ಬ್ರೇಕಿಂಗ್ ನ್ಯೂಸ್
05-11-25 10:19 pm Mangalore Correspondent ಕರಾವಳಿ
ಉಳ್ಳಾಲ, ನ.5 : ಕುರ್ನಾಡು ಗ್ರಾಮದ ಅಬೆಮಾರ್ ಎಂಬಲ್ಲಿ ವ್ಯವಸ್ಥಿತವಾದ ಸೂರಿಲ್ಲದೆ ಕುಸಿದು ಬೀಳಲು ಮುಂದಾಗಿದ್ದ ಹರಕಳು, ಮುರುಕಳು ಗುಡಿಸಲಿನಲ್ಲಿ ನಾಯಿ, ಬೆಕ್ಕಿನೊಂದಿಗೆ ವಾಸವಾಗಿದ್ದ ರುಕ್ಮಯ ಮತ್ತು ವಿಜಯ ಎಂಬ ಮಕ್ಕಳಿಲ್ಲದ ಹಿರಿಯ ದಂಪತಿಗೆ ಬಿಜೆಪಿ ಮುಖಂಡ ಹಾಗೂ ದಿ ಮೈಸೂರು ಇಲೆಕ್ಟ್ರಿಕಲ್ಸ್ (ಲಿ)ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರಲ್ಲಿ ನಿರ್ಮಿಸಿ ಕೊಡಲಿರುವ ಆರನೇ ನೂತನ ಮನೆ "ನಮೋ ಕುಟೀರ -6"ಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಲಾಯಿತು.
ನೂತನ ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿದ ಬಳಿಕ ಮಾತನಾಡಿದ ಸಂತೋಷ್ ಕುಮಾರ್ ರೈ ರುಕ್ಮಯ ಮತ್ತು ವಿಜಯ ದಂಪತಿ ಮಕ್ಕಳಿಲ್ಲದ ಕೊರಗಲ್ಲೇ ತಮ್ಮ ಜೀವನ ಕಳೆದಿದ್ದಾರೆ. ಅವರು ನೆಲೆಸಿದ್ದ ಮನೆಯೂ ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಸ್ಥಳೀಯ ಪಂಚಾಯತ್ ನವರೂ ಸುರಕ್ಷತೆಯ ದೃಷ್ಟಿಯಲ್ಲಿ ಹಿರಿಯ ದಂಪತಿಯನ್ನ ಮನೆಯಿಂದ ಸ್ಥಳಾಂತರವಾಗುವಂತೆ ನೋಟೀಸು ನೀಡಿದ್ದರು. ದಂಪತಿಯ ಅಸಹಾಯಕ ಸ್ಥಿತಿಯ ಬಗ್ಗೆ ಗ್ರಾಮದ ಮುಖ್ಯಸ್ಥರು ನನಗೆ ತಿಳಿಸಿದ್ದರು. ಕಳೆದ ಜುಲೈ 27 ರಂದು ಅಸೈಗೋಳಿಯ ಅಭಯಾಶ್ರಮದಲ್ಲಿ ನಡೆದಿದ್ದ ನನ್ನ ಹುಟ್ಟುಹಬ್ಬ ದಿನಾಚರಣೆಯಂದು ಸೋಮೇಶ್ವರ ಉಚ್ಚಿಲದ ಬೋವಿ ಸಮುದಾಯದ ಗುರಿಕಾರರು ಮತ್ತು ಕುಲಾಲ ಸಮಾಜದ ರುಕ್ಮಯ ದಂಪತಿಗೆ ಮನೆ ನಿರ್ಮಿಸಿ ಕೊಡುವುದಾಗಿ ವಾಗ್ದಾನ ನೀಡಿದ್ದೆ. ವಿಪರೀತ ಮಳೆಯಿದ್ದ ಕಾರಣ ಮನೆ ನಿರ್ಮಾಣದ ಕೆಲಸ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ರುಕ್ಮಯ ದಂಪತಿಗೆ ಮನೆ ನಿರ್ಮಿಸುವ ಭಾಗ್ಯ ಒದಗಿದ್ದು, ಫಲಾನುಭವಿಗಳ ಮುಖದ ನಗುವಿನಿಂದ ನನ್ನ ಮತ್ತು ಕುಟುಂಬಸ್ಥರ ಹೃದಯ ತುಂಬಿ ಬಂದಿದೆ.




ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಅಶಕ್ತರಿಗೆ ನಿರ್ಮಿಸುತ್ತಿರುವ ಆರನೇ ನಮೋ ಕುಟೀರದ ಯೋಜನೆ ಇದಾಗಿದೆ. ಐದು ಕುಟೀರಗಳ ಗೃಹಪ್ರವೇಶವು ಭಾರೀ ವಿಜೃಂಭಣೆಯಿಂದ ನಡೆದಿದ್ದು ಆರನೆಯ ಕುಟೀರದ ಉದ್ಘಾಟನೆಯೂ ಅದಕ್ಕಿಂತಲೂ ವಿಜೃಂಭಣೆಯಿಂದ ನೆರವೇರಲಿದೆ. ಆರನೇ ಯೋಜನೆಯಲ್ಲೂ ಮನೆ ನಿರ್ಮಾಣದಿಂದ ಹಿಡಿದು ಗೃಹಪ್ರವೇಶದ ಎಲ್ಲಾ ಖರ್ಚು ವೆಚ್ಚಗಳನ್ನ ಭರಿಸುವ ಶಕ್ತಿ ನನಗೆ ಒದಗಿಸಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ಕಾರ್ಯಕ್ಕೆ ನನ್ನ ಪತ್ನಿ, ಮಕ್ಕಳು ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದ್ದಾರೆ. ವಾಸ್ತು ಪ್ರಕಾರವಾಗಿಯೇ ಎಲ್ಲಾ ವ್ಯವಸ್ಥೆಯುಳ್ಳ ಸುಸಜ್ಜಿತ ತಾರಸಿ ಮನೆಯನ್ನ ಮೂರು ತಿಂಗಳೊಳಗಾಗಿ ನಿರ್ಮಿಸಿ ಕೊಡಲಾಗುವುದೆಂದರು.
ಮಾಜಿ ಪಂಚಾಯತ್ ರಾಜ್ ಇಲಾಖೆಯ ಓಂಬುಡ್ಸ್ ಮೆನ್ ಶೀನ ಶೆಟ್ಟಿ ಮಾತನಾಡಿ ನಿಜವಾಗಿಯೂ ಇದೊಂದು ದೇವತಾ ಕಾರ್ಯವಾಗಿದೆ. ಸಂತೋಷ್ ಕುಮಾರ್ ಬೋಳಿಯಾರ್ ಅವರು ಅಶಕ್ತ ಕುಟುಂಬಕ್ಕೆ ಭರವಸೆಯ ಬೆಳಕಾಗಿದ್ದಾರೆ. ಇಂತಹ ಮಾನವೀಯ ಕಾರ್ಯಗಳನ್ನ ನಡೆಸಲು ವಿಶಾಲ ಮನಸ್ಸು ಅಗತ್ಯ. ಸಮಾಜಕ್ಕೆ ಇದೊಂದು ಮಾದರಿ ಕಾರ್ಯವಾಗಿದೆ ಎಂದರು.
ವೇದಮೂರ್ತಿ ಭಾಸ್ಕರ ಭಟ್ ಪೌರೋಹಿತ್ಯದಲ್ಲಿ ಶಿಲಾನ್ಯಾಸ ನೆರವೇರಿತು. ಸಂತೋಷ್ ಬೋಳಿಯಾರ್ ಪತ್ನಿ ವೀಣಾ ರೈ, ಪುತ್ರಿ ಸ್ಪರ್ಶ ಎಸ್.ರೈ, ಪುತ್ರ ಸಮ್ಯಕ್ತ್ ರೈ ಬೋಳಿಯಾರ್ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ನಾಗೇಶ್ ಕುಂಪಲ, ತಾಲೂಕು ಕಾರ್ಯವಾಹ ಮನೋಹರ್ ಕುರ್ನಾಡು, ಸ್ಥಳದಾನಿ ದಮಯಂತಿ ಮೊದಲಾದವರು ಉಪಸ್ಥಿತರಿದ್ದರು.
In a heartwarming gesture, BJP leader and former chairman of Mysore Electricals Ltd., Santosh Kumar Rai Boliyar, laid the foundation stone for the sixth house under his ‘Namo Kutira’ initiative — providing a new home to an elderly childless couple living in dire conditions in Kurnadu village, Ullal.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
15-06-26 04:52 pm
HK News Staffer
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
15-06-26 09:21 pm
HK News Staffer
ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್ ಫಾರಂಗೆ ನುಗ್ಗಿ...
15-06-26 08:37 pm
ಕಾರವಾರದ ಕಡ್ಲೆ ಬೀಚ್ನಲ್ಲಿ ರೀಲ್ಸ್ ಮಾಡುಲು ಹೋಗಿ ಅ...
15-06-26 04:54 pm
ಸೋಲಾಪುರದಲ್ಲಿ ಭೀಕರ ದುರಂತ! ನಿಯಂತ್ರಣ ತಪ್ಪಿ ನಾಲೆಗ...
15-06-26 11:50 am
ಧರ್ಮಸ್ಥಳಕ್ಕೆ ತೆರಳಿದ್ದ ಬೆಂಗಳೂರಿನ ಮೂವರು ಯುವಕರು...
15-06-26 11:27 am