ಬ್ರೇಕಿಂಗ್ ನ್ಯೂಸ್
11-06-25 01:34 pm Mangalore Correspondent ಕರಾವಳಿ
ಮಂಗಳೂರು, ಜೂನ್ 11 : ಈ ಸಲ ಮಳೆಯಿಂದಾಗಿ ಶಾಲಾರಂಭ ಆಗಿದ್ದೇ ನಾಲ್ಕು ದಿನಗಳ ಬಳಿಕ. ಆದರೆ ಇಲ್ಲೊಂದು ಶಾಲೆಗೆ ಶಾಲಾರಂಭದ ಭಾಗ್ಯವೇ ಒದಗಿಬಂದಿಲ್ಲ. ಕಟ್ಟಡ ನಿರ್ಮಾಣ ಕಾರ್ಯ ಮುಗಿದ ಬಳಿಕ ಶಾಲೆಗೆ ಬನ್ನಿ ಎಂದು ರಜೆ ಕೊಟ್ಟು ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು ಹೆತ್ತವರು ಟೆನ್ಷನ್ ಗೆ ಸಿಲುಕಿದ್ದಾರೆ. ಇದು ಉಳ್ಳಾಲ ತಾಲೂಕಿನ ಬೋಳಿಯಾರ್ ಗ್ರಾಮದ ಮೌಲಾನಾ ಆಝಾದ್ ಮಾದರಿ ಶಾಲೆಯ (ಆಂಗ್ಲ ಮಾಧ್ಯಮ) ಕಥೆ!
ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಬೋಳಿಯಾರ್ ಗ್ರಾಮದ ಜಾರದಗುಡ್ಡದಲ್ಲಿ ಮೌಲಾನಾ ಆಝಾದ್ ಮಾದರಿ ಶಾಲೆ(ಆಂಗ್ಲ ಮಾಧ್ಯಮ) ಕಳೆದ ವರ್ಷ ಆರಂಭಿಸಲಾಗಿತ್ತು. ಇಲ್ಲಿ 6ರಿಂದ 10ನೇ ತರಗತಿಯ ವರೆಗೆ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಬೋಳಿಯಾರ್ ಗ್ರಾಮದಲ್ಲಿ ಸೂಕ್ತ ಸರ್ಕಾರಿ ಜಮೀನಿನ ಕೊರತೆಯಿದ್ದ ಹಿನ್ನೆಲೆಯಲ್ಲಿ ಜಾರದಗುಡ್ಡ ಮಸೀದಿಯ ಅಧೀನದಲ್ಲಿದ್ದ ಜಮೀನಿನಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಕಟ್ಟಡ ನಿರ್ಮಾಣ ಕೆಲಸ ಆರಂಭಿಸಿದ್ದು ನಿರ್ಮಿತಿ ಕೇಂದ್ರದಿಂದ ಗುತ್ತಿಗೆ ಪಡೆದು ಉಪ ಗುತ್ತಿಗೆಗೆ ನೀಡಲಾಗಿತ್ತು. ಕಳೆದ ವರ್ಷ ಆರನೇ ತರಗತಿಗೆ ಪ್ರವೇಶ ಆರಂಭಿಸಿದಾಗ ಸ್ಥಳೀಯ ಹತ್ತು ಮಕ್ಕಳು ಸೇರ್ಪಡೆಗೊಂಡಿದ್ದರು.




ಆಶ್ರಯ ನೀಡಿದ್ದ ಸರ್ಕಾರಿ ಶಾಲೆಯಲ್ಲೂ ಸಮಸ್ಯೆ!
ಕಳೆದ ವರ್ಷ ಆರನೇ ತರಗತಿಗೆ ಹತ್ತು ಮಕ್ಕಳು ಪ್ರವೇಶ ಪಡೆದರೂ ವ್ಯವಸ್ಥೆ ಆಗಿರದ ಕಾರಣ ಸನಿಹದಲ್ಲೇ ಇರುವ ಸರ್ಕಾರಿ ಶಾಲೆಯ ಒಂದು ಕಟ್ಟಡದಲ್ಲಿ ತರಗತಿ ನಡೆಸಲಾಗಿತ್ತು. ಈ ವರ್ಷ ಕಟ್ಟಡ ಕಾಮಗಾರಿ ಮುಗಿಯಲಿದೆ ಎನ್ನುವ ನೆಲೆಯಲ್ಲಿ ಆರನೇ ತರಗತಿ ಜೊತೆ ಏಳು ಮತ್ತು ಎಂಟನೇ ತರಗತಿಗೂ ಪ್ರವೇಶ ನೀಡುವ ನಿಟ್ಟಿನಲ್ಲಿ ಇಲಾಖೆಯಿಂದ ವಿವಿಧ ಕಡೆಗಳಲ್ಲಿ ಫ್ಲೆಕ್ಸ್ ಅಳವಡಿಸಿ ಪ್ರಚಾರ ಮಾಡಲಾಗಿತ್ತು. ಇದರ ಫಲವಾಗಿ ಈ ವರ್ಷ ಮೂರು ತರಗತಿಗಳಿಗೆ 70 ಮಕ್ಕಳು ಸೇರ್ಪಡೆಗೊಂಡಿದ್ದಾರೆ.
ಆದರೆ ಕಟ್ಟಡ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗಿದೆ. ಇನ್ನೂ ಒಂದು ಮಹಡಿಯ ಕಟ್ಟಡ ಆಗಿದ್ದು ತಳ ಅಂತಸ್ತಿನಲ್ಲಿ ಮತ್ತು ಮೊದಲ ಅಂತಸ್ತಿನಲ್ಲಿ ತಲಾ ನಾಲ್ಕು ಕೊಠಡಿಗಳು ನಿರ್ಮಾಣ ಆಗುತ್ತಿದೆ. ಜೊತೆಗೆ ಅಡುಗೆ ಕೋಣೆ, ಶೌಚಗೃಹ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಈ ವರ್ಷವೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸರ್ಕಾರಿ ಶಾಲೆಯಲ್ಲೆ ತರಗತಿಗಳನ್ನು ನಡೆಸಲು ಯೋಚಿಸಲಾಗಿತ್ತು. ಆದರೆ ಈ ಶಾಲೆ ಹೆಂಚಿನದ್ದಾಗಿದ್ದು ಶಿಥಿಲಾವಸ್ಥೆಯಲ್ಲಿದೆ. ಮಳೆ ಬಂದಾಗ ಸೋರುತ್ತಿದೆ. ಅಲ್ಲದೆ, 70 ಮಕ್ಕಳಿಗೆ ಊಟೋಪಚಾರದ ವ್ಯವಸ್ಥೆ ಮಾಡಲು ವ್ಯವಸ್ಥೆ ಇಲ್ಲದ ಕಾರಣ ತರಗತಿಗಳನ್ನು ನಡೆಸಲು ಸಾಧ್ಯವಾಗದೆ ಮಕ್ಕಳಿಗೆ 15 ದಿನ ರಜೆ ನೀಡಿ ಮನೆಗೆ ಕಳಿಸಲಾಗಿದೆ. ಎಲ್ಲಾ ಕಡೆ ಶಾಲಾರಂಭಗೊಂಡರೂ ಮೌಲಾನಾ ಆಝಾದ್ ಮಾದರಿ ಶಾಲೆ ಆರಂಭಗೊಳ್ಳದ ಕಾರಣ ಮಕ್ಕಳ ಭವಿಷ್ಯ ಅತಂತ್ರವಾಗಿದ್ದು ಪೋಷಕರು ಚಿಂತಿತರಾಗಿದ್ದಾರೆ.
ಒಬ್ಬೊಬ್ಬರದ್ದು ಒಂದೊಂದು ಭರವಸೆ!
ಶಾಲಾರಂಭದ ಬಗ್ಗೆ ಪೋಷಕರು ಕೇಳುವ ಪ್ರಶ್ನೆಗಳಿಗೆ ಒಬ್ಬೊಬ್ಬರು ಒಂದೊಂದು ರೀತಿಯ ಭರವಸೆ ನೀಡುತ್ತಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್, ನಾಲ್ಕೈದು ದಿನಗಳಲ್ಲಿ ಶಾಲೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಗುತ್ತಿಗೆ ಸಂಸ್ಥೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡಿದರೆ ಒಂದೂವರೆ ತಿಂಗಳಲ್ಲಿ ಕೆಲಸ ಮುಗಿಯಲಿದೆ ಎಂದು ಗುತ್ತಿಗೆದಾರನತ್ತ ಬೆರಳು ತೋರಿಸಿದ್ದಾರೆ.
ಹೀಗಿದ್ದರೂ, ಕಟ್ಟಡ ಕಾಮಗಾರಿ ಮುಗಿಸಿ ಜೂನ್ 15ರ ವೇಳೆಗೆ ಶಾಲೆ ಆರಂಭಿಸುತ್ತೇವೆಂದು ಅಧಿಕಾರಿ ವರ್ಗ ಹೇಳುತ್ತಿದ್ದಾರೆ. ಆದರೆ ಕಾಮಗಾರಿ ನೋಡಿದಾಗ ತಳ ಅಂತಸ್ತಿನಲ್ಲೇ ಅರೆಬರೆ ಕಾಮಗಾರಿ ನಡೆದಿದೆ. ಕಿಟಕಿ, ಬಾಗಿಲು ಅಳವಡಿಸಿಲ್ಲ. ನೆಲಕ್ಕೆ ಅರೆಬರೆ ಟೈಲ್ಸ್ ಹಾಕಲಾಗಿದೆ, ವಿದ್ಯುತ್ ಸಂಬಂಧಿತ ಕೆಲಸ ಆಗಿಲ್ಲ, ಅಡುಗೆ ಕೋಣೆ, ಶೌಚಗೃಹ ಕೆಲಸವೂ ಅರ್ಧದಲ್ಲಿದೆ. ಇದರಿಂದಾಗಿ ಪೋಷಕರು ಭರವಸೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ವಿಳಂಬದ ಬಗ್ಗೆ ಈಗಾಗಲೇ ನಿರ್ಮಿತಿ ಕೇಂದ್ರದ ಇಂಜಿನಿಯರ್ ರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದು ಜೂನ್ 15ಕ್ಕೆ ಮೊದಲು ಬಿಟ್ಟು ಕೊಡುವಂತೆ ಹೇಳಿದ್ದೇವೆ. ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ದೂರು ನೀಡಲಾಗುವುದು ಎಂದು ತಾಪಂ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್ ಹೇಳಿದ್ದಾರೆ.
While schools across Karnataka reopened last week, students of the Maulana Azad Model School (English Medium) in Boliyaar village, Ullal taluk, are still waiting for classes to begin. Owing to incomplete construction of the school building, the management has granted leave to the students, triggering concern among parents about their children's disrupted education
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
29-10-25 03:57 pm
Mangalore Correspondent
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
Smart City, Kadri Park Road: ಕದ್ರಿ ಪಾರ್ಕ್ ರಸ್...
28-10-25 08:36 pm
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
29-10-25 02:53 pm
Mangalore Correspondent
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm