ಬ್ರೇಕಿಂಗ್ ನ್ಯೂಸ್
20-06-25 11:04 pm Mangalore Correspondent ಕರಾವಳಿ
ಮಂಗಳೂರು, ಜೂನ್ 20 : ಇತ್ತೀಚೆಗೆ ನಡೆದ ಕುಡುಪು ಗುಂಪು ಹತ್ಯೆ ಪ್ರಕರಣ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧನ ಮಾಡಿಲ್ಲ. ಪೊಲೀಸರು ಮತ್ತು ಆರೋಪಿ ನಡುವೆ ಸಂಬಂಧ ಇರುವುದೇ ಇದಕ್ಕೆ ಕಾರಣವೆಂದು ವ್ಯಕ್ತಿಯೊಬ್ಬ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸೂಚನೆಯಂತೆ ಸಿಇಎನ್ ಪೊಲೀಸರು ಆತನನ್ನು ಕರೆಸಿ ವಾರ್ನಿಂಗ್ ಮಾಡಿದ ಪ್ರಸಂಗ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವ ವಾಮಂಜೂರು ನಿವಾಸಿ ಸಜಿತ್ ಶೆಟ್ಟಿ ಎಂಬ ವ್ಯಕ್ತಿ ಈ ಪೋಸ್ಟ್ ಮಾಡಿದ್ದು, ಪೊಲೀಸರು ಆತನನ್ನು ಕರೆಸಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನುವುದಕ್ಕೆ ಏನಾದರೂ ಸಾಕ್ಷಿ ಇದೆಯಾ ಎಂದು ಕೇಳಿದ್ದಾರೆ. ಅಲ್ಲದೆ, ಪೊಲೀಸರು ಮತ್ತು ಆರೋಪಿ ನಡುವೆ ಸಂಬಂಧ ಇದೆಯೆಂದು ಆರೋಪ ಮಾಡಿರುವ ಬಗ್ಗೆ ಕಾರಣ ಕೇಳಿದ್ದಾರೆ. ಯಾವುದೇ ಸಾಕ್ಷಿ ಇಲ್ಲದೇ ಇದ್ದರೂ ಆರೋಪ ಮಾಡಿದ್ದನ್ನು ಪ್ರಶ್ನಿಸಿದ್ದು, ಸಜಿತ್ ಶೆಟ್ಟಿ ತನ್ನ ಬಳಿ ಯಾವುದೇ ಸಾಕ್ಷ್ಯ ಇಲ್ಲದಿದ್ದರೂ ಪೋಸ್ಟ್ ಹಾಕಿದ್ದಾಗಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆ ಪಡೆದು ಎಚ್ಚರಿಕೆ ನೀಡಿ ಠಾಣೆಯಿಂದ ಬಿಟ್ಟು ಕಳುಹಿಸಲಾಗಿತ್ತು.

ಆನಂತರ, ಸಜಿತ್ ಶೆಟ್ಟಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಹೇಳಿಕೆಯನ್ನು ಪೊಲೀಸರು ಜಾಲತಾಣದಲ್ಲಿ ಹಾಕಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದ ತೀವ್ರ ಮುಖಭಂಗಕ್ಕೀಡಾದ ಸಜಿತ್ ತನಗೆ ಮಾನಸಿಕ ಕಿರುಕುಳ ಆಗಿದೆಯೆಂದು ಫೇಸ್ಬುಕ್ ಲೈವ್ ಬಂದು ವಿಡಿಯೋ ಮಾಡಿದ್ದಾನೆ. ಜಾಲತಾಣದಲ್ಲಿ ತನ್ನ ತಪ್ಪೊಪ್ಪಿಗೆ ಹೇಳಿಕೆಯ ವಿಡಿಯೋ ನೋಡಿ ಎಲ್ಲರೂ ಫೋನ್ ಮಾಡಿ ಕೇಳುತ್ತಿದ್ದಾರೆ, ತನಗೆ ತೀವ್ರ ಮಾನಸಿಕ ಟಾರ್ಚರ್ ಆಗ್ತಾ ಇದೆ, ನನ್ನನ್ನು ಠಾಣೆಗೆ ಕರೆಸಿ ಎಸಿಪಿ ಮತ್ತು ಇನ್ಸ್ ಪೆಕ್ಟರ್ ಮಾನಸಿಕ ಕಿರುಕುಳ ನೀಡಿದ್ದಾರೆ. ಇದರಿಂದ ತೀವ್ರ ವೇದನೆ ಆಗುತ್ತಿದ್ದು, ಇದರಿಂದ ತನಗೇನಾದರೂ ತೊಂದರೆಯಾದರೆ ಅದಕ್ಕೆ ಪೊಲೀಸರೇ ಹೊಣೆ, ಪೊಲೀಸ್ ಕಮಿಷನರ್ ಹೊಣೆಯೆಂದು ವಿಡಿಯೋ ಮಾಡಿ ಫೇಸ್ಬುಕ್ ಅಪ್ಲೋಡ್ ಮಾಡಿದ್ದಾನೆ.
ಈ ಬಗ್ಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಯಾವುದೇ ವ್ಯಕ್ತಿ ಅಪರಾಧ ವಿಚಾರದಲ್ಲಿ ಪೊಲೀಸರಿಗೆ ಮಾಹಿತಿ ನೀಡಬಹುದು. ಸಾಕ್ಷಿಗಳಿದ್ದಲ್ಲಿ ಪೊಲೀಸರಿಗೆ ತಿಳಿಸಿ, ಆರೋಪಿ ಪತ್ತೆಗೆ ಸಹಕರಿಸಬಹುದು. ಸಜಿತ್ ಶೆಟ್ಟಿ ಗುಂಪು ಹತ್ಯೆ ಪ್ರಕರಣದಲ್ಲಿ ಇನ್ನೊಬ್ಬ ಪ್ರಮುಖ ಆರೋಪಿಯಿದ್ದಾನೆಂದು ತಿಳಿಸಿದ ಮೇರೆಗೆ ತನಿಖಾಧಿಕಾರಿ ಆತನನ್ನು ಠಾಣೆಗೆ ಕರೆಸಿ ಏನಾದ್ರೂ ಸಾಕ್ಷ್ಯ ಇದೆಯೇ ಎಂದು ಕೇಳಿದ್ದಾರೆ. ತನಿಖಾಧಿಕಾರಿಗೆ ಯಾವುದೇ ವ್ಯಕ್ತಿಯಲ್ಲಿ ಮಾಹಿತಿ ಇದ್ದರೆ, ಅತನನ್ನು ಠಾಣೆಗೆ ಕರೆಸಿ ಹೇಳಿಕೆ ದಾಖಲಿಸುವ ಅಧಿಕಾರ ಇದೆ. ಅದರಂತೆ, ಆತನನ್ನು ಠಾಣೆಗೆ ಕರೆಸಿ ಹೇಳಿಕೆ ಪಡೆದಿದ್ದು ತನ್ನಲ್ಲಿ ಆರೋಪದ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲವೆಂದು ತಿಳಿಸಿದ್ದಾರೆ.
ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲೆ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವವರಾಗಲೀ, ಸಾರ್ವಜನಿಕ ಜೀವನದಲ್ಲಿ ಇರೋರಾಗಲೀ ಪ್ರಕರಣ ಸಂಬಂಧಿಸಿ ಮಾಹಿತಿ ಇದ್ದಲ್ಲಿ, ಪ್ರತ್ಯಕ್ಷ ಸಾಕ್ಷಿ ಏನಾದ್ರೂ ಆಗಿದ್ದಲ್ಲಿ ತನಿಖಾಧಿಕಾರಿಗೆ ಸಹಕಾರ ನೀಡಬೇಕು. ವಿನಾಕಾರಣ ಪೋಸ್ಟ್ ಮಾಡಿ ಕಾನೂನು ವಿರುದ್ಧ ನಡೆದುಕೊಂಡರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಪ್ರಕಾರ ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶ ಇದೆ. ಇವತ್ತು ಮತ್ತೆ ಅದೇ ವ್ಯಕ್ತಿ ಫೇಸ್ಬುಕ್ ನಲ್ಲಿ ವಿಡಿಯೋ ಮಾಡಿ ಮಾನಸಿಕ ಕಿರುಕುಳ ಆಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಪೊಲೀಸರು ತಮ್ಮ ವ್ಯಾಪ್ತಿಯ ಎಲ್ಲ ಸಾರ್ವಜನಿಕರ ಹಿತವನ್ನು ಕಾಪಾಡುವ ಸ್ಥಾನದಲ್ಲಿರುವುದರಿಂದ ಈ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಈ ವ್ಯಕ್ತಿ ಮಾನಸಿಕ ತೊಂದರೆ ಎದುರಿಸುತ್ತಿದ್ದರೆ ಕೂಡಲೇ ಮಾನಸಿಕ ತಜ್ಞರನ್ನು ಕಂಡು ಕೌನ್ಸಿಲಿಂಗ್ ಮತ್ತು ಚಿಕಿತ್ಸೆ ಪಡೆದುಕೊಂಡರೆ ಉತ್ತಮ ಎಂದು ಸಲಹೆ ಮಾಡಿದ್ದಾರೆ.
In a recent development related to the Kudupu group murder case, a Facebook post by a local youth alleging a possible nexus between police officials and a prime accused has stirred controversy. The post, made by Sajith Shetty, a resident of Vamanjoor and known Congress supporter, claimed that the police were deliberately delaying the arrest due to internal connections.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm