ಬ್ರೇಕಿಂಗ್ ನ್ಯೂಸ್
23-06-25 11:01 pm Mangalore Correspondent ಕರಾವಳಿ
ಮಂಗಳೂರು, ಜೂನ್ 23 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಥಿಯರಿಗೆ ಕೊಡುವಷ್ಟು ಮಹತ್ವ ಪ್ರಾಕ್ಟಿಕಲ್ ಗೆ ನೀಡುವುದಿಲ್ಲ. ಹೀಗಾಗಿ ಈ ಭಾಗದವರು ಪ್ರಾಕ್ಟಿಕಲ್ ವಿಷಯದಲ್ಲಿ ಹಿಂದಿರುತ್ತಾರೆ. ಇದೇ ಕಾರಣಕ್ಕೆ ಮಂಗಳೂರಿನಲ್ಲಿ ಸ್ಕಿಲ್ ಡೆವಲಪ್ಮೆಂಟ್ ಉದ್ದೇಶದಿಂದ ಆದಷ್ಟು ಬೇಗ ತರಬೇತಿ ಕೇಂದ್ರ ಆರಂಭಿಸಲು ಉದ್ದೇಶಿಸಿದ್ದೇನೆ ಎಂದು ಸೌದಿ ಅರೇಬಿಯಾದ ಅಲ್ ಮುಝೈನ್ ಸಂಸ್ಥೆಯ ಸಿಇಓ, ಮಂಗಳೂರು ಮೂಲದ ಖ್ಯಾತ ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆ ಹೇಳಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಗೌರವ ಅತಿಥಿಯಾಗಿ ಭಾಗವಹಿಸಿ, ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಝಕರಿಯಾ ಜೋಕಟ್ಟೆ ತಾನು ಬಡತನದಿಂದ ಬೆಳೆದು ಬಂದ ಬಗೆಯನ್ನು ವಿವರಿಸಿದರು. ಆರಂಭದಲ್ಲಿ 300 ರೂಪಾಯಿ ಸಂಬಳಕ್ಕೆ ಉದ್ಯೋಗಕ್ಕೆ ತೆರಳಿದವನು. ಎಸ್ಸೆಸ್ಸೆಲ್ಸಿ ಫೇಲ್ ಆದವನಿಗೆ ಬೇರಾವುದೇ ಸ್ಕಿಲ್ ಇರಲಿಲ್ಲ. ಸೌದಿಯಲ್ಲಿ ಪೆಟ್ರೋ ಕೆಮಿಕಲ್ಸ್ ಸ್ಥಾವರಗಳನ್ನು ನೋಡಿಕೊಂಡೇ ಮೆಕ್ಯಾನಿಕ್ ಆಗಿದ್ದೆ. ಆ ಬಗ್ಗೆ ತಿಳಿದುಕೊಂಡು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತ ಮೇಲೆ ಬಂದಿದ್ದೇನೆ. 1998ರಲ್ಲಿ ಮಗ ಆರಂಭಿಸಿದ ಅಲ್ ಮುಝೈನ್ ಹೆಸರಿನಲ್ಲೇ ಪೆಟ್ರೋ ಕೆಮಿಕಲ್ಸ್ ಉದ್ಯಮ ಆರಂಭಿಸಿದ್ದೆ. ನನ್ನ 30 ವರ್ಷಗಳ ಅನುಭವ ಧಾರೆಯೆರೆದು ಕಟ್ಟಿದ ಸಂಸ್ಥೆಯಲ್ಲಿ ಈಗ ಏಳು ಸಾವಿರ ಮಂದಿ ಉದ್ಯೋಗ ಮಾಡುತ್ತಿದ್ದಾರೆ.
ನಮ್ಮ ಮಂಗಳೂರು, ಕರಾವಳಿಯ ಅತಿ ಹೆಚ್ಚು ಮಂದಿಗೆ ಕೆಲಸ ಕೊಟ್ಟಿದ್ದೇನೆ. ಭಾರತದ ಇತರ ಕಡೆಯವರು, ಅಮೆರಿಕ, ದಕ್ಷಿಣ ಆಫ್ರಿಕಾ ಹೀಗೆ ಎಲ್ಲ ಕಡೆಯವರು ಇದ್ದಾರೆ. ನಾನು ಯಾರನ್ನೂ ನೌಕರರು ಅಂತ ಅನ್ಕೊಂಡಿಲ್ಲ. ಅವರೆಲ್ಲ ನನ್ನ ಪಾರ್ಟ್ನರ್ ಅಂತಲೇ ಹೇಳುತ್ತ ಬಂದಿದ್ದೇನೆ. ನನ್ನ ಉದ್ಯಮ ಬೆಳೆಯಲು ಅವರೆಲ್ಲರ ಕೊಡುಗೆ ಇದೆ. ಬಡತನ, ಅವಮಾನ ನನ್ನನ್ನು ಇಷ್ಟೆತ್ತೆರಕ್ಕೆ ಬೆಳೆಯಲು ಪ್ರೇರಣೆ ನೀಡಿದೆ. ಈಗಲೂ ಯಾರಾದ್ರೂ ಕೆಲಸ ಬೇಕೆಂದು ಮೆಕ್ಯಾನಿಕಲ್ ಕಲಿತವರನ್ನು ಕರೆದುಕೊಂಡು ಬಂದರೆ ನಾನೇ ಇಂಟರ್ವ್ಯೂ ಮಾಡುತ್ತೇನೆ. ಅವರಲ್ಲಿ ಪ್ರಶ್ನೆ ಕೇಳಿ, ಫಿಟ್ ಇದ್ದರೆ ತೆಗೆದುಕೊಳ್ಳುತ್ತೇನೆ, ಇಲ್ಲಾಂದ್ರೆ ಅನ್ ಫಿಟ್ ಎಂದು ಹೇಳುತ್ತೇನೆ. ನನ್ನ ಕಂಪನಿಯಲ್ಲಿ ಜಾತಿ ಮತ ಭೇದ ಇಲ್ಲದೆ ಎಲ್ಲರಿಗೂ ಕೆಲಸ ಕೊಟ್ಟಿದ್ದೇನೆ ಎಂದರು.
ತಂದೆಯವರಿಗೆ ಅಜ್ಜನ ಕಾಲದಿಂದ ಬಂದ ಜಮೀನು ಇತ್ತು. ದೊಡ್ಡ ಗುತ್ತಿನ ಮನೆಯವರಾದರೂ ಭೂಮಸೂದೆ ಕಾಲದಲ್ಲಿ ಜಮೀನು ಹೋಗಿತ್ತು. ಬಳಿಕ ಕಂಟ್ರಾಕ್ಟರ್ ಆಗಿದ್ದರೂ ಕೆಲವೊಂದು ದುರಭ್ಯಾಸದಿಂದ ಮೇಲೆ ಬರಲಾಗಲಿಲ್ಲ. ಶಾಲೆಗೆ ಹೋಗುವಾಗ ಪೆಟ್ಟು ಕೊಡುತ್ತಿದ್ದರು. ಅದೇ ಛಲದಲ್ಲಿ ಕಲಿಯುತ್ತ ಕಲಿಯುತ್ತ ಮೇಲೆ ಬಹಳ ಕಷ್ಟದಿಂದ ಮೇಲೆ ಬಂದವನು. ಸೌದಿಯಲ್ಲಿ ನೌಕರರ ಭದ್ರತೆ ವಿಚಾರದಲ್ಲಿ ತುಂಬ ಮಹತ್ವ ಕೊಡುತ್ತಾರೆ. ಅದಕ್ಕಾಗಿ ಮೂರು ವರ್ಷಕ್ಕೊಮ್ಮೆ ಪೆಟ್ರೋ ಕೆಮಿಕಲ್ಸ್ ಫ್ಯಾಕ್ಟರಿಯನ್ನು ಸರ್ವಿಸ್ ಮಾಡಿಸುತ್ತಾರೆ. ಅದರ ಕಂಟ್ರಾಕ್ಟ್ ಪಡೆದು ಟು ಝೆಡ್ ಕೆಲಸ ಮಾಡಿಸುತ್ತೇನೆ. ಇಲ್ಲಿನ ಎಂಆರ್ ಪಿಎಲ್ ಕಂಪನಿಗೂ ನಾನೇ ಹಲವು ಬಾರಿ ಬಂದು ಹೋಗಿದ್ದೇನೆ. ಚಿಮಣಿಯಿಂದ ಹಿಡಿದು ಎಲ್ಲವನ್ನೂ ಕ್ಲೀನ್ ಮಾಡಬೇಕಾಗುತ್ತದೆ.
ವಿದ್ಯೆ ಕಲಿಯಬೇಕು, ವಿದ್ಯಯಿಂದಲೇ ಎಲ್ಲ. ಇದಕ್ಕಾಗಿ ಸೌದಿಯಲ್ಲಿ ಸ್ಕೂಲ್, ಯುನಿವರ್ಸಿಟಿ ಕಟ್ಟಬೇಕು ಅನ್ನುವ ಕನಸಿದೆ. ನಮ್ಮ ಕಂಪನಿಯಲ್ಲಿ ಕೆಲಸಕ್ಕೆ ಪಡೆದವರಿಗೆ ಒಂದು ವಾರ ಟ್ರೈನಿಂಗ್ ಕೊಡುತ್ತೇವೆ. ಕಂಪನಿಯ ಪಾಲಿಸಿ, ಸೆಕ್ಯುರಿಟಿ ಬಗ್ಗೆ ತರಬೇತಿ ಇರುತ್ತದೆ ಎಂದು ಹೇಳಿದ ಝಕರಿಯಾ ಜೋಕಟ್ಟೆ, ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಪಾಸ್ ಆಗಿ ಕಂಪನಿ ಉದ್ಯೋಗ ಪಡೆದವರಿಗೆ ಅವಕಾಶ ಸಿಗುತ್ತಾ ಹೋಗುತ್ತದೆ. ಇಲ್ಲದೇ ಹೋದರೆ ಇಂಜಿನಿಯರಿಂಗ್ ಮಾಡಿ ಬೆಂಗಳೂರಿನಲ್ಲಿ 15 ಸಾವಿರ ಸಂಬಳಕ್ಕೆ ದುಡಿಯಬೇಕಾಗುತ್ತದೆ. ಅಂತಹ ಸ್ಥಿತಿ ಇಲ್ಲಿದೆ, ನಮ್ಮಲ್ಲಿ ಉತ್ತಮ ಸಂಬಳ ಇದೆ. ಜೊತೆಗೆ ಪ್ರತಿ ವರ್ಷ ಎರಡು ಬಾರಿ ಬೋನಸ್, ಇನ್ಸೆಂಟಿವ್ ಇದೆ, ಬೇರಾವುದೇ ಕಂಪನಿ ಈ ರೀತಿ ನೌಕರರನ್ನು ನೋಡಿಕೊಳ್ಳಲ್ಲ ಎಂದರು.
ನನ್ನ ಜಿಲ್ಲೆ ಅಭಿವೃದ್ಧಿ ಆಗಬೇಕು, ಶಾಂತಿ ಸೌಹಾರ್ದದಿಂದ ಬೆಳೆಯಬೇಕು. ದಾನ ಮಾಡಿ ಕೆಟ್ಟವರು ಯಾರೂ ಇಲ್ಲ. ಸತ್ಪಾತ್ರರಿಗೆ ದಾನ ಮಾಡುವುದನ್ನು ಮಾಡುತ್ತಿದ್ದೇನೆ. ಮಂಗಳೂರಿನ ಹಲವು ಫಾರಂಗಳಲ್ಲಿ ಅಧ್ಯಕ್ಷನಾಗಿದ್ದು ಸಾಮಾಜಿಕ ಕೆಲಸ ಮಾಡುತ್ತ ಬಂದಿದ್ದೇನೆ ಎನ್ನುತ್ತ ತನ್ನ ಮನದಾಳವನ್ನು ಹೇಳಿಕೊಂಡರು. ಅಷ್ಟು ದೊಡ್ಡ ಆಗರ್ಭ ಶ್ರೀಮಂತನಾಗಿದ್ದರೂ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಪತ್ರಕರ್ತರ ಜೊತೆಗೆ ಹರಟಿದ್ದು ವಿಶೇಷವಾಗಿ ಕಂಡಿತ್ತು. ಎಂಎಸ್ಇಝೆಡ್ ಮಾಜಿ ಅಧಿಕಾರಿ ರಾಮಚಂದ್ರ ಭಂಡಾರ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತರ ಸಂಘದ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿಬಿ ಹರೀಶ್ ರೈ ಇದ್ದರು.
Zakariya Jokatte, the Mangaluru-born CEO of Saudi Arabia’s renowned Al Muzain industrial group, has announced his intention to establish a Skill Development Center and, eventually, a university in Mangaluru, with the goal of bridging the gap between theoretical knowledge and practical skills among students in the region.
28-10-25 07:18 pm
Bangalore Correspondent
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm