ಬ್ರೇಕಿಂಗ್ ನ್ಯೂಸ್
25-12-20 11:07 am Mangalore Correspondent ಕರಾವಳಿ
ಮಂಗಳೂರು, ಡಿ.25: ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುವ ವಾಹನಗಳನ್ನು ಪೊಲೀಸರು ಟೋಯಿಂಗ್ ಮಾಡಿಕೊಂಡು ಹೋಗುವುದು, ದಂಡ ಕಟ್ಟಿಸುವುದು, ಚೌಕಾಸಿ ಮಾಡಿ ಬಿಡುವುದು ಹೀಗೆಲ್ಲ ನಡೆದುಬಂದಿದೆ. ಆದರೆ, ಇಲ್ಲೊಂದು ಪೊಲೀಸರ ತಂಡ ಮಗು ಮಲಗಿದ್ದಾಗಲೇ ಕಾರನ್ನು ಟೋಯಿಂಗ್ ವಾಹನದಲ್ಲಿ ಎತ್ತಿಕೊಂಡು ಹೋಗಿ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಮೂಡುಬಿದ್ರೆಯ ಮಿಜಾರಿನ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಮಂಗಳೂರಿಗೆ ಶಾಪಿಂಗ್ ಬಂದಿದ್ದರು. ಐದು ವರ್ಷದ ಮಗು ಮಲಗಿದ್ದಕ್ಕಾಗಿ ಆ ಮಗುವನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದರು. ಕಾರಿನಲ್ಲಿ ಡ್ರೈವರ್ ಕೂಡ ಇದ್ದರು. ಆದರೆ, ಕಾರಿನ ಡ್ರೈವರ್ ಮಹಿಳೆಯ ಮೊಬೈಲ್ ಕಾರಿನಲ್ಲಿ ಉಳಿದಿರುವುದನ್ನು ಗಮನಿಸಿ, ಅದನ್ನು ಕೊಟ್ಟು ಬರಲು ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿ ಮಾಲ್ ನತ್ತ ತೆರಳಿದ್ದರು. ಇದೇ ವೇಳೆಗೆ, ಟೋಯಿಂಗ್ ವಾಹನ ಬಂದಿದ್ದು ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರನ್ನು ತೆರವು ಮಾಡಲು ಸೂಚನೆ ನೀಡಿದ್ದಾರೆ. ಒಂದಷ್ಟು ಹೊತ್ತು ಅಲ್ಲಿ ನಿಂತ ಟೋಯಿಂಗ್ ವಾಹನದವರು, ಕಾರನ್ನು ಎತ್ತಿ ಟೋಯಿಂಗ್ ಮಾಡಿಕೊಂಡು ಹೋಗಿದ್ದಾರೆ.
ಚಾಲಕ ಮರಳಿ ಬಂದಾಗ ಸ್ಥಳದಲ್ಲಿ ಕಾರು ಇರಲಿಲ್ಲ. ಮಗು ಮತ್ತು ಕಾರು ನಾಪತ್ತೆಯಾಗಿದ್ದರಿಂದ ಮಹಿಳೆ ಗಾಬರಿಗೊಂಡು ಹುಡುಕಾಟ ನಡೆಸಿದರು. ಅಲ್ಲೇ ಇದ್ದ ಅಂಗಡಿಯವರಲ್ಲಿ ಕೇಳಿದಾಗ, ಟೋಯಿಂಗ್ ವಾಹನದ ಕಿತಾಪತಿ ವಿಚಾರ ತಿಳಿದುಬಂತು. ಘಟನೆ ನಗರದ ಕದ್ರಿ ಬಳಿ ನಡೆದಿದ್ದು ಅಲ್ಲಿನ ಸ್ಥಳೀಯರ ಸೂಚನೆಯಂತೆ ಕೂಡಲೇ ಮಹಿಳೆ ಮತ್ತು ಚಾಲಕ ಕದ್ರಿ ಠಾಣೆಗೆ ತೆರಳಿದ್ರು. ಠಾಣೆಯ ಪೊಲೀಸರಲ್ಲಿ ಮಗು ಮತ್ತು ಕಾರಿನ ಬಗ್ಗೆ ಹೇಳಿದಾಗ ಅವರೂ ಗಾಬರಿಗೊಂಡಿದ್ದಾರೆ. ಕಾರನ್ನು ಅಲ್ಲಿಯೇ ಹೊರಭಾಗದಲ್ಲಿ ಪಾರ್ಕ್ ಮಾಡಲಾಗಿತ್ತು. ಕಾರಿನ ಒಳಗೆ ಗಮನಿಸಿದಾಗ, ಮಗು ಕಾರಿನ ಹಿಂಬದಿಯಲ್ಲಿ ಹಾಗೇ ನಿದ್ರಿಸಿದ್ದು ಕಂಡುಬಂತು.
ಬಳಿಕ ಮಹಿಳೆ ಮತ್ತು ಚಾಲಕ ಅಲ್ಲಿನ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಿನಲ್ಲಿ ಮಗು ಇರುವುದು ನಿಮ್ಮ ಕಣ್ಣಿಗೆ ಕಂಡಿಲ್ಲವೇ? ಅಷ್ಟು ಬೇಗ ಹೊತ್ತುಕೊಂಡು ಹೋಗಲು ನೀವು ಅಲ್ಲಿಯೇ ಕಾಯ್ಕೊಂಡು ಇದ್ರಾ ಅಂತ ಪ್ರಶ್ನೆ ಮಾಡಿದ್ದಾರೆ. ಟೋಯಿಂಗ್ ಮಾಡಿದ ಪೊಲೀಸರು ಬಂದು ಕಾರಿನ ಗ್ಲಾಸಿಗೆ ಟಿಂಟ್ ಹಾಕಿದ್ದರಿಂದ ಗಮನಕ್ಕೆ ಬರಲಿಲ್ಲ. ಮಗುವನ್ನು ಬಿಟ್ಟು ಹೋಗಿದ್ದೇ ತಪ್ಪು ಅಂತ ವಾದಿಸಿದರು. ಕೊನೆಗೆ, ಟಿಂಟ್ ಮತ್ತು ನೋ ಪಾರ್ಕಿಂಗ್ ವಿಚಾರದಲ್ಲಿ ದಂಡ ಕಟ್ಟಿಸಿಕೊಂಡು ಪೊಲೀಸರು ಕಾರನ್ನು ಬಿಟ್ಟು ಕೊಟ್ಟರು.
ಮಗು ಇರುವಾಗಲೇ ಕಾರನ್ನು ಟೋಯಿಂಗ್ ಮಾಡಿರುವ ವಿಚಾರ ಮಾತ್ರ ಪೊಲೀಸರನ್ನು ಕಣ್ಣು ಕಾಣದ ಗಾವಿಲರು ಎಂದು ಸಾರ್ವಜನಿಕರು ಟೀಕಿಸುವಂತಾಗಿದೆ. ಪುಣ್ಯಕ್ಕೆ ಕಾರನ್ನು ಎಳೆದೊಯ್ಯುವಾಗ ಮಗುವಿಗೇನೂ ಆಗಿಲ್ಲ. ಇಲ್ಲಾಂದ್ರೆ ಪೊಲೀಸರ ಕುತ್ತಿಗೆ ಹಿಡಿಯುವ ಸ್ಥಿತಿ ಬರ್ತಿತ್ತು !
In a bizarre case, a car was towed away by the Kadri traffic police while a 7-year-old child was still inside the vehicle. The incident took place in the limits of Mangaluru East police station on Thursday, December 24.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm