ಬ್ರೇಕಿಂಗ್ ನ್ಯೂಸ್
01-01-21 05:14 pm Mangalore Correspondent ಕರಾವಳಿ
ಮಂಗಳೂರು, ಜ.1: ಮರಳು ಮಾಫಿಯಾ ಮತ್ತು ಅಂತಾರಾಜ್ಯ ಮರಳು ದಂಧೆಕೋರರ ಒತ್ತಡಕ್ಕೆ ಮಣಿದು ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ರಂಜಿತ್ ಕುಮಾರ್ ಬಂಡಾರು ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೂರು ತಿಂಗಳ ಹಿಂದಷ್ಟೆ ಮಂಗಳೂರಿನಲ್ಲಿ ಪ್ರೊಬೇಷನರಿಯಾಗಿ ಎಸಿಪಿ ಹುದ್ದೆಗೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಆಂಧ್ರಪ್ರದೇಶ ಮೂಲದ ಐಪಿಎಸ್ ಅಧಿಕಾರಿ ರಂಜಿತ್ ಕುಮಾರ್ ಅವರನ್ನು ನಿನ್ನೆ ದಿಢೀರ್ ಆಗಿ ವರ್ಗ ಮಾಡಲಾಗಿತ್ತು. ಆದರೆ, ಈ ವರ್ಗಾವಣೆಯ ಹಿಂದೆ ಮರಳು ಮಾಫಿಯಾದವರ ಕೈವಾಡ ಇದೆಯೆಂಬ ಮಾತು ಪೊಲೀಸ್ ವಲಯದಲ್ಲೇ ಕೇಳಿಬರುತ್ತಿದೆ. ರಂಜಿತ್, ಮಂಗಳೂರಿನಲ್ಲಿ ಕರ್ತವ್ಯಕ್ಕೆ ಬಂದ ಬಳಿಕ ಅಕ್ರಮ ಮರಳು ಸಾಗಣೆ, ಮರಳು ದಂಧೆಕೋರರ ಬಗ್ಗೆ ಶಿಸ್ತಿನ ಕ್ರಮ ಕೈಗೊಂಡಿದ್ದರು. ಹತ್ತು ದಿನಗಳ ಹಿಂದಷ್ಟೆ ಕೇರಳ ಗಡಿಭಾಗ ತಲೆಕ್ಕಿ ಎಂಬಲ್ಲಿ ಭಾರೀ ಪ್ರಮಾಣದ ಅಕ್ರಮ ಮರಳು ಸಂಗ್ರಹವನ್ನು ಪತ್ತೆ ಮಾಡಿದ್ದರು. ಅಲ್ಲದೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅಲ್ಲಿದ್ದ 800 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆಯುವಂತೆ ಮಾಡಿದ್ದರು.
ತಪಾಸಣೆ ವೇಳೆ, ಈ ಮರಳು ನೇತ್ರಾವತಿ ನದಿಯಿಂದ ಸಾಗಣೆ ಮಾಡಲಾಗಿತ್ತು ಎನ್ನೋದು ತಿಳಿದುಬಂದಿತ್ತು. ಕೇರಳದ ಕಾಸರಗೋಡಿಗೆ ಸಾಗಿಸುವ ಉದ್ದೇಶದಿಂದ ಉಳ್ಳಾಲ, ಹರೇಕಳ, ಕೋಣಾಜೆ ಭಾಗದಿಂದ ಅಕ್ರಮವಾಗಿ ಒಯ್ದು ಗಡಿಭಾಗದಲ್ಲಿ ಶೇಖರಣೆ ಮಾಡಾಲಾಗಿತ್ತು. ಪೊಲೀಸ್ ದಾಳಿ ವೇಳೆ ಕೇರಳ ನೋಂದಣಿಯ ಐದು ಟಿಪ್ಪರ್ ಲಾರಿ ಮತ್ತು ಎರಡು ಜೆಸಿಬಿಗಳನ್ನು ವಶಕ್ಕೆ ಪಡೆಯಲಾಗಿತ್ತು. ವಶಕ್ಕೆ ಪಡೆದ ಎಲ್ಲವನ್ನೂ ಕೋಣಾಜೆ ಠಾಣೆಗೆ ತಂದು ಇರಿಸಲಾಗಿದ್ದಲ್ಲದೆ, ಈ ಬಗ್ಗೆ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ರೌಡಿ ತಲೆಕ್ಕಿ ರಫೀಕ್ ಮತ್ತು ಸಹಚರರಿಗೆ ಈ ಮರಳು ಸೇರಿದ್ದಾಗಿ ಮಾಹಿತಿ ಕೇಳಿಬಂದಿತ್ತು. ವಶಪಡಿಸಿದ ಮರಳಿನ ಸರಕಾರಿ ದರ 5.60 ಲಕ್ಷ ಎಂದು ಹೇಳಲಾಗಿತ್ತಾದರೂ ದಂಧೆಕೋರರ ಮಾರುಕಟ್ಟೆ ಮೌಲ್ಯ ಇದರ ಹತ್ತು ಪಾಲು ಇರುತ್ತದೆ.
ಹೀಗಾಗಿ ಎಸಿಪಿ ದರ್ಜೆಯ ಅಧಿಕಾರಿ ನೇರವಾಗಿ ದಾಳಿ ನಡೆಸಿ, ಭಾರೀ ಪ್ರಮಾಣದ ಮರಳನ್ನು ಜಪ್ತಿ ಮಾಡಿದ್ದು ಸ್ಥಳೀಯ ರಾಜಕಾರಣಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಇದಲ್ಲದೆ, ಎಸಿಪಿ ವ್ಯಾಪ್ತಿಗೆ ಬರುವ ಉಳ್ಳಾಲ, ಕೋಣಾಜೆ, ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಅಕ್ರಮ ಮರಳು ದಂಧೆಕೋರರಿಗೂ ಈ ವ್ಯಕ್ತಿಯಿಂದಾಗಿ ಉಸಿರುಕಟ್ಟಿದ ಸ್ಥಿತಿ ಉಂಟಾಗಿತ್ತು. ಅಕ್ರಮ ಮರಳು, ಇನ್ನಿತರ ವಹಿವಾಟಿನ ವಿಚಾರದಲ್ಲಿ ಕೆಲವು ಪೊಲೀಸರನ್ನು ಅಮಾನತುಗೊಳಿಸಿದ್ದಲ್ಲದೆ, ಮಾಮೂಲು ಪಡೆಯುತ್ತಿದ್ದವರು ಗಂಟಲು ಸಿಕ್ಕಿಸಿಕೊಂಡಿದ್ದರು.
ಅಕ್ರಮ ದಂಧೆಕೋರರು ರಾಜ್ಯ ಸರಕಾರಕ್ಕೆ ಒತ್ತಡ ಹೇರಿ ಐಪಿಎಸ್ ಅಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರನ್ನು ಎಸಿಪಿ ಹುದ್ದೆಯಿಂದ ಎತ್ತಂಗಡಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ರಂಜಿತ್ ಕುಮಾರ್ ಮಂಗಳೂರಿನಲ್ಲಿ ಪ್ರೊಬೇಷನರಿಯಾಗಿದ್ದು ಎಎಸ್ಪಿ ದರ್ಜೆ ಅಧಿಕಾರಿಯಾಗಿದ್ದರು. ಇದೀಗ ಭಟ್ಕಳ ಉಪ ವಿಭಾಗಕ್ಕೆ ಎಸ್ಪಿ ಆಗಿ ಭಡ್ತಿ ಪಡೆದು ವರ್ಗಾವಣೆ ಆಗಿದ್ದಾರೆ. ಇದರಿಂದ ವೈಯಕ್ತಿಕವಾಗಿ ರಂಜಿತ್ ಕುಮಾರ್ ಗೆ ಒಳಿತೇ ಆಗಿದೆ. ಆದರೆ, ಉತ್ತಮ ಅಧಿಕಾರಿಯೊಬ್ಬರನ್ನು ಮಂಗಳೂರು ಕೇವಲ ಮೂರೇ ತಿಂಗಳಲ್ಲಿ ಕಳಕೊಂಡಿದೆ ಎನ್ನುವ ಮಾತು ಕೇಳಿಬಂದಿದೆ. ಮಂಗಳೂರಿನ ನಿಷ್ಠಾವಂತ ಪೊಲೀಸರು ಕೂಡ ಇದೇ ಮಾತನ್ನು ಹೇಳುತ್ತಾರೆ. ತಮ್ಮ ಕಠಿಣ ಶಿಸ್ತು ಮತ್ತು ದಕ್ಷತೆಯ ಕಾರಣದಿಂದಾಗಿ ಮೂರೇ ತಿಂಗಳಲ್ಲಿ ವರ್ಗವಾಗಿದ್ದಾರೆ ಎನ್ನೋದನ್ನು ಹೇಳುತ್ತಿದ್ದಾರೆ.
Mangalore South Acp Ranjith Kumar has been transferred under the influence of Big Sand Smugglers of Mangalore is the rumor now in Police Department Circle.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm