ಬ್ರೇಕಿಂಗ್ ನ್ಯೂಸ್
07-06-25 05:37 pm Mangalore Correspondent ಕರಾವಳಿ
ಮಂಗಳೂರು, ಜೂನ್ 7 : ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಘಟನೆಗೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಅದೇ ಕಾಲೇಜಿನ ಪಿಜಿ ವಿದ್ಯಾರ್ಥಿನಿಯೊಬ್ಬಳನ್ನು ವಶಕ್ಕೆ ಪಡೆದಿದ್ದಾರೆ. ಬಾಂಬ್ ಬೆದರಿಕೆ ಬಗ್ಗೆ ದೂರು ನೀಡಿದವಳೇ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಭಾರತ ಮೂಲದ ಚಲಸಾನಿ ಮೋನಿಕಾ ಚೌಧರಿ ವಶಕ್ಕೆ ಪಡೆದ ವಿದ್ಯಾರ್ಥಿನಿಯಾಗಿದ್ದು ಈಕೆ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದಳು. ಮೇ 4ರಂದು ಪಿಜಿ ವಿಷಯದಲ್ಲಿ ಸೆಮಿನಾರ್ ಮಂಡನೆ ಮಾಡುವುದಕ್ಕೆ ಟಾಸ್ಕ್ ಕೊಡಲಾಗಿತ್ತು. ಸೆಮಿನಾರ್ ತಪ್ಪಿಸುವುದಕ್ಕಾಗಿ ಮೋನಿಕಾ ಚೌಧರಿ ಅದೇ ದಿನ ಬೆಳಗ್ಗೆ ಬಾಂಬ್ ಬೆದರಿಕೆ ಬಂದಿರುವುದಾಗಿ ಕಾಲೇಜು ಸಿಬಂದಿಗೆ ಸುಳ್ಳು ಹೇಳಿದ್ದಳು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.


ತನ್ನ ಮೊಬೈಲಿಗೆ ನಾಲ್ಕೈದು ಬಾರಿ ಕರೆ ಮಾಡಿ ಯಾರೋ ಬೆದರಿಕೆ ಒಡ್ಡಿದ್ದಾರೆಂದು ಹೇಳಿದ್ದಳು. ಆನಂತರ, ಕಾಲೇಜು ಆಡಳಿತದ ಸೂಚನೆಯಂತೆ ಉಳ್ಳಾಲ ಠಾಣೆಗೆ ದೂರು ನೀಡಲಾಗಿತ್ತು. ಈಕೆಗೆ ಫೋನ್ ಕರೆ ಬಂದಿದ್ದರಿಂದ ವಿದ್ಯಾರ್ಥಿನಿಯನ್ನೇ ದೂರುದಾರಳೆಂದು ಗುರುತಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ಘಟನೆ ಬಗ್ಗೆ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು.
ಪೊಲೀಸರು ವಿದ್ಯಾರ್ಥಿನಿಯನ್ನು ತನಿಖೆ ನಡೆಸಿದಾಗ ಪೂರಕ ಲಭಿಸದ್ದರಿಂದ ಆಕೆಯ ಬಗ್ಗೆಯೇ ತನಿಖೆ ನಡೆಸಲಾಗಿತ್ತು. ಆಕೆ ಅಲ್ಲಿಯೇ ಪಿಜಿ ವ್ಯಾಸಂಗ ನಡೆಸುತ್ತಿರುವುದು ಮತ್ತು ಅದೇ ದಿನ ಸೆಮಿನಾರ್ ಇದ್ದ ಮಾಹಿತಿಯೂ ಲಭಿಸಿತ್ತು.
ಸೆಮಿನಾರ್ ಹಿಂದೆ ಹಾಕಲಿಕ್ಕಾಗಿ ಹೈದರಾಬಾದಿನ ಸ್ನೇಹಿತನ ಮೊಬೈಲ್ ಗೆ ಆಸ್ಪತ್ರೆಯ ಸ್ಥಿರ ದೂರವಾಣಿಗೆ ಕರೆ ಮಾಡುವಂತೆ ಮೆಸೇಜ್ ಹಾಕಿದ್ದಳು. ಮೆಸೇಜ್ ನೋಡಿ ಸ್ನೇಹಿತ ಕರೆ ಮಾಡಿದ್ದಾನೆ. ಆಸ್ಪತ್ರೆಯ ಸಿಬ್ಬಂದಿಗಳು ಯಾರ ಕರೆ ಎಂದು ಕೇಳಿದಾಗ ಬಾಂಬ್ ಬೆದರಿಕೆ ಎಂದು ಗುಳ್ಳೆಬ್ಬಿಸಿದ್ದಾಳೆ. ಆಕೆಯೇ ಉಳ್ಳಾಲ ಠಾಣೆಗೆ ದೂರು ನೀಡಿದ್ದಾಳೆ. ಕರೆ ಮಾಡಿದ ಸ್ನೇಹಿತ ಹೈದರಾಬಾದಿನಲ್ಲಿ ಐಟಿ ಕಂಪನಿ ಉದ್ಯೋಗಿಯಾಗಿದ್ದು ಆತನಿಗೆ ಯಾವುದೇ ವಿಚಾರ ತಿಳಿದಿಲ್ಲ ಎಂದು ಪೊಲೀಸರ ಕಡೆಯಿಂದ ತಿಳಿದುಬಂದಿದೆ.
ಸುಳ್ಳು ಮಾಹಿತಿ ನೀಡಿದ್ದಾಗಿ ವಿದ್ಯಾರ್ಥಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಕಣಚೂರು ಆಸ್ಪತ್ರೆಯಲ್ಲಿ ಶೋಧ ನಡೆಸಿದ್ದರು. ಶೋಧ ಬಳಿಕ ಯಾವುದೇ ಸುಳಿವು ಸಿಗದ ಕಾರಣ ಹುಸಿ ಬಾಂಬ್ ಎಂದು ಸಾಬೀತಾಗಿತ್ತು.
Mangalore PG Student Arrested for Fake Bomb Threat at Kanachur Medical College, Police Say She Made the Call to Avoid Seminar.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm