Yaticorp, Mangalore, AI: ಯತಿಕಾರ್ಪ್ ಸಂಸ್ಥೆಯಿಂದ 59 ಮಂದಿ ಬಿಸಿನೆಸ್ ಡೆವಲಪರ್ ಹುದ್ದೆಗೆ ನೇಮಕಾತಿ ; ಮಂಗಳೂರಿನ ಐಟಿ ಸಂಸ್ಥೆಯಿಂದ ಎಐ ತಂತ್ರಜ್ಞಾನದಲ್ಲಿ ಕ್ರಾಂತಿ, ಶಾಸಕ ವೇದವ್ಯಾಸ ಕಾಮತ್ ಮೆಚ್ಚುಗೆ

15-09-25 08:28 pm       Mangalore Correspondent   ಕರಾವಳಿ

ಎಐ ಟೆಕ್ನಾಲಜಿಯನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಮಹತ್ತರ ಅಭಿಯಾನ ಕೈಗೊಂಡಿರುವ ಮಂಗಳೂರಿನ ಯತಿಕಾರ್ಪ್ ಐಟಿ ಸೊಲ್ಯುಶನ್ ಸಂಸ್ಥೆ ಬಿಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್ ಹುದ್ದೆಗಳನ್ನು ಭರ್ತಿಗೊಳಿಸಿದ್ದು ಪಿಲಿಕುಳದ ಭಾರತ್ ಸ್ಕೌಟ್ಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು 59 ಮಂದಿಗೆ ನೇಮಕಾತಿ ಪತ್ರ ವಿತರಣೆ ಮಾಡಿದ್ದಾರೆ.

ಮಂಗಳೂರು, ಸೆ.15 : ಎಐ ಟೆಕ್ನಾಲಜಿಯನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಮಹತ್ತರ ಅಭಿಯಾನ ಕೈಗೊಂಡಿರುವ ಮಂಗಳೂರಿನ ಯತಿಕಾರ್ಪ್ ಐಟಿ ಸೊಲ್ಯುಶನ್ ಸಂಸ್ಥೆ ಬಿಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್ ಹುದ್ದೆಗಳನ್ನು ಭರ್ತಿಗೊಳಿಸಿದ್ದು ಪಿಲಿಕುಳದ ಭಾರತ್ ಸ್ಕೌಟ್ಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು 59 ಮಂದಿಗೆ ನೇಮಕಾತಿ ಪತ್ರ ವಿತರಣೆ ಮಾಡಿದ್ದಾರೆ. 

40 ದಿನಗಳ ಸ್ಟೈಪೆಂಡ್ ಮತ್ತು ತರಬೇತಿ ಸಹಿತ ವರ್ಷಕ್ಕೆ 3.5 ಲಕ್ಷ ವೇತನ ಪ್ಯಾಕೇಜ್ ಜೊತೆಗೆ ಯತಿಕಾರ್ಪ್ ಸಂಸ್ಥೆಯು ನೂರಕ್ಕೂ ಹೆಚ್ಚು ಮಂದಿಯನ್ನು ಬಿಸಿನೆಸ್ ಡೆವಲಪರ್ ಆಗಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಸಾವಿರಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಅರ್ಜಿ‌ ಸಲ್ಲಿಸಿದ್ದು ಅದರಲ್ಲಿ ಆನ್ಲೈನ್ ಇಂಟರ್ವ್ಯೂ, ಒಂದು ವಾರದ ತರಬೇತಿ ಬಳಿಕ ನೂರು ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಇದೀಗ 59 ಮಂದಿಯನ್ನು ಉದ್ಯೋಗಕ್ಕೆ ನೇಮಕಾತಿ ಮಾಡಿದ್ದು ಮುಂದಿನ ಎರಡು ತಿಂಗಳ ತರಬೇತಿ ಬಳಿಕ ಪೂರ್ಣಾವಧಿಗೆ ಕಚೇರಿಯಲ್ಲಿದ್ದು ಕೆಲಸ ಮಾಡಬೇಕಾಗುತ್ತದೆ. ಒಂದು ವಾರದ ತರಬೇತಿಯ ಬಳಿಕ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ 59 ಮಂದಿಗೆ ಉದ್ಯೋಗದ ಜಾಬ್ ಕಾರ್ಡ್ ನೀಡಲಾಯಿತು. 

ಇದೇ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಎಐ ಟೆಕ್ನಾಲಜಿಯನ್ನು ಪ್ರಚಾರ
ಪಡಿಸುತ್ತಿರುವ ಸಂಸ್ಥೆಯ ಸಿಇಓ ಯತೀಶ್ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅಲ್ಲದೆ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ 59 ಮಂದಿಗೆ ಉದ್ಯೋಗ ಕೊಡುವುದು ಸಣ್ಣ ವಿಷಯವಲ್ಲ. ಯತೀಶ್ ಅವರು ದೊಡ್ಡ ಸಾಧನೆ ಮಾಡಿದ್ದಾರೆ, ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಶ್ಲಾಘಿಸಿದರು. ಎಐ ತಂತ್ರಜ್ಞಾನ ಕಲಿಸುವ ವಿಚಾರ ಎಂದರಿತು 200 ಮಂದಿಗೆ ನನ್ನ ಲೆಕ್ಕದಲ್ಲಿ ಇರಲಿ ಎಂದು ಹೇಳಿದ್ದೆ. ದೇಶ- ವಿದೇಶದಲ್ಲಿ ಇನ್ನಾವುದೇ ಐಟಿ ಕಂಪನಿ ಮಾಡದಿರುವುದನ್ನು ನಮ್ಮ ಮಂಗಳೂರಿನ ಕಂಪನಿ ಮಾಡಿದೆ ಎನ್ನುವುದು ನಮಗೆಲ್ಲ ಹೆಮ್ಮೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸ್ವಸ್ತಿಕ ಸ್ಕೂಲ್ ಎಂಡಿ ರಾಘವೇಂದ್ರ ಹೊಳ್ಳ, ಹೊಸತಾಗಿ ಉದ್ಯೋಗಕ್ಕೆ ಆಯ್ಕೆಯಾದವರು ತಮ್ಮಲ್ಲಿ ವಿಷನ್ ಇಟ್ಟುಕೊಳ್ಳಬೇಕು. ನೀವು ನಿಮಗಾಗಿ ಕೆಲಸ ಮಾಡುತ್ತಿದ್ದೀರೆಂಬ ಭಾವನೆಯಿಂದ ಕೆಲಸವನ್ನು ಎಂಜಾಯ್ ಮಾಡಿ. ಆಮೂಲಕ ನೀವು ಎತ್ತರಕ್ಕೇರಬಲ್ಲಿರಿ. ಎಐ ಕಾರ್ಡ್ ಮೂಲಕ ಸಮಾಜಕ್ಕೆ ಶಿಕ್ಷಣ ಕೊಟ್ಟು ದೇಶ ಕಟ್ಟುವ ಕೆಲಸ ಮಾಡುತ್ತೀರೆಂಬ ಧನ್ಯತೆ ನಿಮಗಿರಲಿ ಎಂದು ಹಾರೈಸಿದರು. 

ಕಾರ್ಯಕ್ರಮವನ್ನು ಅಲೋಶಿಯಸ್ ಡೀಮ್ಡ್ ಯುನಿವರ್ಸಿಟಿ ಉಪ ಕುಲಪತಿ ರೆ.ಡಾ.ಪ್ರವೀಣ್ ಮಾರ್ಟಿಸ್ ಉದ್ಘಾಟಿಸಿ, ಎಐ ಕಾರ್ಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸೆಕ್ರೆಟರಿ ಮಿಥುನ್ ರೈ, ವಿಜಯ ಕರ್ನಾಟಕ ಪತ್ರಿಕೆಯ ಮಾರ್ಕೆಟಿಂಗ್ ಹೆಡ್ ರಾಮಕೃಷ್ಣ, ನಿರೂಪಕಿ ಸೌಜನ್ಯಾ ಹೆಗಡೆ ಇದ್ದರು. ಕಾರ್ಯಕ್ರಮದಲ್ಲಿ ಯತಿಕಾರ್ಪ್ ಸಂಸ್ಥೆಯ ಸಿಇಓ ಯತೀಶ್ ಅವರ ತಂದೆ, ತಾಯಿಯನ್ನು ಗೌರವಿಸಲಾಯಿತು. ಸಿಇಒ ಯತೀಶ್ ಸ್ವಾಗತಿಸಿ, ಕಂಪನಿಯ ಜಿಎಂ ಕೃಪಾ ವಂದಿಸಿದರು.

In a significant move to make artificial intelligence (AI) more accessible to the general public, Mangaluru-based IT firm Yaticorp IT Solutions has recruited 59 Business Development Executives. The appointment letters were distributed during a special ceremony held at the Bharat Scouts Bhavan, Pilikula, by MLA Vedavyas Kamath.