches of Mangalore and took Boys, girls and families, into custody. All those on the beach were brought to the mini Townhall by Police van and warning was given to all.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm