ಪಿಎಂ ಕೇರ್ ಫಂಡ್ ಹೆಸರಲ್ಲಿ ಖಾಸಗಿ ಟ್ರಸ್ಟಿಗೆ ಸಾವಿರಾರು ಕೋಟಿ ಪಡೆದಿದ್ದಾರೆ, ಚಾಣಕ್ಯ ಯುನಿವರ್ಸಿಟಿ ಹೆಸರಲ್ಲಿ ಸಾವಿರ ಕೋಟಿ ಸಂಗ್ರಹಿಸಿದ್ದಾರೆ, ಏನ್ಮಾಡಿದ್ರಿ ಅಂತ ಉತ್ತರ ಕೊಡ್ಲಿ ; ಪ್ರಹ್ಲಾದ ಜೋಷಿಗೆ ಸಚಿವ ಗುಂಡೂರಾವ್ ಟಾಂಗ್  

09-01-26 03:21 pm       Mangalore Correspondent   ಕರಾವಳಿ

ಬಿಜೆಪಿಯವರು ಇಲೆಕ್ಟೋರಲ್ ಬಾಂಡ್, ಪಿಎಂ ಕೇರ್ ಫಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಇಸ್ಕೊಂಡು ಮೋಸ ಮಾಡಿದ್ದಾರೆ. ಪ್ರಹ್ಲಾದ ಜೋಷಿಯವರು ಇದರ ಬಗ್ಗೆ ಉತ್ತರಿಸಲಿ. ಖಾಸಗಿ ಟ್ರಸ್ಟಿಗೆ ಪ್ರಧಾನ ಮಂತ್ರಿ ಹೆಸರಿಟ್ಟು ಹೇಗೆ ದುಡ್ಡು ಸಂಗ್ರಹಿಸಿದ್ರಿ ಅಂತ ಕೇಳಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಕ್ಕೆ ಪ್ರಶ್ನೆ ಹಾಕಿದ್ದಾರೆ.

ಮಂಗಳೂರು, ಜ.9 : ಬಿಜೆಪಿಯವರು ಇಲೆಕ್ಟೋರಲ್ ಬಾಂಡ್, ಪಿಎಂ ಕೇರ್ ಫಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಇಸ್ಕೊಂಡು ಮೋಸ ಮಾಡಿದ್ದಾರೆ. ಪ್ರಹ್ಲಾದ ಜೋಷಿಯವರು ಇದರ ಬಗ್ಗೆ ಉತ್ತರಿಸಲಿ. ಖಾಸಗಿ ಟ್ರಸ್ಟಿಗೆ ಪ್ರಧಾನ ಮಂತ್ರಿ ಹೆಸರಿಟ್ಟು ಹೇಗೆ ದುಡ್ಡು ಸಂಗ್ರಹಿಸಿದ್ರಿ ಅಂತ ಕೇಳಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಕ್ಕೆ ಪ್ರಶ್ನೆ ಹಾಕಿದ್ದಾರೆ.

ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಆಗಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಬಳಿ ನ್ಯಾಶನಲ್ ಹೆರಾಲ್ಡ್ ಪತ್ರಿಕೆಗೆ ಕೋಟ್ಯಂತರ ರೂಪಾಯಿ ಜಾಹೀರಾತು ಕೊಟ್ಟ ವಿಚಾರದ ಬಗ್ಗೆ ಪ್ರಶ್ನೆ ಮಾಡಿದಾಗ ಗರಂ ಆದರು. ಪ್ರಹ್ಲಾದ ಜೋಷಿಯವರಿಗೆ, ಬಿಜೆಪಿಯವರಿಗೆ ಇದೇ ಆಗೋಗಿದೆ. ಇವರು ಇಲೆಕ್ಟೋರಲ್ ಬಾಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ಮೋಸ ಮಾಡಿದ್ದಾರೆ. ಅದಕ್ಕೆ ಲೆಕ್ಕ ಕೊಟ್ಟಿದ್ದಾರೆಯೇ. ಪಿಎಂ ಕೇರ್ ಫಂಡ್ ಅನ್ನುವ ಖಾಸಗಿ ಟ್ರಸ್ಟ್ ಮುಂದಿಟ್ಟು ಎಲ್ಲ ಸರ್ಕಾರಿ ಅಧಿಕಾರಿಗಳು, ಜನಸಾಮಾನ್ಯರಿಂದ ಕೋವಿಡ್ ಸಮಯದಲ್ಲಿ ಹಣ ಪಡೆದಿದ್ದಾರೆ. ಖಾಸಗಿ ಟ್ರಸ್ಟಿಗೆ ಪ್ರಧಾನ ಮಂತ್ರಿ ಹೆಸರನ್ನು ಬಳಸಿ ದುರುಪಯೋಗ ಮಾಡಿದ್ದು ಹೇಗೆ.. ಅದನ್ನು ಕೇಂದ್ರ ಸರ್ಕಾರದಿಂದ ಹಣ ಸಂಗ್ರಹ ಅಂತ ಯಾಕೆ ಹೇಳಿದ್ರಿ ಅಂತ ಉತ್ತರ ಕೊಡಲಿ ಎಂದು ಸವಾಲೆಸೆದಿದ್ದಾರೆ.

ನ್ಯಾಶನಲ್ ಹೆರಾಲ್ಡ್ ಪತ್ರಿಕೆಗೆ ಸ್ವಾತಂತ್ರ್ತ್ಯ ಹೋರಾಟದ ಇತಿಹಾಸ ಇದೆ, ಲಾಭ ರಹಿತ ಟ್ರಸ್ಟ್ ಅದು. ಅದಕ್ಕೇನೋ ಎರಡು ಕೋಟಿ ರೂಪಾಯಿ ನೀಡಿದ್ದಾರೆ. ಬೇರೆ ಬೇರೆ ಪತ್ರಿಕೆಗಳಿಗೆ ಜಾಹೀರಾತು ಕೊಡಲ್ವಾ. ದಿನಾ ನೂರಾರು ಕೋಟಿ ಖರ್ಚು ಮಾಡುತ್ತದೆ. ವಿಷಯ ಡೈವರ್ಟ್ ಮಾಡಬೇಕೆಂದು ಏನೇನೋ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಜೋಷಿಯವರು ಮೊದಲು ಉತ್ತರ ಕೊಡಲಿ, ಪಿಎಂ ಕೇರ್ ಫಂಡ್ ಅನ್ನು ಸರ್ಕಾರದ್ದೆಂದು ಯಾಕೆ ಹೇಳಿದ್ರಿ ಅಂತ ಹೇಳಲಿ. ಅದರಲ್ಲಿ ಎಷ್ಟು ಹಣ ಸಂಗ್ರಹ ಆಗಿದೆ, ಎಲ್ಲಿ ಉಪಯೋಗ ಆಗಿದೆ ಎಂದು ಹೇಳಲಿ. ಕಳಪೆ ದರ್ಜೆಯ ಕೋವಿಡ್ ಮಾಸ್ಕ್, ಇನ್ನಿತರ ಉಪಕರಣ ಪೂರೈಕೆ ಮಾಡಿದ್ದಾರೆ. ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡಿ ದುಡ್ಡು ತೆಗೆಸಿದ್ದರ ಬಗ್ಗೆ ಲೆಕ್ಕ ಕೊಡಲಿ. ದೇಶದ ಆಸ್ತಿಯನ್ನು ಕೆಲವೇ ಕೆಲವೇ ಜನರ ಕೈಗೆ ಕೊಡುತ್ತಿದ್ದಾರೆ, ಇದರ ಬಗ್ಗೆ ಹೇಳಲಿ ಎಂದರು.

ಆರೆಸ್ಸೆಸ್ನವರು ಚಾಣಕ್ಯ ಯುನಿವರ್ಸಿಟಿ ಹೆಸರಲ್ಲಿ ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆ. ಎಲ್ಲ ಕಡೆ ಇಂತಹ ಸಂಸ್ಥೆಗಳನ್ನು ಮಾಡಿ ಸಾವಿರಾರು ಕೋಟಿ ದುಡ್ಡು ಸಂಗ್ರಹಿಸುತ್ತಾರೆ. ಇದರ ಬಗ್ಗೆ ಲೆಕ್ಕ ಕೊಡುತ್ತಾರೆಯೇ.. ನ್ಯಾಶನಲ್ ಹೆರಾಲ್ಡ್ ಪತ್ರಿಕೆ ಹೆಸರಲ್ಲಿ ರಾಹುಲ್, ಸೋನಿಯಾರನ್ನು ಇಡಿ ಕಚೇರಿಯಲ್ಲಿ ಇಡೀ ದಿನ ಕೂರಿಸಿ ಹಿಂಸೆ ಕೊಟ್ಟಿದ್ದಾರೆ. ಯಾವುದೋ ವಿಷಯ ಮುಂದಿಟ್ಟು ರಾಹುಲ್ ಸದಸ್ಯತ್ವ ರದ್ದುಪಡಿಸಿ, ಸೇಡಿನ ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ. ಪ್ರಹ್ಲಾದ ಜೋಷಿಯವರಲ್ಲಿ ಪ್ರಧಾನ ಮಂತ್ರಿ ಹೆಸರನ್ನಿಟ್ಟು ಹೇಗೆ ಹಣ ಸಂಗ್ರಹ ಮಾಡಿದ್ದಾರೆಂದು ಕೇಳಿ. ಜೋಷಿಯವರು ಸುಮ್ಮನೆ ತಿಳ್ಕೊಂಡು ಮಾತಾಡಲಿ, ಮಾಧ್ಯಮದವರು ನಮ್ಮನ್ನು ಕೇಳುತ್ತೀರಿ, ಅವರಿಗೂ ಕೇಳಿ ಉತ್ತರ ಪಡೆಯಿರಿ ಎಂದರು.

Karnataka Health Minister and district in-charge Dinesh Gundu Rao launched a sharp attack on Union Minister Prahlad Joshi, alleging that the BJP collected thousands of crores through electoral bonds and the PM CARES Fund in the name of the Prime Minister. Speaking in Mangaluru, Gundu Rao questioned how a private trust was allowed to raise funds using the Prime Minister’s name and demanded transparency on how the money was collected and spent.