ಬ್ರೇಕಿಂಗ್ ನ್ಯೂಸ್
            
                        17-09-25 01:34 pm Mangalore Correspondent ಕರಾವಳಿ
            ಉಳ್ಳಾಲ, ಸೆ.17 : ಸಮುದ್ರ ಮಧ್ಯದಲ್ಲೇ ವಿರೋಧಿ ಪರಕೀಯರ ಸೈನ್ಯದ ಮೇಲೆ ಅಗ್ನಿ ಬಾಣಗಳ ಮಳೆ ಹರಿಸಿ ಗೆರಿಲ್ಲಾ ಯುದ್ಧದ ಮೂಲಕ ಪೋರ್ಚುಗೀಸರನ್ನ ಹಿಮ್ಮೆಟ್ಟಿಸಿದ ಚರಿತ್ರೆ ವೀರ ರಾಣಿ ಅಬ್ಬಕ್ಕಳದ್ದಾಗಿದೆ. ಸ್ವಾತಂತ್ರ್ಯದ ಕಲ್ಪನೆಯು ಗರಿಮೂಡದ ಹೊತ್ತಿನಲ್ಲಿ ರಾಷ್ಟ್ರೀಯತೆ ಎಂದರೆ ಏನೆನ್ನುವ ವ್ಯಾಖ್ಯಾನ ಇಲ್ಲದ ಸಮಯದಲ್ಲಿ ಬಂಗರಸರ ಅರಮನೆ ತೊರೆದು ದೇಶದ ಸ್ವಾತಂತ್ರ್ಯಕ್ಕಾಗಿ ಪೋರ್ಚುಗೀಸರ ವಿರುದ್ಧ ಎದೆಗಾರಿಕೆಯಿಂದ ಹೋರಾಡಿದ ವೀರ ವನಿತೆ ರಾಣಿ ಅಬ್ಬಕ್ಕಳಾಗಿದ್ದಾಳೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಮುಖ್ಯ ವಕ್ತಾರ ಕೇಶವ ಬಂಗೇರ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ವತಿಯಿಂದ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕಳ 500ನೇ ಜಯಂತಿ ಪ್ರಯುಕ್ತ ರಾಜ್ಯದಾದ್ಯಂತ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕೋಟೆಕಾರು ಬೀರಿಯ ಗಣೇಶ ಮಂದಿರದ ಬಳಿ ಮಂಗಳವಾರ ರಾತ್ರಿ ನಡೆದ ಅಭಯರಾಣಿ -ವೀರನಾರಿ ಅಬ್ಬಕ್ಕಳ 500ನೇ ಜಯಂತಿಯ ರಥಯಾತ್ರೆ ಸಮಾರೋಪ ಸಮಾರಂಭವನ್ನುದ್ಧೇಶಿಸಿ ಅವರು ಮಾತನಾಡಿದರು. ತನ್ನ ಗಂಡನೇ ಪರಕೀಯರ ಜತೆ ಸೇರಿ ತಾಯಿ ನೆಲಕ್ಕೆ ದ್ರೋಹ ಬಗೆದಾಗ ಪತಿಯ ವಿರುದ್ಧವೇ ಅಬ್ಬಕ್ಕಳು ಕುಪಿತಗೊಂಡಿದ್ದಳು. ಈ ನೆಲದ ನೈಜ ಪರಂಪರೆಯನ್ನು ಯುವ ಸಮುದಾಯವು ಅರ್ಥ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಎಬಿವಿಪಿ ಕಳೆದ ಎಪ್ಪತ್ತಾರು ವರ್ಷಗಳಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ, ಈ ಮಣ್ಣಿನ ಅಸ್ಮಿತೆಗಾಗಿ ಬಲಿದಾನ ಮಾಡಿದ ಹುತಾತ್ಮರನ್ನ ಸ್ಮರಿಸುತ್ತಾ ಬಂದಿದೆ ಎಂದರು.





ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್ ಮಾತನಾಡಿ ವಾಣಿಜ್ಯ ವ್ಯವಹಾರದ ದುರುದ್ದೇಶದಿಂದ ಉಳ್ಳಾಲದಿಂದ ಗೋವಾದ ತನಕದ ಇಡೀ ಕರಾವಳಿ ಪ್ರದೇಶವನ್ನ ವಶಪಡಿಸುವ ದೊಡ್ಡ ಇರಾದೆ ಪೋರ್ಚುಗೀಸರದ್ದಾಗಿತ್ತು. ಆ ಕಾಲದಲ್ಲಿ ಪೋರ್ಚುಗೀಸರನ್ನ ಹಿಮ್ಮೆಟ್ಟಿಸಿದ ಅಬ್ಬಕ್ಕ ಕೇವಲ ಉಳ್ಳಾಲವನ್ನ ಉಳಿಸಿದ್ದು ಮಾತ್ರವಲ್ಲ, ಬದಲಾಗಿ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನ ಉಳಿಸುವ ಮಹತ್ಕಾರ್ಯ ಮಾಡಿದ್ದಾರೆ. ಅಬ್ಬಕ್ಕ ಇಂದು ಉಳ್ಳಾಲಕ್ಕೆ ಮಾತ್ರ ರಾಣಿಯಾಗಿ ಸೀಮಿತವಾಗಿಲ್ಲ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ, ಸಂಘದ ಶಾಖೆಗಳಲ್ಲಿ ಅಬ್ಬಕ್ಕಳ ಕತೆ ಹೇಳುವ ವ್ಯವಸ್ಥೆಯಾಗಿದೆ. ಅಬ್ಬಕ್ಕಳ ಜೀವನ ಚರಿತ್ರೆಯು ಎಲ್ಲರಿಗೂ ಮನಮುಟ್ಟುವಂತೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಎಬಿವಿಪಿಯನ್ನು ಅಭಿನಂದಿಸಬೇಕಿದೆ. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘವೂ ಅಬ್ಬಕ್ಕಳ ಐನೂರನೇ ಜಯಂತಿ ಪ್ರಯುಕ್ತ ರಾಜ್ಯದಾದ್ಯಂತ ಐನೂರು ವೈವಿಧ್ಯಮಯ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು ಆ ಮೂಲಕವೂ ಅನೇಕ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಅಬ್ಬಕ್ಕಳ ಇತಿಹಾಸವನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದರು.
ಸಮಾರೋಪ ಸಮಾರಂಭಕ್ಕೂ ಮುನ್ನ ಮಾಡೂರು ಅಯ್ಯಪ್ಪ ಮಂದಿರದಿಂದ ಬೀರಿಯ ಗಣೇಶ ಮಂದಿರದ ವರೆಗೆ ಎಬಿವಿಪಿ ನೇತೃತ್ವದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಬೀರಿಗೆ ಬಂದು ತಲುಪಿದ ರಥಯಾತ್ರೆಯನ್ನು ಸ್ವಾಗತಿಸಲಾಯಿತು. ರಥದಲ್ಲಿದ್ದ ಅಬ್ಬಕ್ಕ ಪುತ್ಥಳಿಗೆ ಅತಿಥಿಗಳು ಮಾಲಾರ್ಪಣೆ ನಡೆಸಿ ಗೌರವ ಸಮರ್ಪಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷರಾದ ಡಾ.ರವಿ ಮಂಡ್ಯ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಧರ್ಮ ರಕ್ಷಣ ಮೊಗವೀರ ವೇದಿಕೆಯ ಅಧ್ಯಕ್ಷರಾದ ಮನೋಜ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು
            
            
            In a powerful tribute to one of India’s earliest freedom fighters, the Akhil Bharatiya Vidyarthi Parishad (ABVP) concluded its statewide Rath Yatra marking the 500th birth anniversary of the valiant Queen Abbakka in Ullal. The event featured a grand torch procession (panjina meravanige) from Madur Ayyappa Temple to Beeri Ganesh Mandir, symbolizing the indomitable spirit of the legendary warrior queen.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm