ಬ್ರೇಕಿಂಗ್ ನ್ಯೂಸ್
30-06-25 08:19 pm Mangalore Correspondent ಕರಾವಳಿ
ಮಂಗಳೂರು, ಜೂನ್.30: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಗಂಭೀರ ಚರ್ಚೆ ನಡೆಯಿತು. ಹೊಸ ಎಸ್ಪಿ ಮತ್ತು ಕಮಿಷನರ್ ಬಂದ ಬಳಿಕ ಕಾನೂನಿಗೆ ವಿರುದ್ಧವಾಗಿ ನಡೆಯುತ್ತಿದ್ದ ಕೆಂಪು ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಕೆಂಪು ಕಲ್ಲು ಇಲ್ಲದೆ ಮೇಸ್ತ್ರಿಗಳು, ಇಲೆಕ್ಟ್ರಿಶಿಯನ್ ಸೇರಿದಂತೆ ಎಲ್ಲ ರೀತಿಯ ಕಟ್ಟಡ ಕಾರ್ಮಿಕರು ಕೆಲಸ ಕಳಕೊಂಡಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಕೆಂಪು ಕಲ್ಲಿನಿಂದಲೇ ಕಟ್ಟಡ ಕಟ್ಟುವುದು, ಬೇರೆ ಜಿಲ್ಲೆಗಳ ರೀತಿ ಇಟ್ಟಿಗೆ ಅಥವಾ ಸಿಮೆಂಟ್ ಕಲ್ಲು ಬಳಸುವುದಿಲ್ಲ. ಇದರಿಂದಾಗಿ ಜನಸಾಮಾನ್ಯರಿಗೆ ದೊಡ್ಡ ಸಂಕಷ್ಟ ಎದುರಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ವಿಷಯ ಪ್ರಸ್ತಾಪಿಸಿದ್ದಾರೆ.
ಕಾನೂನು ವಿರುದ್ಧ ನಡೆಯುತ್ತಿದ್ದ ಕೆಂಪು ಕಲ್ಲು ಗಣಿಗಾರಿಕೆ ನಿಲ್ಲಿಸಿರುವುದನ್ನು ಸ್ವಾಗತಿಸುತ್ತೇನೆ, ಆದರೆ ಲೀಗಲ್ ಆಗಿ ಶುರು ಮಾಡಬೇಕಲ್ವಾ.. ನಮ್ಮ ಅಧಿಕಾರಿಗಳು ಕಾನೂನು ರೀತ್ಯ ಗಣಿಗಾರಿಕೆ ಮಾಡಲು ಅವಕಾಶ ಕೊಡಬೇಕು ಎಂದು ಶಾಸಕ ಕೋಟ್ಯಾನ್, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು. ಇದೇ ವೇಳೆ, ಉಸ್ತುವಾರಿ ಸಚಿವರ ಸೂಚನೆಯಂತೆ ಮಾಹಿತಿ ನೀಡಿದ ಗಣಿ ಇಲಾಖೆ ಅಧಿಕಾರಿ, ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 19 ಕಲ್ಲು ಕೋರೆ ಕಾನೂನು ರೀತ್ಯ ನಡೆಯುತ್ತಿದ್ದು, ದಿನವೊಂದಕ್ಕೆ 30 ಸಾವಿರ ಮೆಟ್ರಿಕ್ ಟನ್ ಕಲ್ಲು ಉತ್ಪಾದನೆ ಆಗ್ತಾ ಇದೆ ಎಂದರು.




ಕೇರಳದಲ್ಲಿ 32 ರೂ., ನಮ್ಮಲ್ಲಿ 282 ರೂ.
ಕೇರಳದಲ್ಲಿ ಒಂದು ಟನ್ನಿಗೆ 32 ರೂ. ರಾಯಲ್ಟಿ ಇದ್ದರೆ, ಕರ್ನಾಟಕದಲ್ಲಿ ಅದನ್ನು 282 ರೂ. ಮಾಡಿದ್ದಾರೆ. ಕೇರಳದಲ್ಲಿ 48 ರೂ.ಗೆ ಹೆಚ್ಚಿಸಿರುವುದನ್ನು ವಿರೋಧ ಬಂದ ಕಾರಣ ಶಾಸಕರು ಚರ್ಚಿಸಿ ಮತ್ತೆ 32 ರೂ.ಗೆ ಇಳಿಸಿದ್ದಾರೆ. ಕೇರಳದಲ್ಲಿ ಕಡಿಮೆ ರೇಟ್ ಇರುವುದರಿಂದ ಗಡಿಭಾಗದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಅಕ್ರಮವಾಗಿ ತರಲಾಗುತ್ತಿದೆ. ಸ್ಪೀಕರ್ ಕ್ಷೇತ್ರ ಉಳ್ಳಾಲ ತಾಲೂಕಿಗೆ ಹೆಚ್ಚು ಪೂರೈಕೆ ಆಗುತ್ತಿದೆ. ಉಳಿದ ಕಡೆಗಳಲ್ಲಿ ಕಲ್ಲು ಸಿಗದೆ ಕಟ್ಟಡ ನಿರ್ಮಾಣ ಕೆಲಸವೇ ನಿಂತುಹೋಗಿದೆ. ಇಲ್ಲೀಗಲ್ ಇರುವುದನ್ನು ಸರಿಪಡಿಸಿ ಕಾನೂನು ರೀತ್ಯ ಮಾಡುವಂತೆ ಮಾರ್ಪಡಿಸಿ ಎಂದು ಶಾಸಕ ಕೋಟ್ಯಾನ್ ಮತ್ತು ರಾಜೇಶ್ ನಾಯ್ಕ್ ಒತ್ತಾಯಿಸಿದರು.
ಮತ್ತೆ ಮತ್ತೆ ಕ್ರೈಮ್ ಮಾಡಿದರೆ ಹೊರಬರಲ್ಲ..
ಇದೇ ವೇಳೆ, ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್, ಪರವಾನಗಿ ಇಲ್ಲದೆ ಕಾನೂನು ವಿರುದ್ಧವಾಗಿ ಕಲ್ಲು, ಮರಳು ಒಯ್ಯುವುದಕ್ಕೆ ಕೇಸು ಹಾಕಿದ್ದೇವೆ. ಒಂದು ಬಾರಿ ತಪ್ಪೆಸಗಿದರೆ ಬಿಟ್ಟು ಬಿಡುತ್ತೇವೆ. ಮತ್ತೆ ಮತ್ತೆ ಅದೇ ಅಪರಾಧ ಮಾಡಿದರೆ ಆರ್ಗನೈಸ್ ಕ್ರೈಮ್ ಎಂದು ಕೇಸ್ ಬುಕ್ ಮಾಡುತ್ತೇವೆ, ಆಮೇಲೆ ಹೊರಗೆ ಬರಲಿಕ್ಕಾಗಲ್ಲ ಎಂದು ಎಚ್ಚರಿಕೆ ನೀಡಿದರು. ಶಾಸಕ ಕೋಟ್ಯಾನ್ ಪ್ರತಿಕ್ರಿಯಿಸಿ, ಪೊಲೀಸರು ಕೇಸು ಹಾಕುತ್ತಾರೆಂದು ಯಾರು ಕೂಡ ಕಲ್ಲು, ಮರಳು ಸಾಗಿಸುವುದಕ್ಕೆ ಮುಂದೆ ಬರ್ತಾ ಇಲ್ಲ. ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ತೀವ್ರ ತೊಂದರೆಯಾಗಿದೆ ಎಂದರು.
ಲೋಕಾಯುಕ್ತದಲ್ಲಿ 18 ಕೇಸ್ ಇದೆ
ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ ಕೇರಳದಲ್ಲಿ ಯಾವ ರೀತಿ ನಿಯಮ ಇದೆ ಎಂದು ಸ್ಟಡಿ ಮಾಡಿಕೊಳ್ಳಿ. ಗಣಿ ಅಕ್ರಮದ ಬಗ್ಗೆ ಲೋಕಾಯುಕ್ತದಿಂದಲೂ ಬಹಳಷ್ಟು ಕೇಸ್ ಆಗಿದ್ದು ಅದರ ಬಗ್ಗೆಯೂ ನೋಡಬೇಕಾಗುತ್ತದೆ. ಈಗ ಇರುವ ಕೋರೆಗಳ ಕಲ್ಲು ಸಾಕಾಗಲ್ಲವೇ ಎಂದು ಗಣಿ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧಿಸಿ 18 ಅಧಿಕಾರಿಗಳ ಮೇಲೆ ಲೋಕಾಯುಕ್ತ ಸುಮೊಟೋ ಕೇಸ್ ಮಾಡಿದೆ. ಸರ್ಕಾರದ ನಿಯಮ ಪ್ರಕಾರ, ಗಣಿಗಾರಿಕೆ ಅವಕಾಶ ಕೊಡುತ್ತೇವೆ. ಸರ್ಕಾರದ ಮಟ್ಟದಲ್ಲಿ ನಿಯಮ ಸಡಿಲಿಕೆ ಮಾಡಿದರೆ ಮಾತ್ರ ಹೆಚ್ಚುವರಿ ಕೋರೆಗಳಿಗೆ ಲೈಸನ್ಸ್ ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಅಧಿಕಾರಿ ಹೇಳಿದರು. ನಿಮಯದಲ್ಲಿ ಏನೆಲ್ಲ ಸಡಿಲಿಕೆ ಮಾಡಬಹುದು ಎನ್ನುವ ಬಗ್ಗೆ ಸಮಾಲೋಚಿಸಿ ಸರ್ಕಾರಕ್ಕೆ ಬರೆಯಿರಿ, ನಾವು ಮುಂದಿನ ವಾರ ಬೆಂಗಳೂರಿನಲ್ಲಿ ಗಣಿ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇನೆ ಎಂದು ಸಚಿವರು ಹೇಳಿದರು.
ಇದೇ ವೇಳೆ, ಹಲವಾರು ಮರಳು ಬ್ಲಾಕ್ ಇದೆ, ಆದರೆ ಮರಳು ಎತ್ತುವುದಕ್ಕೆ ಅಧಿಕಾರಿಗಳು ಅವಕಾಶ ಕೊಡುವುದಿಲ್ಲ. ಎಷ್ಟು ಅರ್ಜಿ ಬಂದಿದೆ, ಎಲ್ಲದಕ್ಕೂ ಪಾಸ್ ಮಾಡಿ ಎಂದು ಹರೀಶ್ ಪೂಂಜ ಮತ್ತು ಐವಾನ್ ಡಿಸೋಜ ಹೇಳಿದರು. ಮರಳು ಬ್ಲಾಕ್ ಎಲ್ಲಿದೆ ಅಂತ ಅಧಿಕಾರಿಗಳಿಗೆ ಗೊತ್ತಿದೆ. ಮರಳು ಎತ್ತಿ ಸರಳವಾಗಿ ಜನರಿಗೆ ಪೂರೈಕೆ ಮಾಡಲು ಕ್ರಮ ವಹಿಸಿ ಎಂದು ಒತ್ತಾಯಿಸಿದರು. ಗಣಿ ಅಧಿಕಾರಿ ಪ್ರತಿಕ್ರಿಯಿಸಿ, 25 ಕಡೆ ಮರಳುಗಾರಿಕೆ ಮಾಡಲು ಪ್ರಸ್ತಾಪ ಇದೆ, 15 ಕಡೆಗಳಲ್ಲಿ ಕಾನೂನು ರೀತ್ಯ ಮಂಜೂರಾತಿ ಆಗಿದೆ. ಇದರಿಂದ 5.5 ಲಕ್ಷ ಟನ್ ಸಂಗ್ರಹ ಆಗುತ್ತದೆ. ಇದರ ಜೊತೆಗೆ ಎಂ ಸ್ಯಾಂಡ್ 1.17 ಲಕ್ಷ ಮೆಟ್ರಿಕ್ ಟನ್ ಮಾರಾಟ ಆಗಿದೆ. ಮರಳನ್ನು ಒಂದು ಯೂನಿಟ್ ಅಂದರೆ ಒಂದು ಲೋಡಿಗೆ 12 ಸಾವಿರ ರೂ.ಗೆ ನೀಡಲಾಗುತ್ತದೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಮರಳು ತೆಗೆಯುವುದಕ್ಕೆ 18 ಬ್ಲಾಕ್ ಬಾಕಿ ಇದೆ. ತಾಲೂಕುವಾರು ಟೆಂಡರ್ ಪ್ರಕ್ರಿಯೆ ಆಗುವುದರಿಂದ ಕನಿಷ್ಠ ಮೂರು ಜನ ಟೆಂಡರ್ ಹಾಗಬೇಕೆಂಬ ನಿಯಮ ಅನುಸರಣೆ ಆಗುತ್ತಿಲ್ಲ. ಹಾಗಾಗಿ, ಪ್ರಕ್ರಿಯೆ ವಿಳಂಬವಾಗಿದೆ ಎಂದು ಅಧಿಕಾರಿ ಹೇಳಿದಾಗ, ಅದನ್ನು ಜಿಲ್ಲಾ ಮಟ್ಟದಲ್ಲಿಯೇ ಮರು ಟೆಂಡರ್ ಮಾಡಿ. ತಾಲೂಕು ವ್ಯಾಪ್ತಿ ಯಾಕೆ ಎಂದು ಶಾಸಕರು ಪ್ರಶ್ನಿಸದರು. ಜಿಲ್ಲಾ ಮಟ್ಟದಲ್ಲಿಯೇ ಮಾಡಿಯಪ್ಪಾ ಎಂದು ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಜಿಲ್ಲಾ ಮಟ್ಟದಲ್ಲಿಯೇ ಮರು ಟೆಂಡರ್ ಮಾಡುತ್ತೇವೆ, ಒಂದೂವರೆ ತಿಂಗಳಲ್ಲಿ ಪ್ರಕ್ರಿಯೆ ಮುಗಿಸುತ್ತೇವೆ. ಆದರೆ ಕಾನೂನು ವಿರೋಧಿಯಾಗಿ ನಡೆದುಕೊಳ್ಳಲು ಬಿಡೋದಿಲ್ಲ ಎಂದು ಹೇಳಿದರು.
ಕೇರಳದಿಂದ ಬರೋದನ್ನು ನಿಲ್ಲಿಸ್ತೇವೆ..
ಕೇರಳದಿಂದ ಕೆಂಪು ಕಲ್ಲು, ಮರಳು ಬರ್ತಾ ಇದೆಯೆಂಬ ಆರೋಪ ಬಂದಾಗ, ಅಂತಹ ಮಾಹಿತಿಗಳಿದ್ದರೆ ಕೊಡಿ, ನಾವು ಗಡಿಯಲ್ಲಿ ಪೂರ್ತಿ ಚೆಕ್ ಪೋಸ್ಟ್ ಹಾಕುತ್ತೇವೆ. ಯಾವುದೇ ರೀತಿಯಲ್ಲಿ ಒಳಬಂದರೂ ಕ್ರಮ ತಗೊಳ್ತೀವಿ, ಅದರಲ್ಲಿ ಡೌಟೇ ಇಲ್ಲ ಎಂದು ಕಮಿಷನರ್ ಮತ್ತು ಎಸ್ಪಿ ಹೇಳಿದಾಗ, ಇನ್ನು ಆ ಕಡೆಯಿಂದ ಬರೋದು ನಿಲ್ಲುತ್ತೆ ಅಂದ್ಕೊಂಡು ಎಲ್ಲ ಶಾಸಕರು ಪೆಚ್ಚಾದರು. ಮುಂದಿನ ವಾರವೇ ಬೆಂಗಳೂರಿನಲ್ಲಿ ಸಭೆ ಮಾಡುತ್ತೇವೆ, ನೀವು ಈ ಬಗ್ಗೆ ಸರಿಯಾದ ವರದಿ ಕಳಿಸಿ. ಕೆಡಿಪಿ ಸಭೆಯಲ್ಲಿ ನಿಯಮ ಸರಳೀಕರಣಕ್ಕೆ ನಿರ್ಣಯಿಸಿದ ಬಗ್ಗೆ ಸರ್ಕಾರಕ್ಕೆ ಬರೆಯಿರಿ ಎಂದು ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಧಿಕಾರಿಗೆ ಸೂಚಿಸಿದರು. ಶಾಸಕರು ಕೆಂಪು ಕಲ್ಲು, ಮರಳು ಬಗ್ಗೆ ಪ್ರಶ್ನೆಗಳನ್ನೆತ್ತಿ ಜಾಡಿಸಬಹುದು ಅಂದ್ಕೊಂಡು ಬಂದಿದ್ದರೆ, ಅಧಿಕಾರಿಗಳು ರೆಡಿಯಾಗಿಯೇ ಬಂದಿದ್ದು ಸಭೆಯಲ್ಲಿ ಕಂಡುಬಂತು. ಈ ವೇಳೆ, ಕಾನೂನು ಹೆಸರಿನಲ್ಲೇ ಅಧಿಕಾರಿಗಳನ್ನು ಜಾಡಿಸುವ ಎಂಎಲ್ಸಿ ಭೋಜೇಗೌಡ ಅನುಪಸ್ಥಿತಿ ಎದ್ದು ಕಂಡಿತು.
ಮರಳು ತೆಗೆಯದೆ ಅಂತರ್ಜಲ ಕುಸಿತ !
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದಿನಿಂದಲೂ ಸಾಂಪ್ರದಾಯಿಕ ಮರಳುಗಾರಿಕೆ ನಡೀತಾ ಬಂದಿದೆ. ಆದರೆ ಕೆಲವು ವರ್ಷಗಳಲ್ಲಿ ಮರಳು ಸರಿಯಾಗಿ ಎತ್ತದ ಕಾರಣ ಜಿಲ್ಲೆಯಲ್ಲಿ ಅಂತರ್ಜಲ ಕುಸಿತ ಆಗುತ್ತಿದೆ. ಹಿಂದೆಲ್ಲಾ 120 ಅಡಿಗೆ ಬೋರ್ ವೆಲ್ ನೀರು ಸಿಗುತ್ತಿದ್ದರೆ, ಈಗ 1200 ಅಡಿಗೂ ಹೋಗಬೇಕಾಗುತ್ತದೆ. ಇದಲ್ಲದೆ, ನದಿಗಳಲ್ಲಿ ಪ್ರವಾಹ ಬರುವುದಕ್ಕೂ ಮರಳು ಎತ್ತದಿರುವುದೇ ಕಾರಣ. ಮರಳು ತುಂಬಿಕೊಂಡು ಸಣ್ಣ ಮಳೆ ಬಂದರೂ ಪ್ರವಾಹ ಬರುವ ಸ್ಥಿತಿಯಾಗಿದೆ. ಕೆಲವು ಕಡೆಗಳಲ್ಲಿ ಹೊಂಡಗಳು ಎದ್ದಿವೆ, ಅದಕ್ಕೂ ಮರಳು ಸಂಗ್ರಹವೇ ಕಾರಣ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಗಣಿ ಇಲಾಖೆಯ ಭೂ ವಿಜ್ಞಾನಿಯ ರೀತಿ ಕೆಡಿಪಿ ಸಭೆಯಲ್ಲಿ ಹೇಳಿಕೆ ನೀಡಿದ್ದು ಕುತೂಹಲಕ್ಕೆ ಕಾರಣವಾಯಿತು. ಮರಳು ಎತ್ತದಿರುವುದರಿಂದ ಅಂತರ್ಜಲ ಕುಸಿತ ಆಗುತ್ತೆ ಎನ್ನುವ ಶಾಸಕರ ಹೊಸ ಶೋಧನೆ ಅಲ್ಲಿದ್ದ ಕೆಲವರನ್ನು ಹುಬ್ಬೇರಿಸಿದರೆ, ಕೆಲವರಿಗೆ ನಗೆಪಾಟಲು ವಿಷಯವಾಗಿ ಕಂಡಿತು.
The Dakshina Kannada District KDP (Karnataka Development Programme) quarterly meeting, chaired by District In-charge Minister Dinesh Gundu Rao, witnessed intense discussions over the prevailing crisis in sand and red stone mining in the region.
28-10-25 07:18 pm
Bangalore Correspondent
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
28-10-25 03:36 pm
Mangalore Correspondent
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm