ಬ್ರೇಕಿಂಗ್ ನ್ಯೂಸ್
25-06-25 09:27 pm Mangalore Correspondent ಕರಾವಳಿ
ಮಂಗಳೂರು, ಜೂನ್ 25 : ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿಯೂ ಇರಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾರೆ. ಬಿಜೆಪಿ ಹುಟ್ಟಿದ್ದೇ 1980ರಲ್ಲಿ, ಜನಸಂಘ ಸ್ಥಾಪನೆಯಾಗಿದ್ದೂ 1951ರಲ್ಲಿ. ಸ್ವಾತಂತ್ರ್ಯ ಕಾಲದಲ್ಲಿ ಬಿಜೆಪಿ ಇರಲಿಲ್ಲ. ಕಾಂಗ್ರೆಸ್ ಜೊತೆ ಸೇರಿ ಒಂದಾಗಿ ಹೋರಾಟ ನಡೆಸಿದ್ದರು. ಆದರೆ ದೇಶಕ್ಕೆ ತುರ್ತು ಸ್ಥಿತಿ ಹೇರಿದಾಗ ಇದೇ ಮಲ್ಲಿಕಾರ್ಜುನ ಖರ್ಗೆ ಏನು ಮಾಡುತ್ತಿದ್ದರು. ಸಂವಿಧಾನಕ್ಕೆ ಯಾಕೆ ನಿಯತ್ತು ತೋರಿಸಲಿಲ್ಲ ಯಾಕೆ. ಇಂದಿರಾ ಸಂವಿಧಾನ ಹತ್ಯೆ ಮಾಡಿದಾಗ, ಹೊಗಳುಭಟರ ಪಟಾಲಂ ಜೊತೆಗೆ ಬಾಲ ಅಲ್ಲಾಡಿಸುತ್ತ ಡ್ಯಾಶ್ ಡ್ಯಾಶ್ ಆಗಿದ್ದರಲ್ಲವೇ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.
ಬಿಜೆಪಿ ವತಿಯಿಂದ ನಗರದಲ್ಲಿ ನಡೆದ ಸಂವಿಧಾನ ಹತ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ತುರ್ತು ಸ್ಥಿತಿಯ ವಿರುದ್ಧ ಹೋರಾಟ ಮಾಡಿದ್ದಕ್ಕಾಗಿ ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿದಿದೆ. ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ ಚುನಾವಣೆ ನಿಲ್ಲಬಾರದೆಂದು ತೀರ್ಪಿತ್ತಿದ್ದಕ್ಕೆ ತನ್ನ ಸ್ವಾರ್ಥಕ್ಕಾಗಿ ದೇಶಕ್ಕಾಗಿ ಕಾಂಗ್ರೆಸ್ ದೇಶದಲ್ಲಿ ಸಂವಿಧಾನವನ್ನು ಮೂಲೆಗೊತ್ತಿ ತುರ್ತು ಸ್ಥಿತಿ ಹೇರಿತ್ತು. ಭೂಕಂಪ, ಯುದ್ಧ ಸನ್ನಿವೇಶದಲ್ಲಿ ಮಾತ್ರ ಹೇರಬಹುದಾಗಿದ್ದ ತುರ್ತು ಸ್ಥಿತಿಯನ್ನು ತನ್ನ ಅಧಿಕಾರ ಲಾಲಸೆಗಾಗಿ ಇಂದಿರಾ ದೇಶದ ಮೇಲೆ ಹೇರಿದ್ದರು. 21 ತಿಂಗಳ ಕಾಲ ಸಂವಿಧಾನ ಕೋಮಾಕ್ಕೆ ಹೋಗಿತ್ತು. ಇದಲ್ಲದೆ, ನ್ಯಾಯಾಂಗ ದೇಶಕ್ಕೆ, ಸಂವಿಧಾನಕ್ಕೆ ನಿಷ್ಠರಾಗಬೇಕಿಲ್ಲ. ಆಳುವ ಪಕ್ಷಕ್ಕೆ ನಿಷ್ಠರಾಗಿ ಇರಬೇಕೆಂದು ಕಾನೂನಿಗೆ ತಿದ್ದುಪಡಿ ತಂದರು.
ಪ್ರಧಾನಿ, ಲೋಕಸಭೆ ನಾಯಕರು ಏನು ಮಾಡಿದರೂ ಪ್ರಶ್ನೆ ಮಾಡುವಂತಿಲ್ಲ ಎಂಬ ತಿದ್ದುಪಡಿಯನ್ನೂ ತಂದರು. ಇದಕ್ಕೆ ಸುಪ್ರೀಂ ಕೋರ್ಟಿನಲ್ಲಿ ಡಾ.ಎಚ್.ಕೆ.ಖನ್ನಾ ಹೊರತುಪಡಿಸಿ ಬೇರಾವುದೇ ನ್ಯಾಯಾಧೀಶರು ವಿರೋಧಿಸಲಿಲ್ಲ. ಅದಕ್ಕಾಗಿ ಮುಖ್ಯ ನ್ಯಾಯಾಧೀಶರಾಗಬೇಕಿದ್ದ ಖನ್ನಾ ಅವರಿಗೆ ಭಡ್ತಿ ನಿರಾಕರಿಸಲಾಗಿತ್ತು. ತುರ್ತು ಸ್ಥಿತಿಯನ್ನು ಪ್ರಶ್ನೆ ಮಾಡಿದವರನ್ನೆಲ್ಲ ಬಂಧಿಸಲಾಯಿತು. ತುರ್ತು ಸ್ಥಿತಿ ವಿರುದ್ಧ ಹೋರಾಡಿದವರಿಗೆ ಹೈದರಾಬಾದ್ ಗೋಲಿ ಹೊಡೆಯಲಾಯಿತು. ಹೈದರಾಬಾದ್ ಗೋಲಿಯಂದ್ರೆ ಲಾಠಿಗೆ ಗೋಲಿ ತೊಡಿಸಿ ಗುದದ್ವಾರಕ್ಕೆ ತೂರಿಸುವುದು. ಲಟ್ಟಣಿಗೆಯಲ್ಲಿ ಹೊಡೆಯುವ ಶಿಕ್ಷೆಯೂ ಜಾರಿಯಿತ್ತು. ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ ಸೇರಿದಂತೆ 40 ಜನರಿಗೆ ಕಲ್ಲಡ್ಕದಲ್ಲಿ ಇಸ್ಮಾಯಿಲ್ ಎಂಬ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂಬ ಪ್ರಕರಣದಲ್ಲಿ ಏರೋಪ್ಲೇನ್ ಶಿಕ್ಷೆ ನೀಡಲಾಗಿತ್ತು. ಕೆಲವಾರು ತಿಂಗಳ ಕಾಲ ಇವರನ್ನು ಎಲ್ಲಿ ಇಡಲಾಗಿತ್ತು ಅಂತಲೇ ತಿಳಿಯಲಿಲ್ಲ. ಇಸ್ಮಾಯಿಲ್ ಎಂಬ ವ್ಯಕ್ತಿ ಇಂದಿರಾ ನಮ್ಮ ತಾಯಿ ಎಂದು ಬೋರ್ಟ್ ಬರೆದಿದ್ದನಂತೆ. ಅದರ ಮುಂದೆ ಯಾರೋ ತಂದೆ ಯಾರು ಅಂತ ಸೇರಿಸಿದ್ದರು. ಆನಂತರ, ಇದು ವಿಷಯ ದೊಡ್ಡದಾಯ್ತು ಅಂತ ಬೋರ್ಡನ್ನೇ ತೆಗೆದುಬಿಟ್ಟಿದ್ದ.
ಪತ್ರಿಕೆಗಳಲ್ಲಿ ವಾಸ್ತವಿಕ ಸುದ್ದಿ ಬರೆಯಬಾರದೆಂದು ಎಲ್ಲ ಕಡೆಯೂ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅಧಿಕಾರಿಗಳು ಸರಕಾರದ ವಿರುದ್ಧ ಸುದ್ದಿಯಿಲ್ಲ ಎಂದು ಪತ್ರಿಕೆ ಪರಿಶೀಲಿಸಿದ ಬಳಿಕವೇ ಪ್ರಕಟಿಸಬೇಕಿತ್ತು. ಯಾರಾದ್ರೂ ವಿರುದ್ಧ ಬರೆದರೆ ಜೈಲಿಗೆ ಹಾಕುತ್ತಿದ್ದರು. ಆದರೂ ನಿಗೂಢವಾಗಿಯೇ ಇದ್ದು ಮೊಳೆಗಳನ್ನು ಜೋಡಿಸುತ್ತ ಪತ್ರಿಕೆ ಮಾಡಿ ಹಂಚುತ್ತಿದ್ದರು. ಇದೇ ವೇಳೆ ಮಾನವ ಹಕ್ಕುಗಳ ದಮನವೂ ಆಗಿತ್ತು. 14 ವರ್ಷದಿಂದ 70 ವರ್ಷದವರನ್ನು ಹಿಡಿದು ಕಟ್ ಮಾಡಿಸುತ್ತಿದ್ದರು. ಏನ್ ಕಟ್ ಮಾಡಿದ್ರು ಅಂತ ಕೇಳಬೇಡಿ ಎಂದು ಸಿಟಿ ರವಿ ಹೇಳಿದರು. 21 ತಿಂಗಳ ತರ್ತು ಸ್ಥಿತಿಯ ನಂತರ ಇಂಟೆಲಿಜೆನ್ಸ್ ನವರು 400ಕ್ಕೂ ಹೆಚ್ಚು ಸೀಟು ಗೆಲ್ತೀರಿ ಅಂತ ಹೇಳಿದ್ದಕ್ಕೆ ಇಂದಿರಾ ದೇಶದಲ್ಲಿ ಚುನಾವಣೆ ಘೋಷಣೆ ಮಾಡಿದರು. ಈ ದೇಶದ ಜನರು ತಮ್ಮ ಹಕ್ಕು ಚಲಾಯಿಸಿ ಇಂದಿರಾ ಸೇರಿ ಕಾಂಗ್ರೆಸನ್ನು ಮೊಟ್ಟಮೊದಲ ಬಾರಿಗೆ ಧೂಳೀಪಟ ಮಾಡಿದರು. ಆದರೂ ಕಾಂಗ್ರೆಸಿನ ಸರ್ವಾಧಿಕಾರಿ ಮನಸ್ಥಿತಿ ಬದಲಾಗಿಲ್ಲ. ಈಗ ಸಂವಿಧಾನದ ಪ್ರತಿ ಹಿಡಿದು ನಿಂತರೆ ಪಾಪ ಪರಿಹಾರ ಆಗುತ್ತಾ ಎಂದು ಪ್ರಶ್ನಿಸಿದರು.
ಸರ್ವಾಧಿಕಾರ ಕಾಂಗ್ರೆಸಿನ ಡಿಎನ್ಎ ಆಗಿದ್ದು, ಈಗಲೂ ಒಂದೆರಡು ರಾಜ್ಯಗಳಲ್ಲಿ ಅಧಿಕಾರ ಇದ್ದರೂ ಅದೇ ಮನಸ್ಥಿತಿ ತೋರಿಸುತ್ತಿದೆ. ಮೆಜಾರಿಟಿ ಬಂದಾಗ ಸರ್ವಾಧಿಕಾರಿ ಆಗುತ್ತೇವೆ ಎನ್ನುವುದನ್ನು ಮಧ್ಯರಾತ್ರಿ ಹಿಂದು ನಾಯಕರ ಮನೆಗಳಿಗೆ ಪೊಲೀಸರನ್ನು ಕಳಿಸಿ ತಮ್ಮ ಮನಸ್ಥಿತಿಯನ್ನು ತೋರಿಸಿದ್ದಾರೆ ಎಂದು ಸಿಟಿ ರವಿ ಪರೋಕ್ಷ ವಾಗ್ದಾಳಿ ನಡೆಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಕೊಲೆಯಾಗಿತ್ತು
ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಉದ್ಘಾಟಿಸಿದರು. ದೇಶದ ಅತ್ಯುತ್ತಮ ಪ್ರಧಾನಿ ಎಂದು ಹೆಸರು ಮಾಡಿದ್ದ, ಪಾಕಿಸ್ತಾನವನ್ನು ಸೋಲಿಸಿ ಜೈಕಿಸಾನ್, ಜೈಜವಾನ್ ಎಂಬ ಘೋಷಣೆ ಮೊಳಗಿಸಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ತಾಷ್ಕೆಂಟ್ ಪ್ರವಾಸಕ್ಕೊಯ್ದು ವ್ಯವಸ್ಥಿತ ರೀತಿಯಲ್ಲಿ ಕೊಲೆ ಮಾಡಲಾಗಿತ್ತು. ಅವರು ಮರಣ ಹೊಂದಿದ ಕೊಠಡಿಯಲ್ಲಿ ಫೋನ್ ಇರಲಿಲ್ಲ. ಕಾವಲುಗಾರನೂ ಇರಲಿಲ್ಲ. ಕೇವಲ ಒಬ್ಬ ಬಾಣಸಿಗ ಮಾತ್ರ ಇದ್ದ. ಮೃತ ಶರೀರ ನೀಲಿ ಬಣ್ಣಕ್ಕೆ ತಿರುಗಿತ್ತು. ಅವರ ಪತ್ನಿ ಶವದ ಪೋಸ್ಟ್ ಮಾರ್ಟಂ ಮಾಡಲು ಗೋಗರೆದಿದ್ದರು. ಆದರೆ ಇಂದಿರಾ ಗಾಂಧಿ ಪ್ರಧಾನಿಯಾಗುವ ಧಾವಂತದಲ್ಲಿ ಅದ್ಯಾವುದನ್ನೂ ಕಿವಿಗೆ ಹಾಕಲಿಲ್ಲ. 12 ದಿನದಲ್ಲಿ ಪ್ರಧಾನಿ ಪಟ್ಟಕ್ಕೇರಿ ಶಾಸ್ತ್ರಿ ಕೊಲೆ ಕೇಸನ್ನೇ ಮುಚ್ಚಿ ಹಾಕಿದ್ದರು ಎಂದು ಇಂದಿರಾ ಕಾಲದ ಆಡಳಿತ ಮತ್ತು ತುರ್ತು ಸ್ಥಿತಿಯ ಅನೇಕ ಪ್ರಸಂಗಗಳನ್ನು ನೆನಪಿಸಿದರು.
ಕಾರ್ಯಕ್ರಮದಲ್ಲಿ ತುರ್ತು ಸ್ಥಿತಿಯ ಸಂದರ್ಭದಲ್ಲಿ ಜೈಲು ಸೇರಿದ್ದವರನ್ನು ರಾಧಾಮೋಹನ್ ಅಗರ್ವಾಲ್ ಮತ್ತು ಸಂಸದ ಬ್ರಿಜೇಶ್ ಚೌಟ ಸನ್ಮಾನಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
In a sharp attack on Congress President Mallikarjun Kharge, BJP leader and former national secretary C.T. Ravi questioned Kharge’s silence during the Emergency period (1975-77) imposed by then Prime Minister Indira Gandhi. Speaking at the “Constitution Betrayal Day” organized by the BJP in Mangaluru, Ravi alleged that Kharge, instead of defending the Constitution, stood by Indira Gandhi and remained a mute spectator during the suspension of democratic rights.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
16-08-25 10:20 am
Mangalore Correspondent
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm