Puttur Bjp, Krishna Rao, Pregnant: ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಜನನ ; ಬಿಜೆಪಿ, ಹಿಂದು ಸಂಘಟನೆಗಳ ಮೌನ, ಗರ್ಭಪಾತ ಮಾಡಿಸಲು ಹತ್ತು ಲಕ್ಷ ಆಫರ್, ಕೋಟಿ ಕೊಟ್ಟರೂ ಬೇಡವೆಂದ ಯುವತಿ ತಾಯಿ, ನಾವು ಜೊತೆಗಿದ್ದೇವೆಂದ ಕಾಂಗ್ರೆಸ್

02-07-25 11:39 am       Mangalore Correspondent   ಕರಾವಳಿ

ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರ ಯುವತಿಯೊಬ್ಬಳನ್ನು ಗರ್ಭಿಣಿಯನ್ನಾಗಿಸಿ ಕೈಕೊಟ್ಟ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಬಿಜೆಪಿ ಮತ್ತು ಹಿಂದು ಸಂಘಟನೆಗಳು ಮೌನ ವಹಿಸಿದ್ದರೆ ಕಾಂಗ್ರೆಸ್ ಮುಖಂಡರು ಬಿಜೆಪಿ ನಾಯಕರನ್ನು ತೀವ್ರ ಟೀಕೆ ಮಾಡುತ್ತಿದ್ದಾರೆ.

ಮಂಗಳೂರು, ಜುಲೈ 2 : ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರ ಯುವತಿಯೊಬ್ಬಳನ್ನು ಗರ್ಭಿಣಿಯನ್ನಾಗಿಸಿ ಕೈಕೊಟ್ಟ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಬಿಜೆಪಿ ಮತ್ತು ಹಿಂದು ಸಂಘಟನೆಗಳು ಮೌನ ವಹಿಸಿದ್ದರೆ ಕಾಂಗ್ರೆಸ್ ಮುಖಂಡರು ಬಿಜೆಪಿ ನಾಯಕರನ್ನು ತೀವ್ರ ಟೀಕೆ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ಮುಖಂಡ ಪದ್ಮರಾಜ್, ನಾವು ಯುವತಿಗೆ ನ್ಯಾಯ ದೊರಕಿಸಲು ಹೋರಾಟಕ್ಕೆ ಕೈಜೋಡಿಸುತ್ತೇವೆ. ಮಹಿಳೆಯನ್ನು ಮಾತೆ ಎನ್ನುವ ಮಂದಿ ಈ ರೀತಿಯ ಅನ್ಯಾಯ ಆಗಿರುವಾಗ ಸುಮ್ಮನಿರುವುದನ್ನು ಸಹಿಸಲಾಗದು ಎಂದಿದ್ದಾರೆ.

ಇದೇ ವೇಳೆ, ಪುತ್ತೂರಿನಲ್ಲಿ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಆಕೆಯ ತಾಯಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಈಗಷ್ಟೇ ಅಂತಿಮ ವರ್ಷದ ಬಿಎಸ್ಸಿ ಮಾಡುತ್ತಿರುವ ನನ್ನ ಮಗಳಿಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ಮಗುವಿನ ಜನನಕ್ಕೆ ಕಾರಣನಾದ ಕೃಷ್ಣ ಜೆ. ರಾವ್ ನಾಪತ್ತೆಯಾಗಿದ್ದು, ನಾವು ಪೊಲೀಸರಿಗೆ ದೂರು ನೀಡಿದ್ದರೂ ಆತನನ್ನು ಬಂಧಿಸದೆ ನಾಟಕ ಮಾಡುತ್ತಿದ್ದಾರೆ. ಆರೋಪಿಯನ್ನು ಸ್ವತಃ ಆತನ ತಂದೆ ರಾಜಕೀಯ ಪ್ರಭಾವ ಬಳಸಿ ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಮಗಳು ಮತ್ತು ಕೃಷ್ಣ ಜೆ. ರಾವ್ ಹೈಸ್ಕೂಲಿನಲ್ಲಿದ್ದಾಗಲೇ ಪರಸ್ಪರ ಪ್ರೇಮಿಸುತ್ತಿದ್ದರು. ಮಗಳು ಮಂಗಳೂರಿನಲ್ಲಿ ಬಿಎಸ್ಸಿ ಮುಗಿಸಿದ್ದು, ಕೃಷ್ಣ ರಾವ್ ಪುತ್ತೂರಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ಗರ್ಭಿಣಿಯಾದ ಮೇಲೆ ನಮಗೆ ತಿಳಿಯಿತು. ಆನಂತರ, ಮದುವೆಯಾಗುತ್ತೇನೆಂದು ತಂದೆ, ಮಗ ಭರವಸೆ ಕೊಟ್ಟಿದ್ದನ್ನು ನಂಬಿದ್ದೆವು. ವೈದ್ಯಕೀಯ ಪರೀಕ್ಷೆ ಸಂದರ್ಭದಲ್ಲಿ ಆತನೂ ಜೊತೆಗೆ ಬರುತ್ತಿದ್ದ. ಕೆಲ ದಿನಗಳಿಂದ ಉಲ್ಟಾ ಹೊಡೆದಿದ್ದು, ಇಲ್ಲ ಸಲ್ಲದ ಆರೋಪ ಹೊರಿಸುತ್ತಿದ್ದಾನೆ. ಹಿಂದು ಸಂಘಟನೆಗಳ ಮುಖಂಡರು ಕರೆ ಮಾಡಿ ಹತ್ತು ಲಕ್ಷ ರೂ. ಕೊಡುತ್ತಾರಂತೆ, ಹಣ ಸ್ವೀಕರಿಸಿ ಗರ್ಭಪಾತ ಮಾಡಿಸಿ ಎಂದು ಸಲಹೆ ನೀಡಿದರು. ಕೋಟಿ ಕೊಟ್ಟರೂ ಮಾಡಿಸಲ್ಲ ಎಂದಾಗ ಹಿಂದೆ ಸರಿದರು. ಮಗುವಿನ ಡಿಎನ್ಎ ಪರೀಕ್ಷೆಗೆ ನಾನು ಮತ್ತು ಮಗಳು ಸಿದ್ಧರಿದ್ದೇವೆ. ಯಾವುದೇ ಪುಣ್ಯಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡುವುದಕ್ಕೂ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ್ದಾರೆ.

ಹುಡುಗ ಉಲ್ಟಾ ಹೊಡೆದಾಗ ಮಹಿಳಾ ಠಾಣೆಗೆ ದೂರು ನೀಡಲು ತೆರಳಿದ್ದೆ. ಆಗ ಕೃಷ್ಣ ರಾವ್ ಮತ್ತು ತಂದೆ ಜಗನ್ನಿವಾಸ ರಾವ್ ಠಾಣೆಗೆ ಬಂದು ಮದುವೆಯಾಗುವುದಾಗಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಆನಂತರ, ಶಾಸಕ ಅಶೋಕ್ ರೈಯವರ ಮೂಲಕವೂ ಹೇಳಿಸಿದ್ದರು. ಶಾಸಕರ ಮಾತು ನಂಬಿ ಎಫ್ಐಆರ್ ಹಾಕುವುದು ಬೇಡ ಎಂದು ಹಿಂದೆ ಬಂದಿದ್ದೆ. ಈಗ ಶಾಸಕರಿಗೂ ತಿಳಿಸಿದ್ದು ಕಾನೂನು ಪ್ರಕಾರ ಮುಂದುವರಿಯಲು ತಿಳಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.

A sensational case involving the son of Puttur BJP leader Jagannivasa Rao has triggered a major political controversy. The young man, identified as Krishna J. Rao, allegedly impregnated a young woman, promising marriage, and later abandoned her. While the BJP and affiliated Hindu organisations have maintained silence, Congress leaders have come forward extending support to the victim, vowing to fight for justice.