ಬ್ರೇಕಿಂಗ್ ನ್ಯೂಸ್
20-06-25 07:10 pm Mangalore Correspondent ಕರಾವಳಿ
ಮಂಗಳೂರು, ಜೂನ್ 20 : ಕೆಲವೊಂದು ಐಷಾರಾಮಿ ಕಾರುಗಳು ಎಷ್ಟು ವೇಗದಲ್ಲಿ ಹೋದರೂ, ವ್ಯತ್ಯಾಸ ಗೊತ್ತಾಗಲ್ಲ. ಹಾಗಂತ, ಕುಡಿದ ಮತ್ತಿನಲ್ಲಿ 200 ಕಿಮೀ ವೇಗದಲ್ಲಿ ಕಾರು ಓಡಿಸಿದರೆ ಹೇಗಾಗಬೇಡ. ಮಂಗಳೂರಿನಲ್ಲಿ ನಡುರಾತ್ರಿ ಇಂಥದ್ದೇ ಅತಿ ವೇಗದ ಹುಚ್ಚಾಟ ಇಬ್ಬರು ಹದಿಹರೆಯದ ಯುವಕರನ್ನು ದುರಂತ ಸಾವಿನ ಕೂಪಕ್ಕೆ ನೂಕಿದೆ.
ಮಂಗಳೂರು ಹೊರವಲಯದ ಜಪ್ಪಿನಮೊಗರು ಹೆದ್ದಾರಿಯಲ್ಲಿ ತಡರಾತ್ರಿ ನಡೆದ ಅಪಘಾತಕ್ಕೆ ಅತಿ ವೇಗ ಮತ್ತು ಕುಡಿತದ ನಶೆಯೇ ಕಾರಣ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಈ ವೇಳೆ, ಫೋಕ್ಸ್ ವೇಗನ್ ವರ್ಟಸ್ ಕಾರು ಎಷ್ಟು ವೇಗದಲ್ಲಿ ಓಡಿಸಿದ್ರೂ ಏನೂ ಆಗಲ್ಲ ಎಂದು ಎರ್ರಾಬಿರ್ರಿ ಓಡಿಸಿದ್ದಾರೆ. ಕೇರಳ ಗಡಿಭಾಗ ತಲಪಾಡಿಯಲ್ಲಿ ನಡುರಾತ್ರಿ ಪಾರ್ಟಿ ಮುಗಿಸಿ, ಯುವಕರು ಮಂಗಳೂರಿನತ್ತ ಧಾವಿಸಿ ಬರುತ್ತಿದ್ದಾಗ ಭೀಕರ ಅಪಘಾತ ನಡೆದಿದೆ. ಅಪಘಾತಕ್ಕೂ ಮುನ್ನ ಕಾರಿನಲ್ಲಿ ಬರುತ್ತಿದ್ದಾಗ ಗಂಟೆಗೆ 192ರ ವೇಗದಲ್ಲಿ ಕಾರು ಚಲಾಯಿಸುತ್ತಿರುವುದನ್ನು ಯುವಕರು ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಕುಡಿತದ ನಶೆಯಲ್ಲಿ ತೇಲಾಡುತ್ತ ಬಂದಿದ್ದರು. ಇವರ ಅತಿ ವೇಗವೇ ಅನಾಹುತಕ್ಕೆ ಕಾರಣವಾಗಿದ್ದು, ಜಪ್ಪಿನಮೊಗರಿನಲ್ಲಿ ಹೆದ್ದಾರಿ ಪಕ್ಕದ ಕಿರುಸೇತುವೆಯ ತುದಿಗೆ ಡಿಕ್ಕಿಯಾಗಿದೆ.





ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ಅಮನ್ ರಾವ್ ಮತ್ತು ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್ ಎಸ್ ಯುಐ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ ಎಂಬಿಬ್ಬರು ಯುವಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಡಿಕ್ಕಿಯ ತೀವ್ರತೆ ಎಷ್ಟಿತ್ತು ಎಂದರೆ, ಪಕ್ಕದ ಕಟ್ಟಡದ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದರೂ ಕಣ್ಣು ಮಿಟುಕಿಸುವಷ್ಟರಲ್ಲಿ ಢಮಾರ್ ಎನ್ನುತ್ತ ಕಾರು ಹಾದು ಹೋಗಿತ್ತು. ಅತಿ ರಭಸದಿಂದ ಡಿಕ್ಕಿಯಾಗಿದ್ದರಿಂದ ಕಾರಿನ ಮುಂಭಾಗದ ಇಂಜಿನ್ ಹೊರಗೆ ಬಂದಿದ್ದು, ಒಳಗಿನ ಏರ್ ಬ್ಯಾಗ್ ಕೂಡ ಕಿತ್ತುಹೋಗಿದೆ.
ಘಟನೆಗೆ ಅತಿ ವೇಗ ಮತ್ತು ಕುಡಿತದ ನಶೆಯೇ ಕಾರಣವೆಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಕೇಸು ದಾಖಲಿಸಿದ್ದಾರೆ. ಇದಲ್ಲದೆ, ಅತಿ ವೇಗದ ಚಾಲನೆ ಮತ್ತು ಕುಡಿದು ವಾಹನ ಚಲಾಯಿಸುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದ್ದು, ಸಾರ್ವಜನಿಕರು ಎಚ್ಚರದಲ್ಲಿ ವಾಹನ ಚಲಾಯಿಸುವಂತೆ ಸಲಹೆ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮಂಗಳೂರಿನಲ್ಲಿ 75 ರಸ್ತೆ ಅಪಘಾತಗಳಾಗಿದ್ದು, 70 ಪ್ರಕರಣ ಅತಿ ವೇಗದ ವಾಹನ ಚಾಲನೆಯ ಕಾರಣದಿಂದಲೇ ಆಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಇದಲ್ಲದೆ, ಕುಡಿದು ವಾಹನ ಚಲಾಯಿಸಿದರೆ ಹತ್ತು ಸಾವಿರದ ವರೆಗೆ ದಂಡ ವಿಧಿಸಲು ಅವಕಾಶ ಇದೆ, ರ್ಯಾಶ್ ಡ್ರೈವಿಂಗ್ ಮಾಡಿದ್ರೂ ದುಬಾರಿ ದಂಡ ವಿಧಿಸಬಹುದು. ಇದಕ್ಕೆ ಅವಕಾಶ ಕೊಡದೆ ಸೇಫ್ ಆಗಿ ಕಾರು, ಬೈಕ್ ಚಲಾಯಿಸಿ, ನಿಮ್ಮ ಜೀವ ಕಾಪಾಡಿಕೊಳ್ಳಿ, ವಾಹನ ಚಲಾಯಿಸುವಾಗ ನಿಮ್ಮನ್ನು ಹೊಂದಿದವರು ಮನೆಯಲ್ಲಿ ಇರುತ್ತಾರೆಂಬ ಗಮನ ಇಟ್ಟುಕೊಳ್ಳಿ ಎಂದು ಸಾರ್ವಜನಿಕರಿಗೆ ಪೊಲೀಸರು ಸಲಹೆ ಮಾಡಿದ್ದಾರೆ.
A tragic road accident claimed the lives of two young men in the early hours of Thursday near Jappinamogaru on the outskirts of Mangaluru. The accident was reportedly caused by drunk driving and overspeeding, with the vehicle clocking a staggering 192 km/h at the time of the crash.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm