ಬ್ರೇಕಿಂಗ್ ನ್ಯೂಸ್
            
                        14-09-25 10:34 pm Mangalore Correspondent ಕರಾವಳಿ
            ಮಂಗಳೂರು, ಸೆ.14 : ಮಂಗಳೂರಿನ ರಸ್ತೆ ಅವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳು, ಜನಸಾಮಾನ್ಯರು ಕೂಡ ಬೀದಿಗೆ ಇಳಿದಿದ್ದಾರೆ. ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ವಿದ್ಯಾರ್ಥಿಗಳು ಹಾಗೂ ಯುವಜನರು ರಾಜಕೀಯ, ಮತ ಭೇದ ಬದಿಗಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ್ಲ. ನಾವು ತೆರಿಗೆ ಕಟ್ಟುತ್ತೇವೆ, ಒಳ್ಳೆಯ ರಸ್ತೆ ನಿರ್ಮಿಸಿಕೊಡುವುದು ಸರ್ಕಾರದ ಕರ್ತವ್ಯ. ನಾವು ಜನಪ್ರತಿನಿಧಿಗಳನ್ನು ಟ್ರೋಲ್ ಮಾಡುವ ಬದಲು ಉತ್ತಮ ರಸ್ತೆಗಾಗಿ ಪ್ರಶ್ನೆ ಮಾಡಬೇಕಿದೆ. ಯಾವುದೇ ರಸ್ತೆಯಲ್ಲಿ ಅಪಘಾತಕ್ಕೆ ಕಾರಣವಾಗಬಲ್ಲ ಗುಂಡಿ ಬಿದ್ದರೆ 24 ಗಂಟೆಯೊಳಗೆ ಸರಿಪಡಿಸಬೇಕು ಎನ್ನುವ ನಿಯಮ ಇದೆ. ಅಷ್ಟು ಅನಾಹುತ ಆಗದ ಹೊಂಡಗಳಾದಲ್ಲಿ 48 ಗಂಟೆಯೊಳಗೆ ಸರಿಪಡಿಸಬೇಕು ಎನ್ನುವುದನ್ನು ನಾವು ಪುಸ್ತಕದಲ್ಲಿ ಓದಿದ್ದೇವೆ. ಆದರೆ ಈ ನಿಯಮ ಅನುಷ್ಠಾನ ಮಾತ್ರ ಆಗಲ್ಲ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಬಿದ್ದರೆ ಅದನ್ನು ಕೂಡಲೇ ಮುಚ್ಚುವುದು ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರನ ಕರ್ತವ್ಯ. ಆದರೆ ನಮ್ಮಲ್ಲಿ ಯಾಕೆ ಈ ಗುಂಡಿ ಮುಚ್ಚುವ ಕೆಲಸ ಆಗುತ್ತಿಲ್ಲ ಎಂದು ನಮ್ಮ ಜನಪ್ರತಿನಿಧಿಗಳನ್ನು ಕೇಳಬೇಕು. ಒಳ್ಳೆಯ ರಸ್ತೆ ಇದ್ದರೆ ಮಾತ್ರ ಟೋಲ್ ವಸೂಲಿ ಮಾಡಬೇಕು, ಇಲ್ಲದಿದ್ದರೆ ಟೋಲ್ ಕಲೆಕ್ಷನ್ ಮಾಡುವ ಅಧಿಕಾರ ಇಲ್ಲ. ಹಾಗೆಂದು ಕಾನೂನೇ ಇದೆ. ನಾವು ತೆರಿಗೆ ಕಟ್ಟುತ್ತೇವೆ, ರಸ್ತೆ ತೆರಿಗೆ ಕಟ್ಟಿ ವಾಹನ ಸವಾರಿ ಮಾಡುತ್ತೇವೆ. ಆದರೆ ರಸ್ತೆಯೇ ಸರಿಯಾಗಿಲ್ಲ, ಹೊಂಡ ಬಿದ್ದ ರಸ್ತೆಯಲ್ಲಿ ಜನ ಬಿದ್ದು ಸಾಯುತ್ತಾರಂದ್ರೆ ನಾವು ಯಾವ ಸ್ಥಿತಿಯಲ್ಲಿದ್ದೇವೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಕಾಲ ಕಾಲಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯ ಸ್ಥಿತಿಯನ್ನು ಪರಿಶೀಲನೆ ಮಾಡಬೇಕು. ಆದರೆ ಇಲ್ಲಿ ಮಾತ್ರ ಆ ಕೆಲಸ ಆಗುತ್ತಿಲ್ಲ. ಇವರು ಟೋಲ್ ವಸೂಲಿ ಮಾಡುತ್ತಾರೆ, ಆ ಹಣ ಎಲ್ಲಿ ಹೋಗುತ್ತದೆ ಎಂಬುದನ್ನು ತಿಳಿಸಬೇಕು. ನಮ್ಮ ಹಣ, ನಮ್ಮ ರಸ್ತೆ. ಇಲ್ಲಿ ನಾವು ಯಾವುದೇ ರಾಜಕೀಯ ಪಕ್ಷದ ವಿರುದ್ಧ ಆಗಲೀ, ಮುಖಂಡರ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ಜನರ ಪರವಾಗಿ, ಜನಸಾಮಾನ್ಯರ ಜೀವದ ಪರವಾಗಿ ಧ್ವನಿ ಎತ್ತಿದ್ದೇವೆ. ನಮಗೆ ಉತ್ತಮ ರಸ್ತೆ ಬೇಕು, ಅದಕ್ಕಾಗಿ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ನಾವು ಪ್ರಶ್ನೆ ಮಾಡಬೇಕಾಗಿದೆ. ಪ್ರಶ್ನೆ ಮಾಡೋದು ನಮ್ಮ ಹಕ್ಕು. ನಾವು ಅವರನ್ನು ಟ್ರೋಲ್ ಮಾಡಿ ಪ್ರಯೋಜನ ಇಲ್ಲ. ನಾವು ಕೇವಲ ಹೆದ್ದಾರಿ ಬಗ್ಗೆ ಮಾತ್ರ ಪ್ರಶ್ನಿಸೋದಲ್ಲ. ಮಂಗಳೂರು ನಗರದಲ್ಲಿಯೂ ಗುಂಡಿ ಬಿದ್ದ ರಸ್ತೆಗಳೇ ಇದೆ. ವಿಚಿತ್ರ ಅಂದರೆ ಇಲ್ಲಿ ಒಂದು ಕಡೆ ಕಾಂಕ್ರೀಟ್ ಮಾಡಿದರೆ, ಇನ್ನೊಂದು ಕಡೆ ಕಾಂಕ್ರೀಟ್ ರಸ್ತೆಯನ್ನೇ ಅಗೆಯುತ್ತಾರೆ. ಅಲ್ಲಿ ಗುಂಡಿಯನ್ನು ಹಾಗೇ ಬಿಟ್ಟು ಹೋಗುತ್ತಾರೆ. ಕಾಂಕ್ರೀಟ್ ಮಾಡಿದ ಬಳಿಕ ಪೈಪ್ ಹಾಕಲೆಂದು ಅಗೆಯುತ್ತಾರೆ, ಇದರಿಂದಾಗಿ ಮಂಗಳೂರಿನಲ್ಲಿ ಸಮಸ್ಯೆ ಆಗಿರೋದು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕರು ಅಭಿಪ್ರಾಯ ಹೇಳಿದರು. 50ಕ್ಕು ಹೆಚ್ಚು ಬಿಳಿ ಅಂಗಿ, ಕಪ್ಪು ಪ್ಯಾಂಟ್ ಧರಿಸಿ ವಿದ್ಯಾರ್ಥಿಗಳು ಸೇರಿದ್ದು ಏಕರೂಪದಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ.
            
            
            Angered by the worsening condition of city roads, students and members of the public took to the streets of Mangaluru today, staging a silent protest in front of the Mini Vidhana Soudha. Wearing white shirts and black trousers, over 50 students stood in unison, demanding safe and motorable roads.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm