ಬ್ರೇಕಿಂಗ್ ನ್ಯೂಸ್
12-09-25 05:34 pm Mangalore Correspondent ಕರಾವಳಿ
ಮಂಗಳೂರು, ಸೆ.12 : ನಗರ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪುವುದು, ಅತಿ ವೇಗದಿಂದ ದ್ವಿಚಕ್ರ ವಾಹನ ಸವಾರರು ಸಾವು- ನೋವು ಅನುಭವಿಸುತ್ತಿರುವುದು ಹೆಚ್ಚುತ್ತಿದೆ. ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಜನವರಿಯಿಂದ ಸೆ.9ರ ವರೆಗೆ 122 ಮಂದಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರೇ ಈ ರೀತಿ ಸಾವನ್ನಪ್ಪಿದವರಲ್ಲಿ ಹೆಚ್ಚು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಎಲ್ಲೆಂದರಲ್ಲಿ ರಸ್ತೆ ದಾಟುವುದು ಮತ್ತು ಅತಿ ವೇಗದಿಂದ ದ್ವಿಚಕ್ರ ವಾಹನಗಳನ್ನು ಚಲಾಯಿಸುವುದರಿಂದ ಅಪಘಾತಕ್ಕೀಡಾಗಿ ಸಾವು-ನೋವಿಗೆ ಕಾರಣವಾಗುತ್ತಿದೆ. 2025ರ ಜನವರಿಯಿಂದ ಸೆ.9ರ ವರೆಗಿನ ಇಲಾಖೆಯ ಮಾಹಿತಿಯಂತೆ, ಮಂಗಳೂರಿನಲ್ಲಿ ಒಟ್ಟು 702 ಅಪಘಾತಗಳಾಗಿದ್ದು, 122 ಮಂದಿ ಸಾವು ಕಂಡಿದ್ದಾರೆ. 815 ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ 44 ಪಾದಚಾರಿಗಳು ಹಾಗೂ 63 ದ್ವಿಚಕ್ರ ವಾಹನ ಸವಾರರಿದ್ದಾರೆ.
ಜನವರಿ ತಿಂಗಳಲ್ಲಿ 100 ಅಪಘಾತಗಳಾಗಿದ್ದರೆ, 18 ಗಂಭೀರ ಪ್ರಕರಣಗಳು. 18 ಮಂದಿ ಸಾವು ಕಂಡಿದ್ದು 115 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 6 ಪಾದಚಾರಿಗಳು, 11 ದ್ವಿಚಕ್ರ ವಾಹನ ಸವಾರರು ಇದ್ದಾರೆ. ಫೆಬ್ರವರಿಯಲ್ಲಿ 81 ಅಪಘಾತಗಳಾಗಿದ್ದು, 15 ಸಾವು, 103 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 11 ಪಾದಚಾರಿಗಳು ಹಾಗೂ 6 ದ್ವಿಚಕ್ರ ವಾಹನ ಸವಾರರು.
ಮಾರ್ಚ್ ತಿಂಗಳಲ್ಲಿ 80 ಅಪಘಾತಗಳಾಗಿದ್ದು, 12 ಸಾವು, 93 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 3 ಪಾದಚಾರಿ, 8 ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ. ಏಪ್ರಿಲ್ ತಿಂಗಳಲ್ಲಿ 112 ಅಪಘಾತಗಳಾಗಿದ್ದು, 21 ಮಂದಿ ಸಾವು ಕಂಡಿದ್ದಾರೆ. 122 ಮಂದಿಗೆ ಗಾಯಗಳಾಗಿವೆ. ಮೃತರಲ್ಲಿ 5 ಪಾದಚಾರಿ, 11 ದ್ವಿಚಕ್ರ ವಾಹನ ಸವಾರರಿದ್ದಾರೆ. ಮೇ ತಿಂಗಳಲ್ಲಿ 77 ಅಪಘಾತಗಳಾಗಿದ್ದು, 14 ಸಾವು, 93 ಮಂದಿಗೆ ಗಾಯವಾಗಿದೆ. ಐವರು ಪಾದಚಾರಿ, 6 ಮಂದಿ ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ.
ಜೂನ್ ತಿಂಗಳಲ್ಲಿ 84 ಅಪಘಾತ ಘಟನೆಗಳಾಗಿದ್ದು, 13 ಸಾವು, 102 ಮಂದಿ ಗಾಯಗೊಂಡಿದ್ದಾರೆ. 3 ಪಾದಚಾರಿ, ಏಳು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ. ಜುಲೈ ತಿಂಗಳಲ್ಲಿ 65 ಅಪಘಾತ ಪ್ರಕರಣಗಳಾಗಿದ್ದು, 8 ಸಾವು, 94 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಮೂವರು ಪಾದಚಾರಿ, ಮೂವರು ದ್ವಿಚಕ್ರ ವಾಹನ ಸವಾರರಿದ್ದಾರೆ. ಆಗಸ್ಟ್ ತಿಂಗಳಲ್ಲಿ 79 ಅಪಘಾತಗಳಾಗಿದ್ದು, 18 ಮಂದಿ ಸಾವನ್ನಪ್ಪಿದ್ದರೆ, 71 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 6 ಪಾದಚಾರಿ, 10 ದ್ವಿಚಕ್ರ ವಾಹನ ಸವಾರರು.
ಹಾಲಿ ಸೆಪ್ಟಂಬರ್ ತಿಂಗಳ 9ರ ವರೆಗೆ ಮಂಗಳೂರು – ಮೂಲ್ಕಿ – ಮೂಡುಬಿದ್ರೆ ವ್ಯಾಪ್ತಿಯ ಕಮಿಷನರೇಟಿನಲ್ಲಿ ಒಟ್ಟು 24 ಅಪಘಾತ ಘಟನೆಗಳಾಗಿದ್ದು, ಮೂವರು ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಪಾದಚಾರಿ, ಒಬ್ಬ ದ್ವಿಚಕ್ರ ವಾಹನ ಸವಾರ ಇದ್ದಾರೆ.
ಎಂಟು ತಿಂಗಳಲ್ಲಿ 44 ಮಂದಿ ಪಾದಚಾರಿಗಳು ಸಾವನ್ನಪ್ಪಿರುವುದು ಸಣ್ಣ ವಿಷಯ ಅಲ್ಲ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯ ಎಲ್ಲೆಂದರಲ್ಲಿ ವಾಹನಗಳನ್ನು ನೋಡದೆ ರಸ್ತೆ ದಾಟುವುದರಿಂದಲೇ ಈ ಸಮಸ್ಯೆಯಾಗಿದೆ. ನಾವು ಪ್ರತಿ ವರ್ಷ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ, ಆದರೂ ಸಾರ್ವಜನಿಕರು ರಸ್ತೆ ಸಂಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಂಗಳೂರು ನಗರ ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಹೇಳುತ್ತಾರೆ.
ಹೆಚ್ಚಿನ ಅಪಘಾತಗಳು ನಿರ್ಲಕ್ಷ್ಯ ಮತ್ತು ಅತಿ ವೇಗದಿಂದಲೇ ನಡೆಯುವಂಥದ್ದು. ಬೈಕ್ ಸವಾರರು ಅತಿ ವೇಗದಿಂದಾಗಿ ಅಪಘಾತಕ್ಕೀಡಾಗುತ್ತಿದ್ದರೆ, ಕೆಲವು ಬಸ್, ಲಾರಿ, ಕಾರುಗಳ ಧಾವಂತದ ಚಾಲನೆಯಿಂದಾಗಿ ಬೇರೆ ಸಣ್ಣ ವಾಹನಗಳಿಗೆ ಡಿಕ್ಕಿಪಡಿಸಿ ಜೀವ ಹಾನಿ ಸಂಭವಿಸಿದೆ. ಬಹುತೇಕ ಅವಘಡಗಳಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಜನರು ಪಾಲಿಸದಿರುವುದೇ ಕಾರಣ ಎನ್ನುವುದು ಪೊಲೀಸರ ಅಭಿಪ್ರಾಯ.
Road accidents continue to claim lives at an alarming rate in Mangaluru, with pedestrians and two-wheeler riders being the worst affected. According to police data, from January 2025 to September 9, as many as 122 people lost their lives in road mishaps within the Mangaluru Police Commissionerate limits, while 815 others sustained injuries.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 07:43 pm
Mangalore Correspondent
Mangalore Road Accident, Pothole, Survery: ರಸ...
12-09-25 05:34 pm
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm